More

    ಮತ್ತೆ ಹುಟ್ಟಿ ಬಾ ಅಪ್ಪು: ನ್ಯೂಯಾರ್ಕ್​ನಲ್ಲಿ ಕಾರು ಪರೇಡ್​ ನಡೆಸಿ ಪುನೀತ್​ಗೆ ಗೌರವ ಸೂಚಿಸಿದ ಫ್ಯಾನ್ಸ್​

    ನ್ಯೂಯಾರ್ಕ್​: ನಟ ಪುನೀತ್​ ರಾಜ್​ಕುಮಾರ್​ ಅವರ ಅಕಾಲಿಕ ಅಗಲಿಕೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗಲೂ ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆದು ಕಂಬನಿ ಮಿಡಿಯುತ್ತಿದ್ದಾರೆ. ಪುನೀತ್​ ಮೇಲಿನ ಅಭಿಮಾನ ಎಲ್ಲ ಗಡಿಯನ್ನು ಮೀರಿದ್ದು, ದೂರದ ಅಮೆರಿಕದಲ್ಲಿಯೂ ನೆಚ್ಚಿನ ನಟನಿಗೆ ವಿಶೇಷ ಗೌರವನ್ನು ಸಲ್ಲಿಸಲಾಗಿದೆ.

    ಮಾರ್ಚ್​​ 17 ಪುನೀತ್​ ಅವರು ಹುಟ್ಟಿದ ದಿನ. ಅಂದೇ ಅವರ ಕೊನೆಯ ಜೇಮ್ಸ್​ ಚಿತ್ರ ಬಿಡುಗಡೆಯಾಗಿದೆ. ಪುನೀತ್​ ಇಲ್ಲದ ಮೊದಲ ಬರ್ತಡೇ ಇದಾಗಿದ್ದು, ಎಲ್ಲಡೆ ಪುನೀತ್​ ನೆನೆದು ಕಂಬನಿ ಮಿಡಿಯುತ್ತಿದ್ದಾರೆ. ಚಿತ್ರ ನೋಡಿ ಬಂದ ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ. ಅಲ್ಲದೆ, ಜೇಮ್ಸ್​ ಚಿತ್ರವನ್ನು ಅದ್ಧೂರಿಯಾಗಿ ಬರ ಮಾಡಿಕೊಂಡು ಜೇಮ್ಸ್​ ಜಾತ್ರ ಮಾಡುತ್ತಿದ್ದಾರೆ.

    ಇನ್ನು ಪುನೀತ್​ ಮೇಲಿನ ಅಭಿಮಾನ ಗಡಿಯನ್ನು ಮೀರಿ ಬೆಳೆದಿದೆ. ನ್ಯೂಯಾರ್ಕ್​ನಲ್ಲಿರುವ ಪುನೀತ್​ ಅಭಿಮಾನಿಗಳು ಅಪ್ಪುಗಾಗಿ ಕಾರ್ ಪರೇಡ್ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ಇದೇ ವೇಳೆ ಪುನೀತ್​ ಜೈಕಾರ ಕೂಡ ಜೇಮ್ಸ್​ ಚಿತ್ರಕ್ಕೆ ಶುಭಕೋರಿದ್ದಾರೆ. ಅಲ್ಲದೆ, ಮತ್ತೆ ಹುಟ್ಟಿ ಬಾ ಅಪ್ಪು ಎಂದ ನ್ಯೂಯಾರ್ಕ್ ಫ್ಯಾನ್ಸ್ ಕಂಬನಿ ಮಿಡಿದಿದ್ದಾರೆ.

    ಇನ್ನು ಮಾ. 17ರಂದು ಬಿಡುಗಡೆಯಾದ ಜೇಮ್ಸ್​ ಚಿತ್ರ ಮೂರೇ ದಿನದಲ್ಲಿ 100 ಕೋಟಿ ರೂ. ಸಮೀಪಕ್ಕೆ ಬಂದಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಈ ಹಿಂದಿನ ದಾಖಲೆಗಳನ್ನು ಜೇಮ್ಸ್​ ಚಿತ್ರ ಧೂಳೀಪಟ ಮಾಡಿದೆ. ಡಿಜಿಟಲ್​ ರೈಟ್ಸ್​ನಲ್ಲೂ ಜೇಮ್ಸ್​ ಇತಿಹಾಸ ಬರೆದಿದೆ. ಆದರೂ, ಪುನೀತ್​ ಅವರ ಕೊನೆಯ ಚಿತ್ರವಾದ್ದರಿಂದ ಅಭಿಮಾನಿಗಳಿಗೆ ಬೇಸರುವೂ ಇದೆ. ಆದರೆ, ಅಪ್ಪು ಎಂದಿಗೂ ಅವರ ಆದರ್ಶಗಳೊಂದಿಗೆ ನಮ್ಮೊಂದಿಗೆ ಇರುತ್ತಾರೆ ಎಂಬ ನೆಮ್ಮದಿಯು ಇದೆ. (ದಿಗ್ವಿಜಯ ನ್ಯೂಸ್​)

    ವಿಡಿಯೋ ಕೃಪೆ: (ರಾಘವೇಂದ್ರ ಚಿತ್ರವಾಣಿ)

    ಸಂಸಾರ ಹಾಳು ಮಾಡಿದ ಆರೋಪ: ರಂಗಭೂಮಿ ಕಲಾವಿದೆಯ ಮೇಲೆ ಸಹಪಾಠಿಗಳಿಂದಲೇ ಆ್ಯಸಿಡ್​ ದಾಳಿ

    ನಿದ್ದೆಗೆಡಿಸಿದ ‘ದಿ ಕಾಶ್ಮೀರ್​ ಫೈಲ್ಸ್’​: ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದನ ಕಾರಿನ ಮೇಲೆ ಬಾಂಬ್‌!

    ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ: ಸೋಕಾಲ್ಡ್ ಸೆಕ್ಯುಲರ್​ಗಳು ಎಲ್ಲಿ ಎಂದು ಸಿಎಂ ಬೊಮ್ಮಾಯಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts