More

    ಉತ್ತರ ಕೊರಿಯಾದಲ್ಲಿ 10 ದಿನ ಯಾರೊಬ್ಬರು ನಗುವಂತಿಲ್ಲ! ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಪ್ಯೊಂಗ್ಯಾಂಗ್: ಇಂದು ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್​ ಜಾಂಗ್ Il ಅವರ 10ನೇ ವರ್ಷದ ಮರಣ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ​ 10 ದಿನಗಳ ಕಾಲ ನಗುವುದನ್ನು ಕೊರಿಯಾದಲ್ಲಿ ಬ್ಯಾನ್​ ಮಾಡಲಾಗಿದೆ.

    ನಗುವುದು ಮಾತ್ರವಲ್ಲ ಶೋಕಾಚರಣೆಯ ಅವಧಿಯಲ್ಲಿ ಹಲವು ನಿರ್ಬಂಧಗಳನ್ನು ಉತ್ತರ ಕೊರಿಯಾದಲ್ಲಿ ಹೇರಲಾಗಿದೆ. ಮದ್ಯಪಾನ ಮಾಡುವಂತಿಲ್ಲ, ನಗುವಂತಿಲ್ಲ, ಶಾಪಿಂಗ್ ಹಾಗೂ ವಿರಾಮದ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ಕೊರಿಯಾದ ಸಿನುಯಿಜು ಎಂಬ ಗಡಿಭಾಗದ ನಗರದ ನಿವಾಸಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ಹತ್ತು ದಿನಗಳಲ್ಲಿ ಯಾವುದಾದರೂ ಒಂದು ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಈ ಹಿಂದೆ ಇದೇ ರೀತಿಯ ನಿಯಮಗಳನ್ನು ಹೇರಲಾಗಿತ್ತು. ಈ ವೇಳೆ ಮದ್ಯಪಾನ ಮಾಡಿ ಅನೇಕ ಜನರು ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ಬಂಧಿಸಿ ಶಿಕ್ಷೆ ನೀಡಲಾಗಿತ್ತು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಅತಿರೇಕ ಅಂದರೆ, ಶೋಕಾಚರಣೆ ಅವಧಿಯಲ್ಲಿ ಬೇರೊಬ್ಬರ ಅಂತ್ಯಕ್ರಿಯೆ ನಡೆಸಲು ಸಹ ಅವಕಾಶ ನೀಡುವುದಿಲ್ಲ. ಇನ್ನು ಬರ್ತಡೇ ಆಚರಣೆಯಂತೂ ದೂರದ ಮಾತು.

    ಶೋಕಾಚರಣೆ ಅವಧಿಯಲ್ಲಿ ನಿಯಮಗಳ ಸರಿಯಾದ ಪಾಲನೆಗಾಗಿ ಅಲ್ಲಿನ ಪೊಲೀಸರು ತಿಂಗಳ ಆರಂಭದಲ್ಲೇ ಇದೇ ರೀತಿಯ ನಿಯಮಗಳನ್ನು ಕೆಲ ದಿನಗಳ ಕಾಲ ಪ್ರಾಯೋಗಿಕವಾಗಿ ಹೇರಿರುತ್ತಾರೆ ಎಂಬ ಸುದ್ದಿಯು ಇದೆ. ಇನ್ನು ಮರಣ ವಾರ್ಷಿಕೋತ್ಸವ ಸಮಯದಲ್ಲಿ ಕಿಮ್​ ಜಾಂಗ್​ Il ಸ್ಮರಣಾರ್ಥ ಕೊರಿಯಾದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. (ಏಜೆನ್ಸೀಸ್​)

    ಮದ್ವೆಗೆ ಇನ್ನೆರೆಡು ತಿಂಗಳು ಇರುವಾಗಲೇ ಪ್ರೇಯಸಿಯನ್ನು ಹತ್ಯೆ ಮಾಡಿದ ಪ್ರಿಯಕರ‌‌‌‌: ಆ ಕರಾಳ ರಾತ್ರಿ!

    ಕನ್ನಡಕ್ಕೆ ಅವಮಾನ ಮಾಡೋ ಕೆಲ್ಸ ಮಾಡ್ತಿದೆಯಾ ಪುಷ್ಪ ಟೀಮ್​? ಸಿನಿಮಾ‌ ನೋಡಲು ಬಂದವರಿಗೆ ನಿರಾಶೆ

    ‘ಸೂದ್‌ ಸರ್‌, ನೀವು ಕೊಟ್ಟ ರೈಫಲ್‌ ಇಲ್ಲಿದೆ, ಥ್ಯಾಂಕ್ಯೂ…’ ಎಂದಿದ್ದ ರಾಷ್ಟ್ರೀಯ ಶೂಟರ್‌ ನೇಣುಬಿಗಿದ ಸ್ಥಿತಿಯಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts