More

    ಸೆಕ್ಸ್​ ಮೌಂಟೇನ್ ಹಿಂದಿದೆ ಶಾಕಿಂಗ್​ ಸ್ಟೋರಿ: ಇಲ್ಲಿಗೆ ಬಂದವ್ರು ಅಪರಿಚಿತರ ಜತೆ ಸಂಭೋಗ ನಡೆಸಲೇಬೇಕಂತೆ!

    ಜಕಾರ್ತ: ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತಿ ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ.

    ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಇರುವ ಮೌಂಟ್​ ಕೆಮುಕಸ್​ ಬೆಟ್ಟದ ಆಚರಣೆಯ ಬಗ್ಗೆ ತಿಳಿದರೆ ನಿಮಗೆ ಖಂಡಿತ ಅಚ್ಚರಿಯಾಗುತ್ತದೆ. ಈ ಬೆಟ್ಟವನ್ನು ಲೈಂಗಿಕ ಬೆಟ್ಟ (ಸೆಕ್ಸ್​ ಮೌಂಟೇನ್​) ಎಂದೇ ಕರೆಯುತ್ತಾರೆ. ಈ ಬೆಟ್ಟದಲ್ಲಿ ಒಂದು ದೇವಸ್ಥಾನವಿದ್ದು, ಇಲ್ಲಿನ ಆಚರಣೆ ಬಹಳ ವಿಭಿನ್ನವಾಗಿದೆ.

    ಭಕ್ತರು ಈ ಬೆಟ್ಟಕ್ಕೆ ಬರಿಗಾಲಲ್ಲಲಿ ಏರಿ ಬರಬೇಕು. ಬೆಟ್ಟದ ಮೇಲಿನ ದೇವಸ್ಥಾನವನ್ನು ಜಾವಾ ರಾಜನ ಮಗ ಮತ್ತು ಆತನ ಮಲತಾಯಿ ಸ್ಮರಣಾರ್ಥ ನಿರ್ಮಿಸಲಾಗಿದೆ. ಮಲತಾಯಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ಜಾವಾ ರಾಜ ಮಗ ಮತ್ತು ಆತನ ಮಲತಾಯಿಯನ್ನು ಬಹಿಷ್ಕರಿಸಿದ.

    ಬಳಿಕ ಇಬ್ಬರು ಮೌಂಟ್​ ಕೆಮುಕಸ್ ಬೆಟ್ಟಕ್ಕೆ ಬಂದರು. ಅಲ್ಲಿಯೇ ಇಬ್ಬರು ಏಕಾಂತದಿಂದ ಇರುವಾಗ ಸೈನಿಕರು ಅವರನ್ನು ಕೊಂದು ಅಲ್ಲಿಯೇ ಹೂತು ಹಾಕಿದರು. ಈ ವಿಚಾರ ಜಾವಾ ಜನಗಳಿಗೆ ತಿಳಿದು ದೇವಸ್ಥಾನವೊಂದನ್ನು ಸ್ಥಾಪಿಸಿ, ಅವರಿಗೆ ಪೂಜೆ ಅರ್ಪಿಸುತ್ತಾ ಬಂದಿದ್ದಾರೆ.

    ರೊಮ್ಯಾಂಟಿಕ್​ ಮೌಂಟೇನ್​ನಲ್ಲಿ ವರ್ಷಕ್ಕೆ 35 ದಿನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿಗೆ ಬರುವ ಜನರು ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಒಂದೇ ವ್ಯಕ್ತಿಯ ಜತೆ ಏಳು ಬಾರಿ ಸೆಕ್ಸ್​ ನಡೆಸಿದರೆ ಒಳ್ಳೆಯದಾಗುತ್ತದೆ ಎಂಬ ವಿಚಿತ್ರ ನಂಬಿಕೆಯನ್ನು ಇಲ್ಲಿನ ಜನರು ಹೊಂದಿದ್ದಾರೆ.

    ಇನ್ನು ವಿವಾಹಿತರು ಸಹ ಬೇರೆಯವರ ಜತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಹೀಗೆ ಮಾಡುವಾಗ ಬೇರೆಯವರೊಂದಿಗೆ ಪ್ರೀತಿಯಲ್ಲಿ ಬಿದ್ದು ಮತ್ತೆ ಮದುವೆ ಸಹ ಆಗುತ್ತಾರೆ. ಹೀಗಾಗಿ ಈ ಪದ್ಧತಿಯನ್ನು ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ.

    ತಮ್ಮ ಗಂಡಂದಿರ ಜತೆ ವಾಸಿಸುವ ಮಹಿಳೆಯರು ಬೇರೆಯವರ ಜತೆ ಪ್ರೀತಿಯಲ್ಲಿ ಬಿದ್ದು ಗಂಡಂದಿರನ್ನು ತೊರೆದು ಹೋಗುತ್ತಿರುವುದರಿಂದ ಈ ಪದ್ಧತಿಗೆ ಬಹಳ ವಿರೋಧ ವ್ಯಕ್ತವಾಗಿದೆ. ಹೀಗಿದ್ದರೂ ಇಂದಿಗೂ ವಿಚಿತ್ರ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. (ಏಜೆನ್ಸೀಸ್​)

    ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಕಲ್ಯಾಣ ಮಂಟಪದಲ್ಲೇ ವಧುವಿನಿಂದ ಹೈಡ್ರಾಮ..!

    ಆಶ್ರಮಕ್ಕೆ ಸೇವೆ ಸಲ್ಲಿಸಲು ಹೋದ ನಾಲ್ವರು ಮಹಿಳೆಯರ ಮೇಲೆ ‘ದೇವಮಾನವ’ನಿಂದ ಅತ್ಯಾಚಾರ

    ಕರೊನಾ ರೋಗಿಗಳ ಚಿಕಿತ್ಸೆಗಾಗಿ 3 ಐಷಾರಾಮಿ ಕಾರುಗಳನ್ನೇ ಆಸ್ಪತ್ರೆಯನ್ನಾಗಿಸಿದ ಐವರು ಸ್ನೇಹಿತರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts