More

    ರೈಲ್ವೆ ಹಳಿ ಮೇಲೆ ಬಿದ್ದ ವ್ಯಕ್ತಿಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ: ವೈರಲ್​ ವಿಡಿಯೋಗೆ ಮೆಚ್ಚುಗೆ ಮಹಾಪೂರ

    ಬೆಂಗಳೂರು: ರೈಲು ಬರುವ ಕೆಲವೇ ನಿಮಿಷಗಳಲ್ಲಿಯೇ ಹಳಿಗಳ ಮೇಲೆ ಜಾರಿ ಬಿದ್ದ ವ್ಯಕ್ತಿಯ ಜೀವವನ್ನು ಆರ್‌ಪಿಎಫ್ ಸಿಬ್ಬಂದಿ ಕಾಪಾಡಿದ ಘಟನೆ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ. ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯ, ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಂತಾಗಿದೆ.

    ಈ ವಿಡಿಯೋವನ್ನು ರೈಲ್ವೆ ಸಚಿವಾಲಯವು ಕೂ ಮಾಡಿದ್ದು, ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದ ವ್ಯಕ್ತಿಯ ಅತ್ಯಮೂಲ್ಯ ಜೀವ ಉಳಿದಂತಾಗಿದೆ ಎಂದು ಹೇಳಿದೆ.

    ವಿಡಿಯೋದಲ್ಲಿ ಏನಿದೆ?
    ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿ ಪ್ರಕಾರ, ವ್ಯಕ್ತಿಯೊಬ್ಬ ಕಾಲು ಜಾರಿ ರೈಲ್ವೆ ಹಳಿ ಪಕ್ಕದಲ್ಲಿ ಬೀಳುತ್ತಾನೆ. ಆತ ಫ್ಲಾಟ್ ಫಾರ್ಮ್ ಏರಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗದೆ ಬೀಳುತ್ತಾನೆ. ಫ್ಲಾಟ್ ಫಾರ್ಮ್ ಮೇಲೆ ಇದ್ದ ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಮತ್ತು ಮುಂದಿನ ಫ್ಲಾರ್ಟ್ ಫಾಮ್ ಮೇಲೆ ಇದ್ದ ಸಿಬ್ಬಂದಿ ಓಡಿ ಬಂದು ಅವರನ್ನು ಮೇಲಕೆತ್ತುತ್ತಾರೆ. ತದನಂತರ ಕೆಲವೇ ಕ್ಷಣಗಳಲ್ಲಿ ರೈಲು ರೈಲ್ವೆ ನಿಲ್ದಾಣ ತಲುಪುತ್ತದೆ.

    ರೈಲ್ವೆ ಹಳಿ ಮೇಲೆ ಬಿದ್ದ ವ್ಯಕ್ತಿಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ: ವೈರಲ್​ ವಿಡಿಯೋಗೆ ಮೆಚ್ಚುಗೆ ಮಹಾಪೂರ

    ಸುಖಾಸುಮ್ಮನೆ ವಾಹನ ತಡೆಯದಂತೆ ಜಿಲ್ಲಾ ಎಸ್‌ಪಿಗಳಿಗೆ ಡಿಜಿಪಿ ಪ್ರವೀಣ್​ ಸೂದ್​ ಸೂಚನೆ

    ಸೋನಿಯಾ ಸೂತ್ರಧಾರಿ ಪಟೇಲ್, ತೀಸ್ತಾ ಪಾತ್ರಧಾರಿ?: ಮೋದಿ ವಿರುದ್ಧ ಅಹ್ಮದ್ ಪಟೇಲ್ ಸಂಚು ಎಂದ ಎಸ್​ಐಟಿ

    ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts