More

    ಬಟ್ಟೆಯನ್ನೇ ಧರಿಸದ ನಿವಾಸಿಗಳು: ಈ ಬೆತ್ತಲೆ ಗ್ರಾಮದ ರಹಸ್ಯ ತಿಳಿದ್ರೆ ಹುಬ್ಬೇರಿಸ್ತೀರಾ!

    ಲಂಡನ್​: ಜಗತ್ತಿನ ತುಂಬ ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನ ಜನರು ಮತ್ತು ಸಂಪ್ರದಾಯಗಳು ಇರುತ್ತವೆ. ಒಬ್ಬರ ಸಂಪ್ರದಾಯವನ್ನು ಇನ್ನೊಬ್ಬರು ಗೌರವಿಸಿ, ಅನುಭವಿಸುವವರು ಇದ್ದಾರೆ. ಆದರೆ, ಕೆಲವೊಂದು ಸಂಪ್ರದಾಯಗಳು ಎಷ್ಟು ವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಬ್ರಿಟನ್​ನ ಈ ಒಂದು ಗ್ರಾಮವೇ ಸಾಕ್ಷಿ.

    ಈ ಗ್ರಾಮವನ್ನು ಬೆತ್ತಲೆ ಗ್ರಾಮವೆಂದೇ ಕರೆಯುತ್ತಾರೆ. ಅದಕ್ಕೆ ಕಾರಣ ಇಲ್ಲಿ ವಾಸಿಸುವ ಮಂದಿ ಬಟ್ಟೆಯನ್ನೇ ಧರಿಸುವುದಿಲ್ಲ. ಇಂತಹ ಚಿತ್ರವಿಚಿತ್ರ ಸಂಪ್ರದಾಯ ಹೊಂದಿರುವ ಗ್ರಾಮದ ಹೆಸರೇ ಹರ್ಟ್​ಫೋರ್ಡ್​ಶೈರ್​ (ಸ್ಪೀಲ್‌ಪ್ಲಾಟ್ಜ್). ಇದನ್ನು ಬ್ರಿಟನ್​ನ ರಹಸ್ಯ ಬೆತ್ತಲೆ ಗ್ರಾಮವೆಂದೇ ಕರೆಯುತ್ತಾರೆ.

    ಇಲ್ಲಿನ ಜನರು ಒಂದು ವರ್ಷಗಳ ಕಾಲ ಬಟ್ಟೆಯನ್ನೇ ಬಳಸದೇ ಬೆತ್ತಲೆಯಾಗಿ ಕಳೆಯುತ್ತಾರೆ. ಇಲ್ಲಿನ ಯಾವುದೇ ಮೂಲಭೂತ ಕೊರತೆಗಳಾಗಲಿ ಇಲ್ಲ. ಆದರೆ, ಇಲ್ಲಿನ ಮಂದಿ ಹಿಂದಿನಿಂದಲೂ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದಾರೆ. ದೊಡ್ಡವರು ಮಾತ್ರವಲ್ಲ ಚಿಕ್ಕಮಕ್ಕಳು ಸಹ ಸಂಪ್ರದಾಯ ಪಾಲಿಸುತ್ತಿದ್ದಾರೆ.

    ಇದನ್ನೂ ಓದಿರಿ: ಎ, ಬಿ, ಸಿ, ಡಿ…. ಯಾವ ಗಾಳಕ್ಕೆ ಸಿಲುಕಿದೆ ವೃತ್ತದಲ್ಲಿರುವ ಮೀನು? ನಿಮಗೇನಾದರೂ ಗೊತ್ತಾ?

    ಹರ್ಟ್​ಫೋರ್ಡ್​ಶೈರ್ ಯುಕೆಯಲ್ಲೇ ಹಳೆಯ ಕಾಲನಿಯಾಗಿದೆ. ಇಲ್ಲಿ ಸುಸಜ್ಜಿತ ಮನೆ ಮಾತ್ರವಲ್ಲ, ಸ್ವಿಮ್ಮಿಂಗ್​ ಫೂಲ್​ ಸಹ ಇವೆ. ಬಿಯರ್​ ಕುಡಿಯುವುದು ಸಹ ಸಾಮಾನ್ಯವಾಗಿದೆ.

    ಇನ್ನು ಈ ಗ್ರಾಮದ ಬಗ್ಗೆ ಅನೇಕ ಸಾಕ್ಷ್ಯಾಚಿತ್ರಗಳು ಸಹ ಚಿತ್ರೀಕರಿಸಲಾಗಿದೆ. ಶಾರ್ಟ್​ ಮೂವೀಗಳನ್ನು ಮಾಡಿದ್ದಾರೆ. ಬೆತ್ತಲೆಯಾಗಿದ್ದರೂ ಸಹಜವಾಗಿಯೇ ಇಲ್ಲಿನ ಜೀವನ ನಡೆಯುತ್ತದೆ. ವ್ಯಾಪಾರಿಗಳು, ಡೆಲಿವರಿ ಬಾಯ್​ಗಳು ಹಾಗೂ ಅಕ್ಕಪಕ್ಕದ ಗ್ರಾಮದವರು ಬಂದು ಹೋಗುತ್ತಾರೆ. (ಏಜೆನ್ಸೀಸ್​)

    ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

    ಕರೊನಾ ಪರೀಕ್ಷೆಗೆ 200 ರೂ. ಪಡೆದ ಸರ್ಕಾರಿ ಆಸ್ಪತ್ರೆ ಡಾಕ್ಟರ್​; ಕೋಣನಕುಂಟೆ ಪಿಎಚ್‌ಸಿಯಲ್ಲಿ ಭ್ರಷ್ಟಾಚಾರ

    ಕರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್​ಡೆಸಿವಿರ್ ಕಳ್ಳ ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts