More

    ಸ್ಪರ್ಧೆಯಲ್ಲಿ ಭಾಗವಹಿಸಿ ಚೀತಾಗಳಿಗೆ ಸೂಕ್ತ ಹೆಸರು ಸೂಚಿಸುವವರಿಗೆ ಬಂಪರ್​ ಆಫರ್ ಕೊಟ್ಟ ಪ್ರಧಾನಿ ಮೋದಿ

    ನವದೆಹಲಿ: ಭಾರತದಲ್ಲಿ ಅಳಿದು ಹೋಗಿದ್ದ ಚೀತಾ ಸಂತತಿ ಮತ್ತೆ ವಾಪಸ್ ಆಗಿರುವುದನ್ನು ನೋಡಿ ದೇಶದ ಹಲವು ಮೂಲೆಗಳಿಂದ ಜನರು ಸಂತಸ ವ್ಯಕ್ತಪಡಿಸಿದ್ದಾರೆ, ಸಂಭ್ರಮಿಸಿದ್ದಾರೆ ಮತ್ತು ಹೆಮ್ಮೆ ಪಟ್ಟಿದ್ದಾರೆ. ನಮ್ಮ ಕಾರ್ಯಪಡೆಯು ಚೀತಾಗಳನ್ನು ಮೇಲ್ವಿಚಾರಣೆ ಮಾಡುತಿದ್ದು, ಅದರ ಆಧಾರದ ಮೇಲೆ ನೀವು ಅವುಗಳನ್ನು ಯಾವಾಗ ನೋಡಬಹುದು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಇಂದು ರೆಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ನ 93ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

    mygovt. com ನಲ್ಲಿ ಸ್ಪರ್ಧೆಯೊಂದನ್ನು ಆಯೋಜಿಸಲಾಗುವುದು. ಇದರಲ್ಲಿ ಚೀತಾಗಳ ಕುರಿತ ಅಭಿಯಾನ ಮತ್ತು ಅವುಗಳು ಹೆಸರಿನ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ. ನಮ್ಮ ಸಂಪ್ರದಾಯಗಳಿಗೆ ಹೊಂದಿಕೆಯಾಗುವಂತೆ ಚೀತಾಗಳಿಗೆ ಹೆಸರು ನೀಡಿದರೆ ಉತ್ತಮವಾಗಿರುತ್ತದೆ. ಅಲ್ಲದೆ, ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಸೂಚಿಸಬಹುದು. ಒಟ್ಟಾರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರೆ, ಬಹುಶಃ ಚೀತಾಗಳನ್ನು ವೀಕ್ಷಿಸುವ ಮೊದಲ ವ್ಯಕ್ತಿಯಾಗಿ ನೀವೇ ಆಗಿರಬಹುದು ಎಂದು ಪ್ರಧಾನಿ ಹೇಳಿದರು.

    ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಕರೆತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನ (ಸೆ.17) ದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದರು. ಹುಲಿಯ ಮುಖವನ್ನು ಚಿತ್ರಿಸಿದ ವಿಮಾನವು ಶನಿವಾರ (ಸೆ.17) ಬೆಳಿಗ್ಗೆ 8 ಗಂಟೆಗೂ ಮೊದಲು ಭಾರತೀಯ ವಾಯುಪಡೆ (IAF) ನಿರ್ವಹಿಸುವ ಗ್ವಾಲಿಯರ್‌ನ ಮಹಾರಾಜಪುರ ವಾಯುನೆಲೆಗೆ ಚಿರತೆಗಳನ್ನು ಸಾಗಿಸಿತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮುಂದಾಳತ್ವದಲ್ಲಿ ಏರ್ ಫೋರ್ಸ್ ಹೆಲಿಕಾಪ್ಟರ್‌ಗೆ ಚಿರತೆಗಳನ್ನು ಸಾಗಿಸಿ, ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಯಿತು. ಇದಾದ ಬಳಿಕ ಪ್ರಧಾನಿ ಮೋದಿ ಅವರು ಚಿರತೆಗಳನ್ನು ಉದ್ಯಾನವನಕ್ಕೆ ಅರ್ಪಿಸಿದರು.

    ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬಂದಿವೆ. (ಏಜೆನ್ಸೀಸ್​)

    ಚನ್ನಪಟ್ಟಣದಲ್ಲಿ ಅಪರೂಪದ ಅಟ್ಲಾಸ್​ ಪ್ರಭೇದದ ಪತಂಗ ಪತ್ತೆ: 10-15 ದಿನ ಬದುಕುವ ಜೀವಿಗೆ ಹಾವಿನ ರೂಪದ ರೆಕ್ಕೆಗಳೇ ಆಕರ್ಷಣೆ

    10 ಸಾವಿರಕ್ಕೆ ನನ್ನನ್ನು ನಾನು ಮಾರಿಕೊಳ್ಳಲ್ಲ: ಅಂಕಿತಾಳ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಸ್ಫೋಟಕ ಮಾಹಿತಿ

    ನಯನತಾರಾ-ವಿಘ್ನೇಶ್​ ಅದ್ಧೂರಿ ಮದ್ವೆಯ ಸಣ್ಣ ಝಲಕ್​ ಬಿಡುಗಡೆ ಮಾಡಿದ ನೆಟ್​ಫ್ಲಿಕ್ಸ್: ವೈರಲ್​ ಆಯ್ತು ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts