More

    ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನಗಳಲ್ಲಿ ಮುಂದಿದೆ: ಸಿಎಂ ಯೋಗಿ​ಯನ್ನು ಕೊಂಡಾಡಿದ ಪ್ರಧಾನಿ ಮೋದಿ

    ಲಖನೌ: ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಕೊಂಡಾಡಿದರು.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ರಾಜ್ಯ ಬಿಜೆಪಿ ಪಕ್ಷ ಚುನಾವಣೆ ಎದುರಿಸಲು ಸರ್ವಸನ್ನದ್ಧವಾಗಿದೆ. ಜಾಟ್​ ಸಮುದಾಯದ ಐಕಾನ್​ ರಾಜಾ ಮಹೇಂದ್ರ ಪ್ರತಾಪ್​ಸಿಂಗ್​ ಹೆಸರಿನಲ್ಲಿ ಆಲಿಗಢದಲ್ಲಿ ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯವನ್ನು ಇಂದು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.

    ಒಂದು ಕಾಲದಲ್ಲಿ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿ ಕಾಣುತ್ತಿದ್ದ ಯುಪಿ ಇಂದು ದೇಶದ ಅತಿದೊಡ್ಡ ಅಭಿವೃದ್ಧಿ ಅಭಿಯಾನಗಳನ್ನು ಮುನ್ನಡೆಸುತ್ತಿರುವುದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ಹೊಗಳಿದರು.

    ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಉತ್ತರ ಪ್ರದೇಶವು ಅನುಕೂಲಕರವಾದ ಗಮ್ಯಸ್ಥಾನವಾಗಿ ಉತ್ತರ ಪ್ರದೇಶ ಹೊರಹೊಮ್ಮುತ್ತಿದೆ. ಅನುಕೂಲಕರ ವಾತಾವರಣವನ್ನು ಬೆಳೆಸಿದಾಗ ಮತ್ತು ಅಗತ್ಯ ಸಂಪನ್ಮೂಲಗಳನ್ನು ಒದಗಿಸಿದಾಗ ಮಾತ್ರ ಇದು ಸಂಭವಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.

    ಇಂದು ಉತ್ತರ ಪ್ರದೇಶವು ಡಬಲ್ ಎಂಜಿನ್ ಸರ್ಕಾರದ ದ್ವಿಗುಣ ಲಾಭದ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಪ್ರಧಾನಿ, ಈ ಹಿಂದೆ ಡಬಲ್-ಎಂಜಿನ್ ಪದವನ್ನು ಬಳಿಸಿದ್ದ ಬಳಸಿದ ಪ್ರತಿಸ್ಪರ್ಧಿಗಳಿಗೆ ಪ್ರಧಾನಿ ತಿರುಗೇಟು ನೀಡಿದರು. (ಏಜೆನ್ಸೀಸ್​)

    ಲೈಂಗಿಕ ಸಂಭೋಗ ಅಥವಾ ಆಹಾರ! ಎರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಕೊಟ್ಟ ಉತ್ತರ ವೈರಲ್​

    40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!

    ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts