More

    ಜಿಮ್ ಮಾಡಿದರೆ ಹಾರ್ಟ್ ಅಟ್ಯಾಕ್ ಆಗುತ್ತಾ? ನಟ ಜಿಮ್ ರವಿ ಹೇಳಿದ್ದು ಹೀಗೆ…

    ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ ಪುನೀತ್​ ರಾಜ್​ಕುಮಾರ್​ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮೊನ್ನೆಯಷ್ಟೇ ಹಾಡಿ ನಲಿದಿದ್ದ ಅಪ್ಪ ನಿನ್ನೆ ದಿಢೀರನೇ ಮೃತಪಟ್ಟಿದ್ದು, ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದೆ. 46ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕವಾಗಿ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

    ಜಿಮ್​ ಮಾಡುವಾಗ ಪುನೀತ್​ಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ನಟ ಜಿಮ್​ ರವಿ ಅವರು ಈ ಮಾತನ್ನು ನಿರಾಕರಿಸಿದ್ದು, ಜಿಮ್​ ಮಾಡಿದ್ರೆ ಹೃದಯಾಘಾತ ಆಗುತ್ತದೆ ಎಂಬುದು ಸುಳ್ಳೆಂದು ಹೇಳಿದ್ದಾರೆ.

    ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅವರು ಎಲ್ಲ ಅನಿಷ್ಟಕ್ಕೆ ಶನಿಮಾತ್ಮ ಕಾರಣವಲ್ಲ. ಹಾಗೇ ಬಾಳೇಹಣ್ಣಿನ ಸಿಪ್ಪೆಯಿಂದ ಜಾರಿ ಬಿದ್ದ ಮಾತ್ರಕ್ಕೆ ಬಾಳೇಹಣ್ಣು ತಿನ್ನುವುದನ್ನು ಬಿಡಬಾರದು. ಏಕೆಂದರೆ, ನಿನ್ನೆ ಘಟನೆ ನಡೆದಾಗ ಅಪ್ಪು ಅವರು ಜಿಮ್​ನಲ್ಲಿ ಇರಲಿಲ್ಲ. ಅವರು ಮನೆಯಿಂದ ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ. ಜಿಮ್​ ಮಾಡಿದ್ರೆ ಹಾರ್ಟ್​ ಅಟ್ಯಾಕ್​ ಹಾಗುತ್ತದೆ. ಸತ್ತು ಹೋಗುತ್ತಾರೆ ಎಂದು ನಿನ್ನೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಆ ರೀತಿ ಮಾಡಬೇಡಿ. ಅದು ಶುದ್ಧ ಸುಳ್ಳು. ಜಿಮ್​ ಮಾಡುವುದರಿಂದ ಹೃದಯಾಘಾತ ಆಗುವುದಿಲ್ಲ. ಕೆಲವೊಮ್ಮೆ ನಡೆದರೆ ಅದು ಕಾಕತಾಳೀಯವಷ್ಟೇ ಎಂದು ಜಿಮ್​ ರವಿ ತಿಳಿಸಿದರು.

    ಜಿಮ್​ನಿಂದ ಅಪ್ಪು ಅವರು ಈ ರೀತಿ ಆಗಲಿಲ್ಲ. ವಿಧಿಯ ಕ್ರೂರ ಆಟಕ್ಕೆ ಅವರು ಬಲಿಯಾಗಿದ್ದಾರೆ. ಜಿಮ್​ನ ಪ್ರೀತಿ ಮಾಡುವವರು ಲಕ್ಷಾಂತರ ಮಂದಿ ಇದ್ದಾರೆ. ಜಿಮ್​ ಇಟ್ಟುಕೊಂಡಿರುವವರು ಇದ್ದಾರೆ. ಇದೊಂದು ಗಾಳಿ ಸುದ್ದಿಯಿಂದ ಅದನ್ನೇ ನಂಬಿ ಬದುಕುತ್ತಿರುವವರ ಮೇಲೆ ಪರಿಣಾಮ ಬೀರುತ್ತದೆ. ಅಪ್ಪು ಜಿಮ್​ ಮಾಡುವಾಗ ಕುಸಿದು ಬಿದ್ದಿಲ್ಲ. ಆದರೆ, ಅಪ್ಪು ಅವರಿಗೆ ಜಿಮ್​ ಅಂದ್ರೆ ತುಂಬಾ ಇಷ್ಟ. ಅವರೆಂದು ತೂಕ ತರಬೇತಿ ಮಾಡುತ್ತಿರಲಿಲ್ಲ. ದೇಹಕ್ಕೆ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾತ್ರ ಮಾಡುತ್ತಿದ್ದರು. ಆದರೆ, ಜಿಮ್​ನಿಂದಾಗಿ ಅವರು ಮೃತಪಟ್ಟಿಲ್ಲ ಎಂದು ಹೇಳಿದ್ದಾರೆ.

    ನಿನ್ನೆಯಿಂದಲೂ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರಿಂದ ಇಡೀ ಜನತೆಯ ಮೇಲೆ ಪರಿಣಾಮ ಬೀರುತ್ತದೆ. ಜಿಮ್​ ಅನ್ನೇ ನಂಬಿ ಬದುಕುತ್ತಿರುವವರು ಈಗಾಗಲೇ ಹರಿದಾಡುತ್ತಿರುವ ಸುದ್ದಿಯಿಂದ ಹೆದರಿದ್ದಾರೆ. ಸಾಕಷ್ಟು ಕುಟುಂಬ ಅದನ್ನೇ ಅವಲಂಬಿಸಿವೆ. ದಯವಿಟ್ಟು ಅದನ್ನು ಮನಸ್ಸಿನಿಂದ ತೆಗೆದುಹಾಕಿ. ಅಪ್ಪು ಅವರು ಜಿಮ್​ ಮಾಡುತ್ತಾ ಕುಸಿದು ಬಿದ್ದಿಲ್ಲ. ನಡೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಇದೊಂದು ವಿಧಿಯ ಆಟ. ಏನಾಗಿದೆ ಎಂದು ಆ ವೈದ್ಯರೇ ಹೇಳಬೇಕು. ಸಣ್ಣ ವಯಸ್ಸಿನಿಂದಲೂ ಅಪ್ಪು ಜಿಮ್​ಗೆ ಹೋಗುತ್ತಿದ್ದರು. ಜಿಮ್​ನಿಂದ ಅವರಿಗೆ ಹೀಗಾಗಿಲ್ಲ ಎಂದು ಮತ್ತೊಮ್ಮೆ ಹೇಳಿದರು. (ದಿಗ್ವಿಜಯ ನ್ಯೂಸ್​)

    ಪುನೀತ್​ರನ್ನು ಪವರ್​ಸ್ಟಾರ್ ಎಂದು ಕರೆಯುವುದ್ದೇಕೆ? 2014ರಲ್ಲಿ ಅಪ್ಪು ಆಡಿದ ಈ ಮಾತು ಕಣ್ಣೀರು ತರಿಸುತ್ತೆ​

    ಪತ್ನಿ ಜತೆ ಪುನೀತ್​ ಕ್ಲಿನಿಕ್​ಗೆ ಬಂದಿದ್ರು.. ತುಂಬಾ ಬೆವರುತ್ತಿದ್ದರು.. ಆಯಾಸ ಆಗಿದ್ದರು…

    ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts