More

    KGF-2 ಗೆಲುವಿನಿಂದ ಒತ್ತಡಕ್ಕೆ ಸಿಲುಕಿತಾ ಪುಷ್ಪ ಚಿತ್ರತಂಡ​? ಅಮೆರಿಕ ಬಿಟ್ಟು ಬಾರದ ಸುಕುಮಾರ್​, ಶೂಟಿಂಗ್​ ಕತೆ ಏನು?

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆಜಿಎಫ್​-2 ಚಿತ್ರದ ಗೆಲುವಿನ ಒತ್ತಡ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್​ ಮೇಲೆ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಪುಷ್ಪ ಚಿತ್ರದ ಸ್ಕ್ರಿಪ್ಟ್​ ಅನ್ನು ಸುಕುಮಾರ್​ ಬದಲಾಯಿಸುವ ಯತ್ನದಲ್ಲಿದ್ದಾರೆ ಎಂಬ ಚರ್ಚೆಯು ನಡೆಯುತ್ತಿದೆ. ಆದರೆ, ಅದನ್ನು ಚಿತ್ರತಂಡ ಅಲ್ಲಗೆಳೆಯುತ್ತಿದ್ದರೂ ಅವರ ನಡೆ ಮಾತ್ರ ಕೆಜಿಎಫ್​ 2 ಯಶಸ್ಸಿನ ಒತ್ತಡ ಅವರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಸಾಬೀತು ಮಾಡುತ್ತಿದೆ.

    ಸ್ಟೋರಿಯ ವಿವರಣೆಗೂ ಮುನ್ನ ಒಂದು ಫ್ಲ್ಯಾಶ್​ಬ್ಯಾಕ್​ ನೆನಪಿಸಿಕೊಳ್ಳೋಣ.. ಒಂದು ಪುಷ್ಪ 10 ಕೆಜಿಎಫ್​ಗೆ ಸಮ ಎಂಬ ಮಾತುಗಳು ಈ ಹಿಂದೆ ಟಾಲಿವುಡ್​ ಗಲ್ಲಿಯಲ್ಲಿ ಕೇಳಿಬಂದಿತ್ತು. ಸ್ಯಾಂಡಲ್​​ವುಡ್​ನಲ್ಲಿಯೂ ಇದರ ಬಗ್ಗೆ ಚರ್ಚೆಯಾಗಿತ್ತು. ಆದರೆ, ಪುಷ್ಪ ಚಿತ್ರ ಬಿಡುಗಡೆಯಾದಾಗ ಪ್ರೇಕ್ಷಕರಿಂದ ಬಂದ ಮಾತುಗಳು ಚಿತ್ರತಂಡವನ್ನು ನಿರಾಸೆಗೆ ದೂಡಿತು. ಕೆಜಿಎಫ್​ ಮುಂದೆ ಪುಷ್ಪ ಚಿತ್ರ ಏನೇನು ಅಲ್ಲ. ಹೋಲಿಕೆಯೇ ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದವು.

    ತಾಜಾ ವಿಚಾರಕ್ಕೆ ಬರುವುದಾದರೆ, ಕೆಜಿಎಫ್​ 2 ಬಿಡುಗಡೆಯಾದ ಮೇಲಂತೂ ಪುಷ್ಪ ಚಿತ್ರತಂಡ ಇನ್ನಷ್ಟು ಮುಜುಗರ ಅನುಭವಿಸಿತು. ಕೆಜಿಎಫ್​-2ನಲ್ಲಿನ ದೃಶ್ಯ ವೈಭವ ಹಾಗೂ ಮಾಸ್​ ಡೈಲಾಗ್​ಗಳನ್ನು ನೋಡಿ ಚಿತ್ರತಂಡ ಕಂಗಾಲಾಗಿದೆ. ಅಲ್ಲದೆ, ಟಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಕೆಜಿಎಫ್​ 2 ಮಾಡಿದ ಕಮಾಲ್​ ನೋಡಿ ತೆಲುಗು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಕೂಡ ದಂಗಾಗಿದ್ದಾರೆ. ಕೆಜಿಎಫ್​ಗೆ ಪುಷ್ಪ ಸಿನಿಮಾವನ್ನು ಹೋಲಿಕೆ ಮಾಡಿದವರು ತೆಪ್ಪಗಾಗಿದ್ದಾರೆ. ಕೆಜಿಎಫ್​ 2 ಭರ್ಜರಿ ಯಶಸ್ಸು ನೋಡಿದ ಪುಷ್ಪ ಚಿತ್ರತಂಡ ಇದೀಗ ಭಾರೀ ಒತ್ತಡಕ್ಕೆ ಸಿಲುಕಿದೆ. ಪುಷ್ಪ ಭಾಗ 1ರಲ್ಲಿ ಏನೂ ಮಾಡಲೂ ಆಗಿಲ್ಲ. ಇದೀಗ ಭಾಗ ಎರಡರಲ್ಲಾದರೂ ಕೆಜಿಎಫ್​ 2 ಬೀಟ್​ ಮಾಡಬೇಕೆಂಬ ಹಠಕ್ಕೆ ಚಿತ್ರತಂಡ ಬಿದ್ದಂತಿದೆ.

    ಪುಷ್ಪ ಎರಡನೇ ಭಾಗವನ್ನು ಅತ್ಯದ್ಬುತವಾಗಿ ತಯಾರು ಮಾಡಬೇಕೆಂದು ನಿರ್ಧಾರಕ್ಕೆ ಬಂದಿರುವ ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ನಿರ್ದೇಶಕ ಸುಕುಮಾರ್​ ಸ್ಕ್ರಿಪ್ಟ್​ ಬರೆಯಲು ಅಮೆರಿಕಕ್ಕೆ ಹೋಗಿ ಕುಳಿತು ಬಿಟ್ಟಿದ್ದಾರೆ. ಹೀಗಾಗಿ ಚಿತ್ರದ ಚಿತ್ರೀಕರಣ ತುಂಬಾ ವಿಳಂಬವಾಗಿದೆ. ಚಿತ್ರ ಬಿಡುಗಡೆಯಾಗಿ ಅರ್ಧ ವರ್ಷ ಕಳೆಯುತ್ತಿದ್ದರೂ ಇನ್ನೂ ಶೂಟಿಂಗ್​ ಶುರುವಾಗಿಲ್ಲ. ಸುಕುಮಾರ್​ ಭಾರತಕ್ಕೆ ಮರಳುವವರೆಗೂ ಚಿತ್ರೀಕರಣ ಪ್ರಾರಂಭಗುವುದಿಲ್ಲ.

    ಸುಕುಮಾರ್​ ಅವರು ಸ್ಕ್ರಿಪ್ಟ್​ ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಸ್ಕ್ರಿಪ್ಟ್​ ಅನ್ನು ಪರಿಣಾಮಕಾರಿಯಾಗಿ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಅದ್ಯಾಕೋ ಸುಕುಮಾರ್​ ಮನಸ್ಸಿಗೆ ಒಪ್ಪುತ್ತಿಲ್ಲವಂತೆ. ಹೀಗಾಗಿ ತುಂಬಾ ವಿಳಂವಾಗುತ್ತಿದೆ. ಬಹುಶಃ ಕೆಜಿಎಫ್​ 2 ಯಶಸ್ಸು ನೋಡಿ ಅದಕ್ಕಿಂತ ವೈಭವಯುತವಾಗಿ ಕಟ್ಟಿಕೊಡಲು ಸುಕುಮಾರ್​ ತುಂಬಾ ತಲೆ ಕೆಡಿಸಿಕೊಂಡಿರಬೇಕು. ಹೀಗಾಗಿಯೇ ಇನ್ನು ಸ್ಕ್ರಿಪ್ಟ್​ ಕೆಲಸಾನೂ ಮುಗಿಸಿಲ್ಲ ಮತ್ತು ಅಮೆರಿಕದಿಂದಾನೂ ಹಿಂತಿರುಗಿಲ್ಲ. ಮೂಲಗಳ ಪ್ರಕಾರ ಚಿತ್ರೀಕರಣ ಈ ವರ್ಷದ ಅಂತ್ಯದಿಂದ ಆರಂಭವಾಗಲಿದೆಯಂತೆ.

    ಒಟ್ಟಾರೆ ಕೆಜಿಎಫ್​ 2 ಚಿತ್ರ ಟಾಲಿವುಡ್​ನಲ್ಲಿ ಮಾಡಿದ ಮೋಡಿಗೆ ಪುಷ್ಪ ಚಿತ್ರತಂಡವೂ ಬೆದರಿದೆ. ಏಕೆಂದರೆ, ಪುಷ್ಪ ಚಿತ್ರ ಕರ್ನಾಟಕದಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಸದ್ಯ ಪುಷ್ಪ 2 ಚಿತ್ರದ ಮೇಲೆ ಎಲ್ಲರ ಕುತೂಹಲವಿದ್ದು, ಹೇಗೆ ಮೂಡಿಬರಲಿದೆ ಎಂದು ಕಾದು ನೋಡಬೇಕಿದೆ.

    KGF​ ಚಿತ್ರಾಭಿಮಾನಿಗಳಿಗೆ ಬೇಸರದ ಸಂಗತಿ: ಬೇಸರದ ನಡುವೆಯೂ ಒಂದು ಸಮಾಧಾನಕರ ಸುದ್ದಿ!

    ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್​!

    ಫುಡ್​ ಪಾರ್ಸೆಲ್​ ತೆರೆದ ಗ್ರಾಹಕಿಗೆ ಕಾದಿತ್ತು ಶಾಕ್​: ಪರೋಟ ಜತೆಯಿತ್ತು ಭಯ ಹುಟ್ಟಿಸುವ ವಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts