ಕಾಂಡೋಮ್​ ಟೆಸ್ಟರ್​ ಪಾತ್ರದ ಬಗ್ಗೆ ಪಾಲಕರ ಪ್ರತಿಕ್ರಿಯೆ ಹೇಗಿತ್ತು? ರಾಕುಲ್​ ಹೇಳಿದ ಅಚ್ಚರಿಯ ಮಾತುಗಳಿವು..

ಮುಂಬೈ: ಯಾರಿಯನ್​ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಸದ್ಯ ಬಹು ಬೇಡಿಕೆ ನಟಿಯಾಗಿದ್ದಾರೆ. ತನ್ನ ಸಿನಿ ಜರ್ನಿಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಮಾಡಿರುವ ರಾಕುಲ್​ ಈ ಬಾರಿ ವಿಭಿನ್ನ ಚಿತ್ರವೊಂದಕ್ಕೆ ಸಹಿ ಮಾಡಿರುವುದು ಹಳೆಯ ವಿಚಾರ. ಆ ಚಿತ್ರದ ಕುರಿತಾಗಿ ತಾಜಾ ಸುದ್ದಿಯೊಂದು ಹೊರಬಿದ್ದಿದೆ.

ಕಾಂಡೋಮ್​ ಟೆಸ್ಟ್​ ಮಾಡುವ ವಿಭಿನ್ನ ಪಾತ್ರಕ್ಕೆ ಈ ಮೊದಲು ಸಾರಾ ಅಲಿ ಖಾನ್​ ಮತ್ತು ಅನನ್ಯ ಪಾಂಡೆರನ್ನು ಕೇಳಲಾಗಿತ್ತು. ಆದರೆ, ಅವರು ನಿರಾಕರಿಸಿದ್ದರು. ಆ ಬಳಿಕ ಈ ಪಾತ್ರವನ್ನು ರಾಕುಲ್ ಒಪ್ಪಿಕೊಂಡರು. ಜನರಲ್ಲಿ ತಮ್ಮ ಮೇಲೆ ಬೇರೆ ರೀತಿಯ ಭಾವನೆ ಮೂಡಬಹುದೆಂಬ ಕಾರಣಕ್ಕೆ ಸಾರಾ ಅಲಿಖಾ ಮತ್ತು ಅನನ್ಯ ಪಾಂಡೆ ಈ ಪಾತ್ರವನ್ನು ನಿರಾಕರಿಸಿದ್ದಾರೆ. ಆದರೆ, ಯಾವುದನ್ನೂ ತೆಲೆ ಕೆಡಿಸಿಕೊಳ್ಳದ ರಾಕುಲ್​ ಧೈರ್ಯವಾಗಿ ಈ ಚಿತ್ರವನ್ನು ಒಪ್ಪಿದ್ದಾರೆ.

ರಾಕುಲ್​​ ಅವರು ಕಾಂಡೋಮ್​ ಪರೀಕ್ಷಕಳಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾಗೆ “ಛತ್ರಿವಾಲಿ” ಎಂದು ಹೆಸರಿಡಲಾಗಿದೆ. ಈ ಚಿತ್ರದ ಫಸ್ಟ್​ಲುಕ್​ ಪೋಸ್ಟರ್​ ಈಗಾಗಲೇ ಬಿಡುಗಡೆಯಾಗಿದ್ದು, ಕಾಂಡೋಮ್​ ಪ್ಯಾಕೆಟ್​ ಓಪನ್​ ಮಾಡುತ್ತಿರುವ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಈ ಸಿನಿಮಾ ಕುರಿತಾದ ತಾಜಾ ಸುದ್ದಿಯೆಂದರೆ, ಇನ್ನೇನು ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರದ ಪ್ರಚಾರದ ಭಾಗವಾಗಿ ಇತ್ತೀಚಗೆ ರಾಕುಲ್​ ಮಾಧ್ಯಮ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಕಾಂಡೋಮ್​ ಟೆಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ ನಿಮ್ಮ ಮನೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ರಾಕುಲ್​ ಉತ್ತರ ನೀಡಿದ್ದಾರೆ.

ಇದರಲ್ಲಿ ಹೊಸದೇನು ಇಲ್ಲ. ಇದು ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ಇದೆ. ಆದರೆ, ಹೊಸ ರೀತಿಯಲ್ಲಿ ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಕೌಟುಂಬಿಕ ಕಥೆಯಾಗಿ ತೆರೆಕಂಡು ಎಲ್ಲರ ಹುಬ್ಬೇರುವಂತೆ ಮಾಡಲಿದೆ ಎಂದರು.

ಪುಟ್ಟ ಗ್ರಾಮದಿಂದ ಬರುವ ಹುಡುಗಿ ಕಾಂಡೋಮ್​ ಗುಣಮಟ್ಟ ಪರೀಕ್ಷಿಸುವ ಮುಖ್ಯಸ್ಥಳಾಗುವುದೇ ಈ ಚಿತ್ರದ ಕತೆ. ಆರಂಭದಲ್ಲಿ ಹುಡುಗಿ ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸಕ್ಕೆ ಸೇರುತ್ತಾಳೆ. ಬಳಕ ತನ್ನ ಉದ್ಯೋಗದ ಮಹತ್ವವನ್ನು ತಿಳಿದುಕೊಳ್ಳುತ್ತಾಳೆ. ನಾವು ಜನಿಸುತ್ತೇವೆ ಎಂಬುದು ಎಲ್ಲರಿಗು ತಿಳಿದಿದೆ. ಆದರೆ, ಅದರ ಬಗ್ಗೆ ಮಾತನಾಡಲು ನಮಗೆ ಕಷ್ಟವಾಗುತ್ತದೆ. ಹೀಗಾಗಿ ಅವರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಿಖರವಾಗಿ ತಿಳಿದಿರಬೇಕು ಎಂದು ಹೇಳಿದರು.

ಚಿತ್ರದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳಿಲ್ಲ. ಇಂತಹ ಪಾತ್ರಗಳನ್ನು ಮಾಡುವುದರಿಂದ ವೃತ್ತಿ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಇಂತಹ ಅವಕಾಶಗಳು ಅಪರೂಪಕ್ಕೆ ಒಮ್ಮೆ ನಮಗೆ ಸಿಗುತ್ತವೆ. ಹೀಗಾಗಿ ಈ ಪಾತ್ರವನ್ನು ಮಾಡಿಕೊಳ್ಳಲು ನಾನು ಒಪ್ಪಿಕೊಂಡೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಪಾಲಕರಿಗೆ ವಿವರಿಸಿದ್ದೇನೆ. ಒಂದು ಕ್ಷಣವೂ ಹಿಂದೇಟು ಹಾಕದೇ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ನನ್ನ ಪ್ರತಿ ಸಿನಿಮಾ ಬಗ್ಗೆ ನಮ್ಮ ಅಂಕಲ್​ಗಳಿಗೆ ಹೇಳುತ್ತೇನೆ. ಅವರಿಂದ ಒಪ್ಪಿಗೆ ಪಡೆದ ಬಳಿಕವೇ ಚಿತ್ರಕ್ಕೆ ನಾನು ಹಸಿರು ನಿಶಾನೆ ತೋರುತ್ತೇನೆ. ಏಕೆಂದರೆ, ನಮ್ಮ ಪಾಲಕರು ಕೂಡ ಪ್ರೇಕ್ಷಕರು ಎಂದು ರಾಕುಲ್​ ಹೇಳಿದ್ದಾರೆ. (ಏಜೆನ್ಸೀಸ್​)

ಇದುವರೆಗೂ ನೋಡಿರದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ! ತಜ್ಞರು ಹೇಳಿದ ಕಾರಣ ಇಲ್ಲಿದೆ…

ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…