More

    ಬದುಕಿರುವಾಗಲೇ ಸಾಯಿಸಿ ಖ್ಯಾತ ಕೊರಿಯೋಗ್ರಾಫರ್ ಶೇಖರ್​ ಮಾಸ್ಟರ್​ಗೆ ಶಾಕ್​ ನೀಡಿದ ಗೂಗಲ್​!

    ಹೈದರಾಬಾದ್​: ಶೇಖರ್​ ಮಾಸ್ಟರ್​ ಟಾಲಿವುಡ್​ನ​​ ಟಾಪ್ ಕೊರಿಯೋಗ್ರಾಫರ್. ಸ್ಟಾರ್​ ಹೀರೋಗಳಿಗೆ ಡ್ಯಾನ್ಸ್​ ಹೇಳಿಕೊಟ್ಟಿರುವ ಶೇಖರ್,​ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ಹಾಗೂ ಎಲ್ಲರಿಗೂ ಪರಿಚಿತರಾಗಿರುವ ಖ್ಯಾತ ಕೊರಿಯೋಗ್ರಾಫರ್. ಇದೀಗ ಅವರಿಗೆ ಗೂಗಲ್​ ಶಾಕ್​ ನೀಡಿದೆ.​

    ಗೂಗಲ್​ನಲ್ಲಿ ಶೇಖರ್​ ಮಾಸ್ಟರ್​ ಎಂದು ಸರ್ಚ್​ ಮಾಡಿದರೆ, ವಿಕಿಪೀಡಿಯದಲ್ಲಿ ಅವರ ಜನ್ಮ ದಿನಾಂಕ 1963 ಎಂದು ತೋರಿಸುತ್ತದೆ. ಇಷ್ಟೇ ಇದ್ದಿದ್ದರೆ ಏನಾಗುತ್ತಿರಲಿಲ್ಲ. ಆದರೆ, ಮರಣ ದಿನಾಂಕವನ್ನು ಗೂಗಲ್​ ಪ್ರಕಟಿಸಿದೆ. 2003 ಜುಲೈ 8ರಂದು ಮೃತರಾದರು ಎಂದು ಉಲ್ಲೇಖಿಸಿದೆ. ಆದರೆ, ಶೇಖರ್​ ಮಾಸ್ಟರ್​ ಇನ್ನೂ ಗಟ್ಟಿಮುಟ್ಟಾಗಿ ಇದ್ದಾರೆ.

    ತಮಿಳುನಾಡು ಮೂಲದ ಬಾಲ್ಯ ನಟರಾಗಿದ್ದ ಜೀವಿ ಶೇಖರ್ ಇಂದು ಮಾಸ್ಟರ್​ ಶೇಖರ್​ ಆಗಿ ಕೊರಿಯೋಗ್ರಫಿಯಲ್ಲಿ ಹೆಸರು ಮಾಡಿದ್ದಾರೆ. ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ತುಂಬಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

    ಇದೀಗ ವಿಕಿಪೀಡಿಯದಲ್ಲಿ ತಪ್ಪಾಗಿ ಅಪ್​ಲೋಡ್​ ಮಾಡಿದ್ದು, ಅದನ್ನು ನೋಡಿದ ಅಭಿಮಾನಿಗಳಿಗೆ ದಿಗ್ಭ್ರಮೆಯಾಗಿದೆ. ಗೂಗಲ್​ ಮಾಡಿರುವ ಎಡವಟ್ಟಿನಿಂದ ಶೇಖರ್​ ಮಾಸ್ಟರ್​ ಸಹ ಕಂಗಾಲಾಗಿದ್ದಾರೆ. ಗೂಗಲ್​ ಅಪ್​ಡೇಟ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. (ಏಜೆನ್ಸೀಸ್​)

    ‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

    ಮೊದಲು ಪರಿಹಾರ ನೀಡಿ, ಬಳಿಕ ವಸೂಲಿ ಮಾಡಿ: ವಿಮಾ ಸಂಸ್ಥೆಗೆ ಹೈಕೋರ್ಟ್‌ ಆದೇಶ

    ಜುಲೈ 24ಕ್ಕೆ ಭೂಮಿ ಸಮೀಪಕ್ಕೆ ಕ್ಷುದ್ರಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts