More

    ತನ್ನನ್ನು ಟ್ರೋಲ್​ ಮಾಡಿದ ರೋಹಿತ್​ ಫ್ಯಾನ್ಸ್​ಗಳನ್ನು ಒಂದೇ ಒಂದು ಟ್ವೀಟ್​ ಮೂಲಕ ತಣ್ಣಗಾಗಿಸಿದ ವೀರೂ!

    ನವದೆಹಲಿ: ನಿನ್ನೆ (ಏ. 6) ನಡೆದ ಮುಂಬೈ ಇಂಡಿಯನ್ಸ್​ ಹಾಗೂ ಕೊಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ನಡುವಿನ ಪಂದ್ಯದಲ್ಲಿ ಕೆಕೆಆರ್​ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಪ್ಯಾಟ್​ ಕ್ಯುಮಿನ್ಸ್​ ಪರವಾಗಿ ಟೀಮ್​ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​ ಮಾಡಿದ ಟ್ವೀಟ್​, ರೋಹಿತ್​ ಶರ್ಮ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಸೆಹ್ವಾಗ್​ ಮತ್ತೊಂದು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸೆಹ್ವಾಗ್​ ನಿನ್ನೆ ಪಂದ್ಯದ ಬಳಿಕ ಎಂದಿನಂತೆಯೇ ತಮ್ಮ ಶೈಲಿಯಲ್ಲಿ ವಿಭಿನ್ನವಾಗಿ ಟ್ವೀಟ್​ ಮಾಡಿದ್ದರು. ಪ್ಯಾಟ್​ ಕ್ಯುಮಿನ್ಸ್​ ಕೇವಲ 15 ಎಸೆತದಲ್ಲೇ 56 ರನ್​ಗಳಿಸಿ ಕೆಕೆಆರ್​ ಗೆಲುವಿನಲ್ಲಿ ಪಾತ್ರ ವಹಿಸಿದ ಬೆನ್ನಲ್ಲೇ “ಮೂನ್ ಸೆ ನಿವಾಲಾ ಚೀನ್ ಲಿಯಾ, ಸಾರಿ ವಡಾ ಪಾವ್ ಚೀನ್ ಲಿಯಾ” ಎಂದು ಟ್ವೀಟ್​ ಮಾಡಿದ್ದರು. ಆದರೆ, ಸೆಹ್ವಾಗ್​ ಮಾಡಿದ ಟ್ವೀಟ್​ ರೋಹಿತ್​ ಅಭಿಮಾನಿಗಳಿಗೆ ಕೊಂಚವೂ ಹಿಡಿಸಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್​ರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

    ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್​ ಮೂಲಕ ಸೆಹ್ವಾಗ್​ ಸ್ಪಷ್ಟನೆ ನೀಡಿದ್ದಾರೆ. ವಡಾ ಪಾವ್​ ಎಂದು ಮುಂಬೈ ತಂಡವನ್ನು ಉಲ್ಲೇಖಿಸಿದ್ದೇನೆ ಹೊರತು ರೋಹಿತ್​ ಅವರನ್ನಲ್ಲ. ಸ್ವಲ್ಪ ತಣ್ಣಗಾಗಿ, ಯಾವುದರ ಬಗ್ಗೆಯೂ ಚಿಂತಿಸಬೇಡಿ. ನಾನು ಕೂಡ ರೋಹಿತ್​ ಬ್ಯಾಟಿಂಗ್​ಗೆ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

    ಪಂದ್ಯ ವಿಚಾರಕ್ಕೆ ಬಂದರೆ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮುಂಬೈ ತಂಡ, ಗಾಯದಿಂದ ಚೇತರಿಸಿಕೊಂಡು ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್ (52ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ತಿಲಕ್ ವರ್ಮ (38*ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 161 ರನ್ ಗಳಿಸಿತು. ಪ್ಯಾಟ್ ಕಮ್ಮಿನ್ಸ್ ಎಸೆದ ಕಡೇ ಓವರ್‌ನಲ್ಲಿ 3 ಸಿಕ್ಸರ್ ಒಳಗೊಂಡ 23 ರನ್ ಕಲೆಹಾಕಿದ ಕೈರಾನ್ ಪೊಲ್ಲಾರ್ಡ್ (22*ರನ್, 5 ಎಸೆತ, 3 ಸಿಕ್ಸರ್) ಮೊತ್ತವನ್ನು 160ರ ಗಡಿ ದಾಟಿಸಿದರು. ಪ್ರತಿಯಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ (50*ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಕಮ್ಮಿನ್ಸ್ ಅಬ್ಬರದ ಫಲವಾಗಿ 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್​)

    ಮುಂಬೈಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿದ ಕಮ್ಮಿನ್ಸ್ ; ಕೆಕೆಆರ್ ತಂಡಕ್ಕೆ 5 ವಿಕೆಟ್ ಜಯ

    ಮದ್ಯ ಖರೀದಿಸಲು ಹಣಕ್ಕಾಗಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳನಿಗೆ ಕ್ಷಣಾರ್ಧದಲ್ಲೇ ಬೆನ್ನತ್ತಿದ ಕರ್ಮಫಲ!

    5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts