More

    ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

    ಮುಂಬೈ: ನೀಲಿ ಚಿತ್ರಗಳನ್ನು ತಯಾರಿಸಿ ಬೇರೆ ಬೇರೆ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದಲ್ಲಿ ಬಾಲಿವುಡ್​ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮಾಡೆಲ್​ ಕಂ ನಟಿ ಪೂನಂ ಪಾಂಡೆ ಬಂಧನ ಕುರಿತು ಮಾತನಾಡಿದ್ದು, 2019ರಲ್ಲಿ ಕುಂದ್ರಾ ವಿರುದ್ಧ ದೂರು ನೀಡಿದ್ದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

    ಪೂನಂಗೆ ಸಂಬಂಧಿಸಿದ ವಿಡಿಯೋವನ್ನು ಅನಧಿಕೃತವಾಗಿ ಬಳಸಿದ ಆರೋಪದ ಮೇಲೆ ಕುಂದ್ರಾ ವಿರುದ್ಧ 2019ರಲ್ಲಿ ಪೂನಂ ದೂರು ನೀಡಿ ಸುದ್ದಿಯಾಗಿದ್ದರು. ಸದ್ಯದ ಪ್ರಕರಣದಲ್ಲಿ ಕುಂದ್ರಾರನ್ನು ಕೋರ್ಟ್​ ಜುಲೈ 23ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿದೆ. ಪೂನಂ ಪ್ರಕರಣಕ್ಕೆ ಬರುವುದಾದರೆ, 2019ರಲ್ಲಿ ವಿರುದ್ಧ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದ ಪೂನಂ, ಕುಂದ್ರಾ ಮತ್ತು ಆತನ ಸಹಾಯಕನ ವಿರುದ್ಧ ದೂರು ನೀಡಿದ್ದರು. ಆ ಸಮಯದಲ್ಲಿ ಇಬ್ಬರು ಕೂಡ ಪೂನಂಗೆ ಸಮ್ಮತಿಯೊಂದಿಗೆ ಆ್ಯಪ್​ ಒಂದಕ್ಕೆ ಒಪ್ಪಂದ ಮಾಡಿಕೊಂಡಿದ್ದರು.ಆದರೆ, ಒಪ್ಪಂದ ಮುಗಿದ ಬಳಿಕವೂ ಪೂನಂಗೆ ಸಂಬಂಧಿಸಿದ ವಿಡಿಯೋವನ್ನು ಅಕ್ರಮವಾಗಿ ಬಳಸಿಕೊಂಡಿರುವ ಆರೋಪವಿದೆ.

    ಒಪ್ಪಂದ ಮುರಿದುಕೊಂಡರು ನನ್ನ ವಿಡಿಯೋ ಮತ್ತು ಫೋಟೋಗಳನ್ನು ನಿರಂತರವಾಗಿ ಆ್ಯಪ್​ನಲ್ಲಿ ಅಪ್​​ಲೋಡ್​ ಮಾಡುತ್ತಿದ್ದರು. ಅಲ್ಲದೆ, “ನಾನು ನಿಮ್ಮೊಂದಿಗೆ ಮಾತನಾಡಲು ಮುಕ್ತಳಾಗಿದ್ದೇನೆ, ಈಗಲೇ ಕರೆ ಮಾಡಿ, ನಾವು ಮಾತನಾಡೋಣ ಮತ್ತು ನಾನು ನಿಮಗಾಗಿ ಬೆತ್ತಲೆ ಆಗಲಿದ್ದೇನೆ” ಎಂಬ ಜಾಹಿರಾತು ಸಂದೇಶದೊಂದಿಗೆ ಫೋಟೋ-ವಿಡಿಯೋಗಳ ಜತೆಯಲ್ಲಿ ನನ್ನ ಮೊಬೈಲ್​ ನಂಬರ್​ ಹಾಕಿ ಹರಿಬಿಟ್ಟಿದ್ದರು. ಅಲ್ಲಿಂದಾಚೆಗೆ ಸಾಕಷ್ಟು ಕರೆಗಳು ಬರುತ್ತಿದ್ದವು. ನಿಮಿಷ, ನಿಮಿಷಕ್ಕೂ ಕರೆಗಳು ಬರುತ್ತಿದ್ದವು. ನೂರಲ್ಲ, ಸಾವಿರಾರು ಕರೆಗಳು ಬರುತ್ತಿದ್ದವು. ನನ್ನೊಂದಿಗೆ ನೇರವಾಗಿಯೇ ಮಂಚಕ್ಕೆ ಆಹ್ವಾನಿಸುತ್ತಿದ್ದರು. ಅಲ್ಲದೆ, ನನಗೆ ಪೋರ್ನ್​ ವಿಡಿಯೋಗಳು ಮತ್ತು ಚಿತ್ರಗಳನ್ನು ಕಳುಹಿಸಲು ಶುರು ಮಾಡಿದರು ಎಂದು ಪೂನಂ ವಿಡಿಯೋದಲ್ಲಿ ಹೇಳಿಕೊಂಡಿದ್ದಳು. ಸಾಕಪ್ಪ ಸಾಕು ಅವರ ಸಹವಾಸ ಅನ್ನುವಷ್ಟರ ಮಟ್ಟಿಗೆ ತೊಂದರೆ ಎದುರಿಸಿದ್ದರಂತೆ ಪೂನಂ.

    ಇದರಿಂದಾಗಿ ನಾನು ಮೂರು ತಿಂಗಳು ಭಾರತವನ್ನು ಬಿಡಬೇಕಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಅಂದುಕೊಂಡು ದೇಶ ತೊರೆದಿದ್ದೆ. ಬಹುಬೇಗನೇ ಮರಳಿ ಬಂದಾಗ, ಮತ್ತೆ ಅಶ್ಲೀಲ ಸಂದೇಶ ಮತ್ತು ಕರೆಗಳ ಸರಣಿ ಆರಂಭವಾಯಿತು. ಕೆಲವೊಮ್ಮೆ ಕರೆ ಸ್ವೀಕರಿಸಿದಾಗ ಆ ಕಡೆಯಿಂದ ತುಂಬಾ ದೀರ್ಘ ಉಸಿರಾಟದ ದನಿ ಕೇಳುತ್ತಿತ್ತು. ಅಲ್ಲದೆ, ಕರೆ ಮಾಡಿದವರು ನನ್ನ ವಿಳಾಸವನ್ನು ಸಹ ಕೇಳುತ್ತಿದ್ದರು. ಇದಾದ ಬಳಿಕ ನನ್ನ ನಂಬರ್​ ಅನ್ನು ಬದಲಾಯಿಸಿದೆ. ನಂತರ ಆ್ಯಪ್​ ಕಂಪನಿಯ ಸಹವರ್ತಿಗಳಲ್ಲಿ ಒಬ್ಬರಾಗಿದ್ದ ಸೌರಭ್​ ಕುಶ್ವಾಗೆ ಮೆಸೇಜ್​ ಮಾಡಿ ನನ್ನ ಫೋಟೋ ಮತ್ತು ವಿಡಿಯೋಗಳನ್ನು ಆ್ಯಪ್​ನಲ್ಲಿ ಅಪ್​ಲೋಡ್​ ಮಾಡುವುದನ್ನು ನಿಲ್ಲಿಸುವಂತೆ ಕೇಳಿದೆ. ಅದರ ನಂತರವೂ ನನ್ನ ಹೊಸ ನಂಬರ್​ಗೆ ಕರೆಗಳು ಬರುವುದು ಶುರುವಾಯಿತು ಎಂದು ಪೂನಂ ಹಿಂದೊಮ್ಮೆ ನೋವು ತೋಡಿಕೊಂಡಿದ್ದರು.

    ಪೂನಂ ಆರೋಪಕ್ಕೆ ಕುಂದ್ರಾ ಏನು ಹೇಳಿದ್ದರು?
    ತನ್ನನ್ನು ಸಮರ್ಥಿಸಿಕೊಂಡಿದ್ದ ರಾಜ್​ ಕುಂದ್ರಾ, ನಾನು ಆ ಕಂಪನಿಯಿಂದ ಹೊರಬಂದಿದ್ದೇನೆ. ಆರ್ಮ್ಸ್​ಪ್ರೈಮ್​ ಮೀಡಿಯಾ ಹೆಸರಿನ ಕಂಪನಿಗೆ ಕಳೆದ ವರ್ಷ ನಾನು ಕೂಡ ಬಂಡವಾಳ ಹೂಡಿದ್ದೆ. ಇದು ಸೆಲೆಬ್ರಿಟಿಗಳಿಗಾಗಿ ಆ್ಯಪ್​ ತಯಾರಿಸುತ್ತದೆ. ಪ್ರಸ್ತುತ ಕಂಪನಿಯ ಮಾಲೀಕರಿಗೆ ನನ್ನ ಪಾಲಿನ ಷೇರನ್ನು ಮಾರಾಟ ಮಾಡಿ 2019ರ ಡಿಸೆಂಬರ್​ನಲ್ಲಿ ನಾನು ಕೂಡ ಕಂಪನಿಯಿಂದ ಹೊರಬಂದಿರುವುದರಿಂದ ಪೂನಂ ದೂರಿನ ಬಗ್ಗೆ ನನಗೇನು ತಿಳಿದಿಲ್ಲ ಎಂದು ಹೇಳಿದ್ದರು.

    ಸದ್ಯ ನೀಲಿ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೂನಂ ಪಾಂಡೆ, ಕುಂದ್ರಾ ಅವರ ಹೃದಯವು ಪ್ರಸ್ತುತ ಅವರ ಪತ್ನಿ ಶಿಲ್ಪಾ ಶೆಟ್ಟಿ ಮತ್ತು ಅವರ ಇಬ್ಬರು ಮಕ್ಕಳ ಬಳಿಗೆ ಹೋಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ರಾಜ್​ ಕುಂದ್ರಾ ತಯಾರಿಸಿದ್ದು ಬ್ಲೂ ಫಿಲ್ಮ್​ ಅಲ್ಲಪ್ಪಾ… ಇದು ಮಾಮೂಲು ಎಂದ ಮಾಡೆಲ್​ ಗೆಹನಾ!

    ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅರೆಸ್ಟ್​: ಅಶ್ಲೀಲ ಸಿನಿಮಾ ತಯಾರಿಸಿ ಪ್ರಸಾರ ಮಾಡುತ್ತಿದ್ದ ಆರೋಪ

    ಬ್ಲೂ ಫಿಲ್ಮ್​ ಕೇಸ್​ನಲ್ಲಿ ಪತಿ ಅರೆಸ್ಟ್​; ನಟಿ ಶಿಲ್ಪಾ ಶೆಟ್ಟಿ ‘ಚಾಪ್ಟರ್​’ ಕ್ಲೋಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts