More

    ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

    ಹೈದರಾಬಾದ್​: ಡಿವೋರ್ಸ್​ ಪಡೆದುಕೊಂಡ ಹಲವು ತಿಂಗಳ ಬಳಿಕ ನಟಿ ಸಮಂತಾ, ಮಾಜಿ ಪತಿ ನಾಗಚೈತನ್ಯ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಒಂದು ಕ್ಷಣ ಅಚ್ಚರಿಗೆ ದೂಡಿದ್ದಾರೆ.

    ಇನ್​ಸ್ಟಾಗ್ರಾಂನಲ್ಲಿ ಮಜಿಲಿ ಚಿತ್ರದ ಪೋಸ್ಟ್​ ಶೇರ್​ ಮಾಡುವ ಮೂಲಕ ಸಮಂತಾ ಅಭಿಮಾನಿಗಳಿಗೆ ಶಾಕ್​ ನೀಡಿದರು. ನಾಗಚೈತನ್ಯ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಜಿಲಿ ಚಿತ್ರ ನಿನ್ನೆ (ಏ.6) 3 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಮಂತಾ ಮಜಿಲಿ ಚಿತ್ರದ ಪೋಸ್ಟರ್​ ಅನ್ನು ಶೇರ್​ ಮಾಡಿಕೊಂಡಿದ್ದರು.

    ಶಿವ ನಿರ್ವಾಣ ನಿರ್ದೇಶನದ ಮಜಿಲಿ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಮದುವೆಯಾದ ಎರಡು ವರ್ಷದ ಬಳಿಕ ಒಟ್ಟಿಗೆ ನಟಿಸಿದ ಚಿತ್ರ ಇದಾಗಿದ್ದು, ಈ ಚಿತ್ರದ ಬಳಿಕ ಈ ಜೋಡಿಯ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಹಲವು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಅನೋನ್ಯವಾಗಿರುವಾಗಲೇ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿ ಕಳೆದ ವರ್ಷ ಅಕ್ಟೋಬರ್​ 2ರಂದು ಜಂಟಿ ಹೇಳಿಕೆಯ ಮೂಲಕ ಇಬ್ಬರೂ ತಮ್ಮ ಡಿವೋರ್ಸ್​ ಅನ್ನು ಘೋಷಿಸಿದರು. ಇದು ಅವರ ಅಭಿಮಾನಿಗಳಿಗೂ ಇಂದಿಗೂ ನಂಬಲಾಗದ ಅತಿ ದೊಡ್ಡ ಶಾಕ್​ ಆಗಿದೆ.

    ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

    ಇಬ್ಬರೂ ಬೇರೆಯಾದ ನಂತರ, ಸಮಂತಾ ಅವರು ನಾಗಚೈತನ್ಯ ಅವರ ಚಿತ್ರವನ್ನು ಹಂಚಿಕೊಂಡಿರುವುದು ಇದೇ ಮೊದಲು. ವಿಚ್ಛೇದನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನಾಗಚೈತನ್ಯರನ್ನು ಸಮಂತಾ ಅನ್‌ಫಾಲೋ ಮಾಡಿದ್ದಾರೆ ಮತ್ತು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಿಂದ ನಾಗಚೈತನ್ಯರ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. 10 ವರ್ಷಗಳ ಸ್ನೇಹದ ನಂತರ 2017 ರಲ್ಲಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, 4 ವರ್ಷಕ್ಕೆ ಇಬ್ಬರ ದಾಂಪತ್ಯ ಜೀವನ ಅಂತ್ಯವಾಗಿದೆ. (ಏಜೆನ್ಸೀಸ್​)

    ಹೆಣ್ಣು ಮಗು ಜನಿಸಿದ ಖುಷಿ: ಹೆಲಿಕಾಪ್ಟರ್​ ಮೂಲಕ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡ ತಂದೆ!

    ಅಕಟಕಟ ಚಿತ್ರಕ್ಕೆ ಚೈತ್ರಾ ಆಚಾರ್; ತಾಯಿ-ಮಗನ ಸೆಂಟಿಮೆಂಟ್ ಚಿತ್ರ

    17ರ ಬಳಿಕ ಕ್ಲೈಮ್ಯಾಕ್ಸ್: ವರಿಷ್ಠರು-ಸಂಘದ ಪ್ರಮುಖರ ಚರ್ಚೆ ನಂತರವೇ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts