More

    ಚನ್ನಪಟ್ಟಣದಲ್ಲಿ ಅಪರೂಪದ ಅಟ್ಲಾಸ್​ ಪ್ರಭೇದದ ಪತಂಗ ಪತ್ತೆ: 10-15 ದಿನ ಬದುಕುವ ಜೀವಿಗೆ ಹಾವಿನ ರೂಪದ ರೆಕ್ಕೆಗಳೇ ಆಕರ್ಷಣೆ

    ಚನ್ನಪಟ್ಟಣ: ನಶಿಸುತ್ತಿರುವ ಪ್ರಭೇದಕ್ಕೆ ಸೇರಿರುವ ಅಟ್ಲಾಸ್​ ಪತಂಗ ಚನ್ನಪಟ್ಟಣದಲ್ಲಿ ಪ್ರತ್ಯಕ್ಷವಾಗಿದೆ. ಅಬ್ಬೂರು ಗ್ರಾಮದ ಮಧು ಎಂಬುವವರ ತೋಟದ ಮನೆ ಬಳಿ ಕಂಡುಬಂದಿದ್ದು, ಪರಿಸರ ಪ್ರೇಮಿಯೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

    ಅಟ್ಲಾಸ್​ ಪತಂಗ ಹತ್ತರಿಂದ ಹದಿನೈದು ದಿನ ಬದುಕುವ ಅಲ್ಪಾವಧಿಯ ಕೀಟ. ಪಶ್ಚಿಮ ಘಟ್ಟದಂತಹ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಪ್ರಪಂಚದ ಅತಿ ದೊಡ್ಡ ಗಾತ್ರದ ಕೀಟಗಳ ಜಾತಿಗೆ ಸೇರಿದ್ದು, ರೆಕ್ಕೆಗಳಿಗೆ ಹೋಲಿಸಿದರೆ ಇದರ ದೇಹವು ಚಿಕ್ಕದಾಗಿರುತ್ತದೆ.

    ಹಾವಿನ ರೂಪದ ರೆಕ್ಕೆಗಳು: ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಈ ಪತಂಗಗಳು ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಡುತ್ತವೆ. ಬೆಳಕಿಗೆ ಆಕರ್ಷಿಸಲ್ಪಡುವ ಪತಂಗಗಳಿಗೆ ವಿರೋಧಿಗಳು ಹೆಚ್ಚು, ಹಾಗಾಗಿ ರೆಕ್ಕೆಗಳ ಸುಳಿಗಳು ನಾಗರ ಹಾವಿನ ತಲೆಯಂತಿದ್ದು, ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಬೇಟೆಯಾಡಲು ಬಂದಾಗ, ರೆಕ್ಕೆಗಳನ್ನು ಮೇಲಕ್ಕೆತ್ತಿ ಹಾವು ಅಥವಾ ಜಂತುಗಳ ರೀತಿಯಲ್ಲಿ ಕಾಣುವಂತೆ ಮಾಡಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ. ಮರಿ ಹುಳುಗಳು ಹಕ್ಕಿಗಳಿಗೆ ಆಹಾರವಾದರೆ, ಪ್ರೌಢ ಪತಂಗಗಳನ್ನು ಬಾವಲಿ, ಗೂಬೆ, ಹಲ್ಲಿ, ಬೆಕ್ಕು, ಕರಡಿಗಳು ಭಕ್ಷಿಸುತ್ತವೆ ಎನ್ನಲಾಗಿದೆ.

    ದೇಹದಲ್ಲಿರುವ ದೈಹಿಕ ಒಳ ಶಕ್ತಿಯಿಂದ ಜೀವಿಸುವ ಇವುಗಳಿಗೆ ಪ್ರೌಢಾವಸ್ಥೆ ಬಳಿಕ ಕೇವಲ 10ರಿಂದ 15 ದಿನ ಬದುಕಿರುತ್ತವೆ. ಈ ಪತಂಗಗಳನ್ನು ಬಹುತೇಕ ಮಂದಿ ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿದ್ದಾರೆ.

    ಇಂದೊಂದು ನಶಿಸುತ್ತಿರುವ ಪ್ರಭೇದಕ್ಕೆ ಸೇರಿದ ಪತಂಗವಾಗಿದೆ. ನಮ್ಮ ಭಾಗದಲ್ಲಿ ಇದು ಕಾಣಸಿಗುತ್ತಿರುವುದು ಇದೇ ಮೊದಲು. ಈ ಪತಂಗ ಹಲವು ವಿಶೇಷಗಳಿಂದ ಕೂಡಿದೆ. ಆರಂಭದ ದಿನಗಳಲ್ಲಿ ಇದು ಏನನ್ನೂ ತಿನ್ನುವುದಿಲ್ಲ. ವಿಶೇಷವಾದ ರಕ್ಷಣಾ ವಿಧಾನ ಹೊಂದಿದೆ. ಇದರ ಎರಡೂ ರೆಕ್ಕೆಯ ತುದಿ ಹಾವಿನ ಆಕಾರದಲ್ಲಿರುವುದು ಈ ಪತಂಗದ ಬಹುಮಖ್ಯ ಆಕರ್ಷಣೆ. ಇಂತಹ ಪತಂಗಗಳು ಕಂಡು ಬಂದಾಗ ಹಾನಿ ಮಾಡಬಾರದು.
    |ದಿನೇಶ್​ ವಲಯ ಅರಣ್ಯಾಧಿಕಾರಿ ಚನ್ನಪಟ್ಟಣ

    ತುಮಕೂರಲ್ಲಿ‌‌ ಜೆಡಿಎಸ್​ಗೆ ಶಾಕ್: ಒಂದೇ ದಿನ ನೂರಕ್ಕೂ ಹೆಚ್ಚು ಮಂದಿ ರಾಜೀನಾಮೆ

    ಸಾವಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಘೋಷಣೆ

    30 ಎಕರೆ ಭೂಮಿ, 7 ಮನೆ, 11 ಮಕ್ಕಳಿದ್ದರೂ ತಾಯಿಗಿಲ್ಲ ಆಸರೆ… ಕಣ್ಣೀರಿಡುತ್ತಲೇ ದಯಾಮರಣ ಬೇಡಿದ ಹಾವೇರಿಯ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts