More

    ಭಾಷಣದ ಮಧ್ಯೆ ನೀರು ಕೇಳಿದ ಅಧಿಕಾರಿ: ತಕ್ಷಣ ವಿತ್ತ ಸಚಿವೆ ಸ್ಪಂದಿಸಿದ ರೀತಿಗೆ ನೆಟ್ಟಿಗರ ಬಹುಪರಾಕ್​!

    ನವದೆಹಲಿ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣದ ಮಧ್ಯೆ ಕುಡಿಯಲು ನೀರು ಕೇಳಿದ ರಾಷ್ಟ್ರೀಯ ಭದ್ರತಾ ಠೇವಣಿ ನಿಗಮ(ಎನ್​ಎಸ್​ಡಿಎಲ್​)ದ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ವೇದಿಕೆ ಮೇಲೆಯೇ ನೀರು ಕೊಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ಭಾಷಣದ ಮಧ್ಯೆ ಚುಂಡೂರು ಅವರು ಕುಡಿಯಲು ನೀರು ಕೇಳುತ್ತಾರೆ. ಈ ವೇಳೆ ಅದನ್ನು ಕೇಳಿಸಿಕೊಳ್ಳುವ ನಿರ್ಮಲಾ ಸೀತಾರಾಮನ್​, ತಕ್ಷಣ ಕೈಯಲ್ಲಿ ಒಂದು ಲೋಟ ಹಿಡಿದುಕೊಂಡು ತಮ್ಮ ಸ್ಥಾನದಿಂದ ಎದ್ದು ಚುಂಡೂರು ಅವರ ಬಳಿ ಬರುತ್ತಾರೆ. ತಮಗೆ ಕೊಟ್ಟಿದ್ದ ನೀರಿನ ಬಾಟಲ್​ನಿಂದ ಲೋಟಕ್ಕೆ ನೀರು ತುಂಬಿ ಕೊಟ್ಟು ಮತ್ತೆ ತಮ್ಮ ಜಾಗಕ್ಕೆ ಹೋಗಿ ಕುಳಿತುಕೊಳ್ಳುತ್ತಾರೆ.​

    ವಿತ್ತ ಸಚಿವೆಯ ಈ ವಿನಯವಂತಿಕೆಗೆ ಎಲ್ಲರು ಫಿದಾ ಆಗಿದ್ದಾರೆ. ಚುಂಡೂರು ಅವರು ಸಹ ನಿರ್ಮಲಾ ಅವರಿಗೆ ಧನ್ಯವಾದ ಹೇಳಿದಾಗ ಸಮಾರಂಭದಲ್ಲಿದ್ದ ಅತಿಥಿಗಳು ಚಪ್ಪಾಳೆ ತಟ್ಟುತ್ತಾರೆ. ಇದಿಷ್ಟು ಘಟನೆ ಶನಿವಾರ ಮುಂಬೈನಲ್ಲಿ ನಡೆದ ಎನ್​ಎಸ್​ಡಿಎಲ್​ ಬೆಳ್ಳಿ ಸಂಭ್ರಮ ಆಚರಣೆ ವೇಳೆ ಸೆರೆಹಿಡಿಯಲಾಗಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಎನ್‌ಎಸ್‌ಡಿಎಲ್‌ನ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ‘ಮಾರ್ಕೆಟ್ ಕಾ ಏಕಲವ್ಯ’ಕ್ಕೆ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು ಮಾರ್ಕೆಟ್​ ಕಾ ಏಕಲವ್ಯ ಜಾಗೃತಿ ಕಾರ್ಯಕ್ರಮದ ಮೂಲಕ ಆರ್ಥಿಕ ಸಾಕ್ಷರತೆಯ ಅಗತ್ಯವಿರುವ ಅನೇಕರನ್ನು ನೀವು ತಲುಪಲು ಸಾಧ್ಯವಾಗುತ್ತದೆ. ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಜನರು ಒಲವು ಹೊಂದಿರುವ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಮಾರುಕಟ್ಟೆ ಬಗ್ಗೆ ತಿಳಿಸಲು ಎನ್‌ಎಸ್‌ಡಿಎಲ್ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎಂದು ಸೀತಾರಾಮನ್ ಹೇಳಿದರು. (ಏಜೆನ್ಸೀಸ್​)

    70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

    KGF​ ಚಿತ್ರಾಭಿಮಾನಿಗಳಿಗೆ ಬೇಸರದ ಸಂಗತಿ: ಬೇಸರದ ನಡುವೆಯೂ ಒಂದು ಸಮಾಧಾನಕರ ಸುದ್ದಿ!

    10 ವರ್ಷಗಳ ಕಾಲ ವಿಜ್ಞಾನಿಗಳಿಂದ ಅಧ್ಯಯನ: ಗೂಗಲ್​ ಮ್ಯಾಪ್​ ನಲ್ಲಿ ಆಗಾಗ್ಗೆ ಕಂಡು ಮರೆಯಾಗುವ ರಹಸ್ಯ ದ್ವೀಪ ಕೊನೆಗೂ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts