More

    ಆಟೋದಲ್ಲಿ ಹೋಗುವಾಗ ಅಡ್ಡಗಟ್ಟಿದ ಪೊಲೀಸ್​ ಪೇದೆ ಆಡಿದ ಕೆಟ್ಟ ಮಾತು ಕೇಳಿ ನಟಿ ಅರ್ಚನಾ ಆಕ್ರೋಶ!

    ಕೊಚ್ಚಿ: ಫ್ರೆಂಡ್ಸ್​ ಮತ್ತು ಕುಟುಂಬದ ಜತೆ ಪ್ರಯಾಣಿಸುವಾಗ ಪೊಲೀಸ್​ ಪೇದೆಯೊಬ್ಬ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮಲಯಾಳಂ ನಟಿ ಅರ್ಚನಾ ಕವಿ ನೀಡಿದ್ದ ದೂರಿನ ಆಧಾರದ ಮೇಲೆ ಮಟ್ಟಂಚೇರಿ ಸಹಾಯಕ ಆಯುಕ್ತರ ತನಿಖಾ ವರದಿ ಪೂರ್ಣಗೊಂಡಿದ್ದು, ನಗರ ಪೊಲೀಸ್​ ಆಯುಕ್ತರ ಕೈಗೆ ವರದಿ ಹಸ್ತಾಂತರವಾಗಿದೆ.

    ನಟಿ ಅರ್ಚನಾ, ನಡೆದ ಘಟನೆಯನ್ನು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿತು. ಈ ಸಂಬಂಧ ನಟಿ ಯಾವುದೇ ದೂರು ದಾಖಲಿಸಿಲ್ಲ. ಆದರೂ ಪೊಲೀಸರೇ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿದ್ದು, ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ರಾಜ್ಯ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ವರ್ಗಾಹಿಸಲಿದೆ. ನಟಿ ಮಾಡಿರುವ ಆರೋಪವನ್ನು ಪೊಲೀಸ್​ ಪೇದೆ ಅಲ್ಲಗೆಳೆದಿದ್ದಾರೆ. ಬದಲಾಗಿ ನಟಿ ಅರ್ಚನಾ ಅವರೇ ಕೆಟ್ಟದಾಗಿ ನಡೆದುಕೊಂಡರು ಎಂದಿದ್ದಾರೆ. ಗಸ್ತು ತಿರುಗುವ ವೇಳೆ ನಾನು ಕೆಲವೊಂದು ಮಾಹಿತಿಯನ್ನಷ್ಟೇ ಕೇಳಿದೆ. ಆದರೆ, ಕೆಟ್ಟದಾಗಿ ನಡೆದುಕೊಳ್ಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಟಿ ಅರ್ಚನಾ ಫೋರ್ಟ್​ ಕೊಚ್ಚಿಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆದಲ್ಲಿ ಪೊಲೀಸ್​ ಪೇದೆ ಆಕೆಯನ್ನು ತಡೆದರು. ಬೀಚ್​ಗೆ ಹೋಗುವುದಾದರೆ ಮುಂದೆ ಹೋಗಲು ಬಿಡುವುದಿಲ್ಲ ಎಂದರು. ಆಕೆಯ ನಿವಾಸವು ಹತ್ತಿರದಲ್ಲಿದೆ ಎಂದು ಆಟೋ ಚಾಲಕ ಹೇಳಿದಾಗ ಹೋಗಲು ಅನುಮತಿಸಿದರು ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

    ಆಟೋದಲ್ಲಿ ಹೋಗುವಾಗ ಅಡ್ಡಗಟ್ಟಿದ ಪೊಲೀಸ್​ ಪೇದೆ ಆಡಿದ ಕೆಟ್ಟ ಮಾತು ಕೇಳಿ ನಟಿ ಅರ್ಚನಾ ಆಕ್ರೋಶ!

    ಅರ್ಚನಾ ಕವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ ಪೊಲೀಸ್​ ಅವರನ್ನು ಲೈಂಗಿಕ ಕಾರ್ಯಕರ್ತೆಯರಂತೆ ನಡೆಸಿಕೊಂಡರಂತೆ. ಪೊಲೀಸ್​ ಪೇದೆ ನಾನು ಪ್ರಯಾಣಿಸುತ್ತಿದ್ದ ಆಟೋವನ್ನು ತಡೆದರು. ಎಲ್ಲಿಗೆ ಹೋಗುತ್ತಿದ್ದೀರಾ? ಮತ್ತು ಏನಕ್ಕೆ ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಇದನ್ನೆಲ್ಲ ಯಾಕೆ ವಿಚಾರಿಸುತ್ತಿದ್ದಾರೆ ಎಂದು ನಾನು ಮತ್ತೆ ಕೇಳಿದಾಗ ಬಹಳ ಕೆಟ್ಟದಾಗಿ ಮಾತನಾಡಿದರು ಎಂದು ಆರೋಪಿಸಿದ್ದಾರೆ.

    ಇದಷ್ಟೇ ಅಲ್ಲದೆ, ಪೊಲೀಸ್​ ಪೇದೆ ಮನೆಗೆ ಹೋಗುವವರೆಗೂ ಹಿಂಬಾಲಿಸಿದರು. ಇದರಿಂದ ಅಸಮಾಧಾನಗೊಂಡಿದ್ದರಿಂದ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಎಂದು ನಟಿ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

    ಅಲೆಕ್ಸಾದಲ್ಲಿ ಅದಿತಿ: ವಿಶೇಷ ತನಿಖಾಧಿಕಾರಿಯ ಪಾತ್ರದಲ್ಲಿ ನಟನೆ

    ಟೆಕ್ಸಾಸ್​ ಫೈರಿಂಗ್​ ಪ್ರಕರಣ: ಶಾಲಾ ಮಕ್ಕಳ ಮೇಲಿನ ದಾಳಿಗೂ ಮುನ್ನ ದಾಳಿಕೋರ ಸುಳಿವು ಕೊಟ್ಟಿದ್ದನಾ?

    ಇದು ಸಹಾಯಕ ನಿರ್ದೇಶಕರ ಕಥೆ!; ರಿಷಬ್ ಶೆಟ್ಟಿ ಚಿತ್ರದಲ್ಲಿ ಯೋಗರಾಜ್ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts