More

    ಕೊಹ್ಲಿ ನಾಯಕತ್ವದ ವಿರುದ್ಧ ಯಾರೂ ದೂರು ನೀಡಿಲ್ಲ, ವದಂತಿಗಳನ್ನು ನಿಲ್ಲಿಸಿ: ಬಿಸಿಸಿಐ ಖಜಾಂಚಿ ಸ್ಪಷ್ಟನೆ

    ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಬಂಡಾಯದ ಬೆನ್ನಲ್ಲೇ ಟೆಸ್ಟ್ ತಂಡದ ಮತ್ತಿಬ್ಬರು ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಕೂಡ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆಂಬ ವಿಷಯವು ಬಹಿರಂಗವಾಗುತ್ತಿದ್ದಂತೆ ಬಿಸಿಸಿಐ ಖಜಾಂಚಿ ಅರುಣ್​ ಧುಮಲ್​ ಸ್ಪಷ್ಟನೆ ನೀಡಿದ್ದು, ಯಾರೂ ಕೂಡ ಕೊಹ್ಲಿ ನಾಯಕತ್ವದ ವಿರುದ್ಧ ದೂರು ನೀಡಿಲ್ಲ ಎಂದಿದ್ದಾರೆ.

    ತಮಗೆ ತಂಡದಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತಿದ್ದಾರೆ ಎಂದು ಬಿಸಿಸಿಐ ಉನ್ನತ ಅಧಿಕಾರಿಗಳಿಗೆ ಮೊದಲು ಆರ್​. ಅಶ್ವಿನ್​ ದೂರು ನೀಡಿದ್ದಾರೆನ್ನಲಾಗಿದೆ. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಕೂಡ ಬಿಸಿಸಿಐಗೆ ದೂರು ಸಲ್ಲಿಸಿರುವ ವಿಷಯ ಇದೀಗ ಬಹಿರಂಗಗೊಂಡಿದೆ.

    ಕಳೆದ ಜೂನ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಬಳಿಕ ರಹಾನೆ ಮತ್ತು ಪೂಜಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಷಾಗೆ ಕರೆ ಮಾಡಿ ಕೊಹ್ಲಿ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ಈ ವಿಚಾರಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದ್ದಂತೆ ವದಂತಿಗಳಿಗೆ ಬ್ರೇಕ್​ ಹಾಕಿರುವ ಧುಮಲ್​, ಜೂನಿಯರ್​ ಅಥವಾ ಸೀನಿಯರ್​ ಆಟಗಾರರಾಗಲಿ ಯಾರೊಬ್ಬರು ಸಹ ಕೊಹ್ಲಿ ನಾಯಕತ್ವದ ವಿರುದ್ಧ ಲಿಖಿತ ರೂಪದಲ್ಲಾಗಲಿ ಅಥವಾ ಮೌಖಿಕವಾಗಲಿ ಬಿಸಿಸಿಐಗೆ ದೂರು ನೀಡಿಲ್ಲ. ಮಾಧ್ಯಮಗಳು ಇಂತಹ ಸುಳ್ಳು ವರದಿಗಳನ್ನು ನಿಲ್ಲಿಸಬೇಕು ಎಂದಿದ್ದಾರೆ.

    ಕೊಹ್ಲಿ ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿರುವುದಕ್ಕೆ ಕಾರ್ಯದೊತ್ತಡ ಮತ್ತು ಬ್ಯಾಟಿಂಗ್‌ನತ್ತ ಗಮನಹರಿಸುವ ಕಾರಣಗಳನ್ನು ನೀಡಿದ್ದರೂ, ಪರೋಕ್ಷವಾಗಿ ತಂಡದ ಒಳಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳೇ ಅವರ ನಿರ್ಧಾರಕ್ಕೆ ಕಾರಣವಾಗಿವೆ ಎನ್ನಲಾಗಿದೆ. (ಏಜೆನ್ಸೀಸ್​)

    ಅಶ್ವಿನ್ ಬಳಿಕ ನಾಯಕ ಕೊಹ್ಲಿ ವಿರುದ್ಧ ರಹಾನೆ, ಪೂಜಾರ ಬಂಡಾಯವೂ ಬಹಿರಂಗ!

    40 ಅಂಕ ಪಡೆದ್ರೂ 4 ‌ಅಂಕ ಕೊಟ್ಟು‌ ಫೇಲ್​! ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿನಿ ಭವಿಷ್ಯ ಅತಂತ್ರ

    ಚಿಕನ್‌ ಕಬಾಬ್‌ನಿಂದ ಸಿಕ್ಕಿಬಿದ್ದ ಐಸಿಸ್‌ ಉಗ್ರ: ಈತನ ಬಂಧನದ ಕಥೆಯೇ ರೋಚಕ!

    ರಾಜಸ್ಥಾನ ವಿರುದ್ಧ 3 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನ ಬಹುದೊಡ್ಡ ದಾಖಲೆ ಮುರಿದ ಹರ್ಷಲ್​ ಪಟೇಲ್!​ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts