More

    ಮುಂದೇನೋ ಕಾದಿದೆ ಎಂದರ್ಥ… ಪುತಿನ್​ ಕುಟುಂಬದ ರಹಸ್ಯ ಮಾಹಿತಿ ಬಿಚ್ಚಿಟ್ಟ ರಷ್ಯಾ ಪ್ರಾಧ್ಯಾಪಕ

    ಕೀಯೆವ್​/ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಕುರಿತ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ. ಪುತಿನ್​ ಆರೋಗ್ಯ ಸ್ಥಿತಿ ಮತ್ತು ಅವರ ಕುಟುಂಬ ಕುರಿತು ರಷ್ಯಾ ಪ್ರಾಧ್ಯಾಪಕ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ರಷ್ಯಾ ಅಧ್ಯಕ್ಷರು ತನ್ನ ಕುಟುಂಬದ ಸದಸ್ಯರನ್ನು ಸೈಬಿರಿಯಾದ ಭೂಗತ ನಗರದಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆಂದು 61 ವರ್ಷದ ರಾಜಕೀಯ ವಿಜ್ಞಾನಿ ವಾಲೆರಿ ಸೊಲೊವೆಯಾ ತಿಳಿಸಿದ್ದಾರೆ. ಪರಮಾಣು ದಾಳಿ ನಡೆದರೂ ಯಾವುದೇ ತೊಂದರೆಯಾಗದಂತೆ ಕುಟುಂಬವನ್ನು ಕಾಪಾಡಿಕೊಳ್ಳಲು ಅಲ್ಟಾಯಿ ಬೆಟ್ಟದಲ್ಲಿರುವ ಹೈಟೆಕ್​ ಐಷಾರಾಮಿ ಬಂಕರ್​ನಲ್ಲಿ ಪುತಿನ್​ ತಮ್ಮ ಕುಟುಂಬವನ್ನು ಇರಿಸಿದ್ದಾರೆಂದು ವಾಲೆರಿ ತಿಳಿಸಿದ್ದಾರೆ.

    ಪುತಿನ್​ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಮಾನಸಿಕ ಸಮಸ್ಯೆ ಇದೆ. ಆದರೆ, ಅದನ್ನು ರಷ್ಯಾ ಸಾರ್ವಜನಿಕರಿಗೆ ತಿಳಿಯದಂತೆ ಮುಚ್ಚಿಟ್ಟಿದ್ದಾರೆಂದು ಇದೇ ಪ್ರಾಧ್ಯಾಪಕ ಹಿಂದೊಮ್ಮೆ ಹೇಳಿದ್ದರು. ಈಗಲೂ ಅದನ್ನೇ ಪುನರುಚ್ಛರಿಸಿದ್ದಾರೆ. ಅಲ್ಲದೆ, ಪುತಿನ್​ ಅವರು ತಮ್ಮ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗೆ ವಿಲಕ್ಷಣ ರಹಸ್ಯ ವಾಮಾಚಾರ ಆಚರಣೆಗಳಲ್ಲಿ ಇತ್ತೀಚೆಗಷ್ಟೇ ಭಾಗವಹಿಸಿದರು ಎಂದು ಹೇಳಿದ್ದರು. ಪುತಿನ್​ ಆರೋಗ್ಯದ ಬಗ್ಗೆ ಮಾತನಾಡಿದ್ದಕ್ಕೆ ಈ ಹಿಂದೆ ವಾಲೆರಿ ಅವರ ಹೇಳಿಕೆಯನ್ನು ಪುತಿನ್​ ಆಡಳಿತಾಧಿಕಾರಿಗಳು ತಿರಸ್ಕರಿಸಿದ್ದು, ವಾಲೆರಿ ಅವರನ್ನು ಬಂಧಿಸಿ ಸುಮಾರು 7 ಗಂಟೆ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು.

    ಯೂಕ್ರೇನ್​ ಮೇಲೆ ತೀವ್ರ ದಾಳಿ ಮಾಡುವ ಮೂಲಕ ರಷ್ಯಾ ಅಪರಾಧ ಎಸಗುತ್ತಿದೆ ಎಂದಿರುವ ಪ್ರಾಧ್ಯಾಪಕ, ವೀಕೆಂಡ್​ನಲ್ಲಿ ಪುತಿನ್​ ತಮ್ಮ ಕುಟುಂಬವನ್ನು ವಿಶೇಷ ಬಂಕರ್​ಗೆ ಸ್ಥಳಾಂತರ ಮಾಡಿದ್ದಾರೆ. ಹೈಟೆಕ್​ ಬಂಕರ್​ ಆಗಿದ್ದು ಪರಮಾಣು ದಾಳಿಯನ್ನು ತಡೆಯುವ ಸಾಮರ್ಥ್ಯ ಇದೆ. ಬಂಕರ್​ ಅಲ್ಟಾಯಿ ರಿಪಬ್ಲಿಕ್​ ಬಳಿ ಇದೆ. ಅಂದಹಾಗೆ ಬಂಕರ್​ ಕೇವಲ ಬಂಕರ್​ ಮಾತ್ರವಲ್ಲ. ಇಡೀ ನಗರವೇ ಭೂಗತ ನಗರವಾಗಿದೆ. ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಸುಸಜ್ಜಿತವಾಗಿದೆ. ಅಲ್ಲಿಗೆ ಸುರಕ್ಷಿತವಾಗಿ ರವಾನಿಸಿದ್ದಾರೆಂದರೆ ಏನೋ ಕಾದಿದೆ ಎಂದರ್ಥ ಎಂದರು.

    ಅಂದಹಾಗೆ ಪುತಿನ್​ ಅವರಿಗೆ 36 ವರ್ಷದ ಮರಿಯಾ ವೊರೊಂಟ್ಸೊವಾ ಮತ್ತು 35 ವರ್ಷದ ಕ್ಯಾತೆರಿನಾ ಟಿಖನೊವಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವ ಪುತಿನ್ ಅವರ ಕಾರ್ಯತಂತ್ರದ ಯೋಜನೆಯು ವೈಫಲ್ಯ ಆಗಿರುವುದರಿಂದ ಅವರ ಕುಟುಂಬವನ್ನು ಬಂಕರ್‌ಗೆ ಸ್ಥಳಾಂತರಿಸಿದ್ದಾರೆ ಎಂದು ವಾಲೆರಿ ಹೇಳಿಕೊಂಡಿದ್ದಾರೆ.

    ಯೂಕ್ರೇನ್‌ಗೆ ಅಂತಾರಾಷ್ಟ್ರೀಯ ಬೆಂಬಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುತಿನ್ ಯುದ್ಧದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಇದೀಗ ಮಹತ್ವ ಪಡೆದುಕೊಂಡಿದೆ. ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಪುತಿನ್​ ಅವರೇ ತಿಳಿಸಬೇಕಿದೆ. (ಏಜೆನ್ಸೀಸ್​)

    ಇಡೀ ದಿನ ಒಂದೇ ಕೋಣೆಯಲ್ಲಿ ಆತನೊಂದಿಗೆ ಇರಬೇಕಿತ್ತು: ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ಪೂನಂ ಪಾಂಡೆ

    ವೇಶ್ಯೆಯಾಗಲು ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

    ಹೆದ್ದಾರಿ ಪಕ್ಕದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿ: ಶಾಸಕರ ಪುತ್ರ, ಸೋದರಳಿಯನ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts