More

    40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!

    ವಿಯಾಟ್ನಾಂ: ಸುಮಾರು 40 ವರ್ಷಗಳ ಕಾಲ ಕಾಡಿನಲ್ಲೇ ಜೀವಿಸಿದ್ದ ವಿಯಾಟ್ನಾಂನ ರಿಯಲ್​ ಟಾರ್ಜನ್​ (ಕಾಡು ಮನುಷ್ಯ) ಆಧುನಿಕ ಜಗತ್ತಿಗೆ ಕಾಲಿಟ್ಟ 8 ವರ್ಷದಲ್ಲೇ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿದ್ದಾನೆ. ಕಾಡಿನಲ್ಲಿ ಆರೋಗ್ಯಯುತವಾಗಿ, ಸ್ವಚ್ಛಂಧವಾಗಿ ಓಡಾಡಿಕೊಂಡಿದ್ದ ಕಾಡು ಮನುಷ್ಯ, ನಾಗರೀಕ ಜಗತ್ತಿಗೆ ಕಾಲಿಟ್ಟಿದ್ದೇ ಆತನ ಸಾವಿಗೆ ಕಾರಣವಾಯಿತೇನೋ ಎಂಬ ಚರ್ಚೆ ಎಲ್ಲೆಡೆ ಶುರುವಾಗಿದ್ದು, ಆಕ್ರೋಶಗಳು ವ್ಯಕ್ತವಾಗಿವೆ.

    ಹೋವಾ ವಾನ್‌ ಲಂಗ್‌ (52) ಸೋಮವಾರ ಲಿವರ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾನೆ. ಈತ ಕಳೆದ 40 ವರ್ಷಗಳಿಂದ ಕಾಡಿನಲ್ಲಿಯೇ ಬೆಳೆದಿದ್ದ. 1972ರಲ್ಲಿ ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕ ಬಾಂಬ್‌ ದಾಳಿ ನಡೆಸಿತ್ತು. ಆ ಸಮಯದಲ್ಲಿ ಈತ ತಾಯಿ ಮತ್ತು ತನ್ನ ಒಡಹುಟ್ಟಿದವರನ್ನು ಕಳೆದುಕೊಂಡಿದ್ದ. ಬದುಕಿ ಉಳಿದದ್ದು ಈತನ ತಂದೆ ಮತ್ತು ಒಬ್ಬ ಸಹೋದರ. ಅದೇ ವೇಳೆ ಜೀವ ಕಾಪಾಡಿಕೊಳ್ಳಲು ಅರಣ್ಯಕ್ಕೆ ಇವರು ಓಡಿಹೋಗಿದ್ದರು.

    ಆ ಸಮಯದಲ್ಲಿ ಮಗುವಾಗಿದ್ದ ಹೋವಾ 41 ವರ್ಷ ಬೆಳೆದದ್ದು ಇದೇ ದಟ್ಟಡವಿಯಲ್ಲಿ. ಕಾಂಗ್ ಗಾಯ್ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ದಟ್ಟಡವಿಯಲ್ಲಿಯೇ ಇವರ ವಾಸ. ಜೇನುತುಪ್ಪ, ಹಣ್ಣುಗಳು ಹಾಗೂ ವನ್ಯಜೀವಿಗಳನ್ನು ತಿಂದುಕೊಂಡು ಬದುಕಿತ್ತು ಈ ಕುಟುಂಬ. ಮರಮುಟ್ಟು ಬಳಸಿಕೊಂಡು ಮನೆಕಟ್ಟಿಕೊಂಡಿದ್ದರು.

    ಛಾಯಾಗ್ರಾಹಕ ಅಲ್ವಾರೋ ಸೆರೆಜೋ ಕಾಡಿನಲ್ಲಿ ಛಾಯಾಚಿತ್ರ ಮಾಡಲು ಹೋದಾಗ ಇವರನ್ನು ನೋಡಿದ್ದರು. ಹೋವಾ ಇವರ ಕೈಗೆ ಸಿಕ್ಕಿದ್ದ. 8 ವರ್ಷಗಳ ಹಿಂದೆ ಕಾಡಿನಿಂದ ನಾಡಿಗೆ ಕರೆತರಲಾಗಿತ್ತು. ಆ ಸಮಯದಲ್ಲಿ ಹೆಂಗಸರನ್ನು ಕಂಡು ಈತನಿಗೆ ವಿಚಿತ್ರ ಎನಿಸಿತ್ತು. ಹೋವಾನನ್ನು ಅಲ್ವಾರೋ ಮಾತನಾಡಿಸಿದಾಗ ಹೆಣ್ಣುಮಕ್ಕಳು ಭೂಮಿಯ ಮೇಲೆ ಇರೋದೇ ಗೊತ್ತಿಲ್ಲ ಎಂದಿದ್ದ.

    ಈ ಕುರಿತು ಮಾಹಿತಿ ನೀಡಿರುವ ಅಲ್ವಾರೋ, ಜನರನ್ನು ಕಂಡೊಡನೆಯೇ ಇವರೆಲ್ಲಾ ಓಡಿ ಹೋಗುತ್ತಿದ್ದರು. ಹೋವಾನನ್ನು ಹೇಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇನೆ. ಈತನಿಗೆ ಗಂಡು ಮತ್ತು ಹೆಣ್ಣಿನ ನಡುವಿನ ಅಂತರ ಗೊತ್ತಿಲ್ಲ. ಆದ್ದರಿಂದ ಲೈಂಗಿಕ ಆಸಕ್ತಿ ಎನ್ನುವುದೂ ಇಲ್ಲ, ಮಕ್ಕಳು ಹುಟ್ಟಲು ಹೆಣ್ಣುಮಕ್ಕಳು ಬೇಕು ಎನ್ನುವುದೂ ತಿಳಿದಿಲ್ಲ, ಆ ಬಗ್ಗೆ ಆತನಿಗೆ ಯೋಚನೆಯೂ ಬಂದಿಲ್ಲ, ಸಂಭೋಗದ ಬಗ್ಗೆ ಕೇಳಿದ್ರೆ ಹಾಗೆಂದರೇನು ಎಂದು ಪ್ರಶ್ನಿಸಿದ್ದಾನೆ ಎಂದಿದ್ದಾರೆ. ಸದ್ಯ ಈತನನ್ನು ‘ರಿಯಲ್ ಟಾರ್ಜನ್’ ಎಂದು ಕರೆಯಲಾಗಿತ್ತು. ಕಾಡಿನ ಪ್ರಶಾಂತ ವಾತಾವರಣದಲ್ಲಿ ಈತನಿಗೀಗ ನಾಡಿನ ಗಜಿಬಿಜಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದ.

    2013ರಿಂದ ನಾಗರಿಕ ಜಗ್ಗತ್ತಿನಲ್ಲಿ ವಾಸಿಸಲು ಶುರು ಮಾಡಿದ ಬಳಿಕ ಹೋವಾಗೆ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುವುದು ಕಷ್ಟವಾಯಿತಂತೆ. ಈ ಆಧುನಿಕ ಪ್ರಪಂಚದ ಒತ್ತಡಗಳು ಮತ್ತು ಕಳಪೆ ಆಹಾರವು ಹೋವಾ, ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಆತನ ಸ್ನೇಹಿತರು ಮತ್ತು ವೀಕ್ಷಕರು ನಂಬಿದ್ದಾರೆ.

    ಹೋವಾ ಸ್ನೇಹಿತ ಅಲ್ವಾರೊ ಸೆರೆಜೊ ಹೇಳಿಕೆ ಪ್ರಕಾರ ಸಂಸ್ಕರಿಸಿದ ಆಹಾರವನ್ನು ಸೇವಿಸಲು ಮತ್ತು ಕೆಲವೊಮ್ಮೆ ಮದ್ಯಪಾನ ಮಾಡಲು ಪ್ರಾರಂಭಿಸಿದ ನಂತರ ಬಹುಶಃ ‘ಆಧುನಿಕ’ ಜೀವನವು ಅವರಿಗೆ ಮಾರಕ ಪರಿಣಾಮಗಳನ್ನು ಉಂಟುಮಾಡಿರಬಹುದು ಎಂದಿದ್ದಾರೆ. ಅಲ್ಲದೆ, ಅವನೊಬ್ಬ ಸುಂದರ ಮನುಷ್ಯ, ಅವನನ್ನು ಮರೆಯುವುದು ಅಸಾಧ್ಯ, ನಾನು ಅವನನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುತ್ತೇನೆ ಅಂದಿದ್ದಾರೆ. (ಏಜೆನ್ಸೀಸ್​)

    ‘ಹೆಣ್ಣು ಅಂತ ಭೂಮಿ ಮೇಲೆ ಇದ್ಯಾ? ಮಕ್ಕಳು ಹುಟ್ಟಲು ಹೆಂಗಸ್ರು ಬೇಕಾ? ಸೆಕ್ಸ್‌ ಎಂದ್ರೇನು?’

    ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

    ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts