More

    ಅಶ್ವಿನ್ ಬಳಿಕ ನಾಯಕ ಕೊಹ್ಲಿ ವಿರುದ್ಧ ರಹಾನೆ, ಪೂಜಾರ ಬಂಡಾಯವೂ ಬಹಿರಂಗ!

    ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಬಂಡಾಯವೆದ್ದಿರುವ ವರದಿಯ ಬೆನ್ನಲ್ಲೇ ಟೆಸ್ಟ್ ತಂಡದ ಮತ್ತಿಬ್ಬರು ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಕೂಡ ಬಿಸಿಸಿಐಗೆ ದೂರು ಸಲ್ಲಿಸಿದ್ದ ವಿಷಯ ಇದೀಗ ಬಹಿರಂಗಗೊಂಡಿದೆ.

    ಕಳೆದ ಜೂನ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಬಳಿಕ ರಹಾನೆ ಮತ್ತು ಪೂಜಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಷಾಗೆ ಕರೆ ಮಾಡಿ ಕೊಹ್ಲಿ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

    ಕೊಹ್ಲಿ ಡಬ್ಲ್ಯಟಿಸಿ ಫೈನಲ್ ಸೋಲಿನ ಬಳಿಕ ಮಾತನಾಡುತ್ತ ಪರೋಕ್ಷವಾಗಿ ರಹಾನೆ, ಪೂಜಾರ ಅವರನ್ನು ಟೀಕಿಸಿದ್ದರು. ಡಬ್ಲ್ಯಟಿಸಿ ಫೈನಲ್‌ನಲ್ಲಿ ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ 8 ರನ್ ಮತ್ತು 2ನೇ ಇನಿಂಗ್ಸ್‌ನಲ್ಲಿ 80 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ರಹಾನೆ ಕ್ರಮವಾಗಿ 117 ಎಸೆತಗಳಲ್ಲಿ 49 ಮತ್ತು 40 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ‘ನಾವು ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸಬೇಕಿತ್ತು. ರನ್ ಗಳಿಸುವ ಮನೋಭಾವದೊಂದಿಗೆ ಆಡಬೇಕಾಗಿತ್ತು ಮತ್ತು ರನ್ ಗಳಿಸುವ ಮಾರ್ಗಗಳನ್ನು ಹುಡುಕಬೇಕಾಗಿತ್ತು. ಔಟ್ ಆಗುವ ಬಗ್ಗೆ ಚಿಂತಿಸುತ್ತ ಆಡಬಾರದು’ ಎಂದು ಕೊಹ್ಲಿ ಹೇಳಿದ್ದರು.

    ಕೊಹ್ಲಿಯ ಈ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ರಹಾನೆ ಮತ್ತು ಪೂಜಾರ ಬಿಸಿಸಿಐ ಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿದ್ದರು. ಇದರಿಂದಾಗಿ ಎಚ್ಚೆತ್ತುಕೊಂಡಿದ್ದ ಬಿಸಿಸಿಐ, ತಂಡದ ಇತರ ಆಟಗಾರರ ಅಭಿಪ್ರಾಯಗಳನ್ನೂ ಸಂಗ್ರಹಿಸಿತ್ತು ಮತ್ತು ಇಂಗ್ಲೆಂಡ್ ಪ್ರವಾಸದ ಅಂತ್ಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತ್ತು ಎನ್ನಲಾಗಿದೆ.

    ಕೊಹ್ಲಿ ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿರುವುದಕ್ಕೆ ಕಾರ್ಯದೊತ್ತಡ ಮತ್ತು ಬ್ಯಾಟಿಂಗ್‌ನತ್ತ ಗಮನಹರಿಸುವ ಕಾರಣಗಳನ್ನು ನೀಡಿದ್ದರೂ, ಪರೋಕ್ಷವಾಗಿ ಈ ಬೆಳವಣಿಗೆಗಳೇ ಅವರ ನಿರ್ಧಾರಕ್ಕೆ ಕಾರಣವಾಗಿವೆ ಎನ್ನಲಾಗಿದೆ.

    ಈ ಮುನ್ನ ಆರ್. ಅಶ್ವಿನ್ ಕೂಡ ಕೊಹ್ಲಿ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದು, ತಮಗೆ ತಂಡದಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತಿದ್ದಾರೆ ಎಂದು ಬಿಸಿಸಿಐಗೆ ದೂರು ಸಲ್ಲಿಸಿದ್ದರು ಎಂದು ವರದಿಯಾಗಿತ್ತು. ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಅಶ್ವಿನ್‌ರನ್ನು ಆಡಿಸಬೇಕೆಂಬ ಕೋಚ್ ರವಿಶಾಸಿ ಸಲಹೆಯನ್ನೂ ಕೊಹ್ಲಿ ತಳ್ಳಿ ಹಾಕಿದ್ದರು. ಕೊಹ್ಲಿ ಇಚ್ಛೆಗೆ ವಿರುದ್ಧವಾಗಿ ಆಯ್ಕೆಗಾರರು ಟಿ20 ವಿಶ್ವಕಪ್‌ಗೆ ಅಶ್ವಿನ್‌ರನ್ನು ಆರಿಸಿದ್ದಾರೆ ಎಂದೂ ಹೇಳಲಾಗಿದೆ.

    ಡ್ರೀಮ್ ಇಲೆವೆನ್‌ನಲ್ಲಿ ಐಪಿಎಲ್ ಪಂದ್ಯಕ್ಕೆ 49 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗೆದ್ದ ಕ್ಷೌರಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts