More

    ಮಕ್ಕಳಿಗೆ ಸ್ಮಾರ್ಟ್​ಫೋನ್​ ಕೊಡಿಸಿದ ತಾಯಿಗೆ ಶಾಕ್​! ರಹಸ್ಯ ಮಾಹಿತಿ ಕದ್ದು ಮಾಡಿದರೊಂದು ಎಡವಟ್ಟು

    ತಿರುವನಂತಪುರಂ: ಕರೊನಾ ವೈರಸ್​ ಸಾಂಕ್ರಮಿಕ ಸೃಷ್ಟಿಸಿರುವ ಬಿಕ್ಕಟ್ಟು ಅಷ್ಟಿಷ್ಟಲ್ಲ. ಪರಸ್ಪರ ಜನ ಒಟ್ಟುಗೂಡಲು ಹೆದರುವಂತ ಸನ್ನಿವೇಶವನ್ನು ಕರೊನಾ ಸೃಷ್ಟಿಸಿದೆ. ಶಾಲೆಗಳಂತೂ ಕಳೆದ ಎರಡು ವರ್ಷಗಳಿಂದ ಸರಿಯಾಗಿ ತೆರೆದೇ ಇಲ್ಲ. ಹೀಗಾಗಿ ಎಲ್ಲವೂ ಆನ್​ಲೈನ್​ ಮಯವಾಗಿದೆ. ಉದ್ಯೋಗವೂ ಕೂಡ ವರ್ಕ್​ ಫ್ರಮ್​ ಹೋಮ್​ ಆಗಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯೋ ಕರೊನಾ ಮಾತ್ರ ಜನರನ್ನು ಬೆಂಬಿಡದೆ ಕಾಡುತ್ತಿದೆ.

    ಎಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೋ ಎಂದು ಆನ್​ಲೈನ್​ ಶಿಕ್ಷಣ ಕೊಡಿಸಿದರೆ, ಅದು ಕೂಡ ಪಾಲಕರಿಗೆ ನುಂಗಲಾರದ ತುತ್ತಾಗಿದೆ. ಅದಕ್ಕೆ ಕಾರಣ ಸ್ಮಾರ್ಟ್​ಫೋನ್​. ಇಡೀ ಜಗತ್ತನೇ ಅಂಗೈನಲ್ಲಿ ತೋರಿಸುವ ಸ್ಮಾರ್ಟ್​ ಫೋನ್​ ಮಕ್ಕಳನ್ನು ಬೇಡದ ವಿಚಾರದತ್ತ ಗಮನ ಸೆಳೆಯುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಕೇರಳದ ಕೋಜಿಕ್ಕೋಡ್​ನಲ್ಲಿ ಒಂದು ಆತಂಕಕಾರಿ ಘಟನೆ ನಡೆದಿದೆ.

    ಆನ್​​ಲೈನ್​ ಕ್ಲಾಸ್​ಗೆ ಉಪಯೋಗವಾಗಲಿ ಎಂದು ಹಣ ಖರ್ಚು ಮಾಡಿ ಸ್ಮಾರ್ಟ್​ ಫೋನ್​ ಕೊಡಿಸಿದರೆ ಪಬ್​ಜಿ ಗೇಮ್​ ಆಡುವ ಮೂಲಕ ಬಾಲಕನೊಬ್ಬ ಪಾಲಕರ ಲಕ್ಷಾಂತರ ರೂಪಾಯಿಯನ್ನು ಕಳೆದಿದ್ದಾನೆ. ಕೋಜಿಕ್ಕೋಡ್​ ಮೂಲದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ 9ನೇ ತರಗತಿ ಹಾಗೂ ಮತ್ತೋರ್ವ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸ್ಮಾರ್ಟ್​ ಫೋನ್​ ಕೊಡಿಸಿದರೆ ಶಿಕ್ಷಣಕ್ಕೆ ಒಳಿತಾಗಲಿದೆ ಎಂದು ಹಣ ಖರ್ಚು ಮಾಡಿ ಇಬ್ಬರಿಗೂ ಫೋನ್​ ಕೊಡಿಸಿದ್ದಾರೆ.

    ಆದರೆ, ಆ ಇಬ್ಬರು ಮಕ್ಕಳು ಶಿಕ್ಷಣಕ್ಕೆ ದಾಸರಾಗವ ಬದಲು ಪಬ್​ಜಿ ದಾಸರಾಗುತ್ತಾರೆ. ಮೊಬೈಲ್​ ಅಕೌಂಟ್​ ಅಪ್​ಗ್ರೇಡ್​ ಮತ್ತು ಆ್ಯಪ್​ ಖರೀದಿಸಲು ತಾಯಿಯ ಬ್ಯಾಂಕ್​ ಖಾತೆಯಿಂದ ಇಬ್ಬರು ಮಕ್ಕಳು ಸುಮಾರು 1 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಬ್ಯಾಂಕ್​ ಖಾತೆಯಿಂದ ಹಣ ಇದ್ದಕ್ಕಿದ್ದಂತೆ ಕಡಿತಗೊಂಡಿರುವುದನ್ನು ನೋಡಿ ತಾಯಿಗೆ ಶಾಕ್​ ಆಗಿದೆ. ಗೊಂದಲಕ್ಕೀಡಾದ ತಾಯಿ ಏನು ಮಾಡಬೇಕೆಂದ ತೋಚದೆ ತಕ್ಷಣ ಸೈಬರ್​ ಕ್ರೈಮ್​ ಪೊಲೀಸರಿಗೆ ಕರೆ ಮಾಡುತ್ತಾಳೆ.

    ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ ತನಿಖೆ ಮಾಡಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತದೆ. ಹಣ ಕಳೆದಿರುವುದು ಬೇರೆ ಯಾರೂ ಅಲ್ಲ, ನಿಮ್ಮ ಮಕ್ಕಳೇ ಎಂದಾಗ ಆಕೆಗೆ ಅಕ್ಷರಶಃ ಆಘಾತವಾಗುತ್ತದೆ. ಪಬ್​ಜಿ ಗೇಮ್​ನಲ್ಲಿ ಬೇರೆ ಲೆವೆಲ್​ ಆಟವಾಡಲು ಲಕ್ಷಾಂತರ ರೂಪಾಯಿಯನ್ನು ಕಳೆದಿದ್ದಾರೆಂದು ಹೇಳುತ್ತಾರೆ.

    ತಾಯಿಯ ಇಂಟರ್ನೆಟ್​ ಬ್ಯಾಂಕಿಂಗ್​ ಲಾಗಿನ್​ ಡೀಟೆಲ್ಸ್​ ಮಕ್ಕಳಿಗೆ ತಿಳಿದಿತ್ತು. ಹೀಗಾಗಿ ಸುಲಭವಾಗಿ ಲಾಗಿನ್​ ಆಗಿ ಲಕ್ಷಾಂತರ ರೂಪಾಯಿಯನ್ನು ಗೋವಿಂದನ ಹುಂಡಿಗೆ ಹಾಕಿದಂತೆ ಪಬ್​ಜಿ ಹುಂಡಿಗೆ ಹಾಕಿದ್ದಾರೆ. ಎಲ್ಲವನ್ನು ಮಾಡಿದ ಬಳಿಕ ತಾಯಿಗೆ ಹೇಳದೆ ಸುಮ್ಮನಾಗಿದ್ದರು. ಆದರೆ, ಪೊಲೀಸರು ಬಂದ ಬಳಿಕ ಎಲ್ಲವೂ ಬಹಿರಂಗವಾಗಿದೆ. ಹೀಗಾಗಿ ಮಕ್ಕಳಿಗೆ ಸ್ಮಾರ್ಟ್​ ಫೋನ್​ ಕೊಡಿಸಿದಾಗ ಸ್ವಲ್ಪ ಎಚ್ಚರದಿಂದ ಇರಬೇಕು ಎಂಬುದನ್ನು ಈ ಘಟನೆ ಒತ್ತಿ ಹೇಳುತ್ತದೆ. (ಏಜೆನ್ಸೀಸ್​)

    Tokyo Olympics| ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸರ್ಕಾರಿ ಉದ್ಯೋಗದ ಜತೆಗೆ 1 ಕೋಟಿ ರೂ. ಬಹುಮಾನ!

    ಇಂದಿನ ತಲ್ಲಣಗಳಿಗೆ ನೈಸರ್ಗಿಕ ಕೃಷಿಯಲ್ಲಿದೆ ಪರಿಹಾರ…

    ಇದು ಕನ್ನಡದ ಮಾಲ್: ಕನ್ನಡದಲ್ಲೇ ಇ-ಮೇಲ್, ಪದಕಣಜ ಜಗಲಿ, ಅಕಾಡೆಮಿ ಇತ್ಯಾದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts