More

    ದುಬಾರಿ ಮರ್ಸಿಡೆಸ್​ ಕಾರಲ್ಲಿ ಬಂದು ಉಚಿತ ಪಡಿತರ ಕೊಂಡೊಯ್ದ BPL ಕಾರ್ಡ್ ಹೊಂದಿರುವ ವ್ಯಕ್ತಿ: ವಿಡಿಯೋ ವೈರಲ್

    ಚಂಡೀಗಢ: ವ್ಯಕ್ತಿಯೊಬ್ಬ​ ಸರ್ಕಾರಿ ಪಡಿತರ ಅಂಗಡಿಗೆ ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಬಂದು ಸರ್ಕಾರ ನೀಡುವ ಉಚಿತ ಪಡಿತರವನ್ನು ಕೊಂಡೊಯ್ದ ಘಟನೆ ಪಂಜಾಬ್​ನ ಹೊಶಿಯಾರ್​ಪುರದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾರುಕಟ್ಟೆ ಅಥವಾ ಶಾಪಿಂಗ್ ಮಾರ್ಟ್‌ಗಳಿಂದ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದ ಬಡ ಜನರಿಗಾಗಿ ಸರ್ಕಾರವು ರಚಿಸಿರುವ ಸೌಲಭ್ಯವನ್ನು ಪಂಜಾಬ್ ವ್ಯಕ್ತಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಇದೀಗ ವರದಿಯಾಗಿದೆ. ಕಾರಿನಲ್ಲಿ ಬಂದ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿರುವ ವರ್ಗದ ಕಾರ್ಡ್​ ಅನ್ನು ಹೊಂದಿರುವುದಾಗಿ ತಿಳಿದುಬಂದಿದೆ.

    ರೇಷನ್​ ತೆಗೆದುಕೊಂಡು ಕಾರಿನ ಒಳಗೆ ತುಂಬುತ್ತಿರುವ ವಿಡಿಯೋವನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್​ ಆಗಿದೆ. ಮರ್ಸಿಡಿಸ್ ಅನ್ನು ಓಡಿಸಿದ ವ್ಯಕ್ತಿಯ ಹೆಸರು ರಮೇಶ್ ಸೈನಿ. ವಾಹನವು ತನ್ನ ಸಂಬಂಧಿಯದ್ದು ಎಂದು ಹೇಳಿಕೊಂಡಿದ್ದಾನೆ. ನಮ್ಮ ಸಂಬಂಧಿ ಭಾರತದಲ್ಲಿ ವಾಸಿಸುತ್ತಿಲ್ಲ ಮತ್ತು ಕಾರನ್ನು ನಮ್ಮ ಸ್ಥಳದಲ್ಲಿಯೇ ನಿಲ್ಲಿಸುತ್ತಾರೆ. ಇದು ಡೀಸೆಲ್ ಕಾರು, ಆದ್ದರಿಂದ ನಾವು ಅದನ್ನು ಕೆಲವು ದಿನಗಳಿಂದ ಚಲಾಯಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ನನಗೆ ಸಣ್ಣ ವೀಡಿಯೊಗ್ರಫಿ ವ್ಯಾಪಾರವಿದೆ, ನನ್ನ ಮಕ್ಕಳು ಸಹ ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ಅವರನ್ನು ಖಾಸಗಿ ಶಾಲೆಗೆ ಕಳುಹಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ಸೈನಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್‌ನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕತರುಚಕ್ ಅವರು ನಿಜವಾದ ಫಲಾನುಭವಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಎರಡೇ ನಿಮಿಷದಲ್ಲಿ ಮುಗಿಯುತ್ತದೆ! ನಟಿ ರೆಜಿನಾ ಹೇಳಿದ ಅಶ್ಲೀಲ ಜೋಕ್ಸ್​ ಕೇಳಿ ಆ್ಯಂಕರ್​ ಶಾಕ್​, ವಿಡಿಯೋ ವೈರಲ್​

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

    ಶಾಲೆಗೆ ಹೋದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ: ನೇತ್ರದಾನ ಮೂಲಕ ಸಾವಿನ ನೋವಲ್ಲೂ ಕುಟುಂಬದ ಸಾರ್ಥಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts