More

    ರಾಜ್ಯದ ಮೊದಲ ಮಹಿಳಾ ಕನ್ನಡ ಶಾಲೆ ನೆಲಸಮ: ರಾತ್ರೋರಾತ್ರಿ ಕಟ್ಟಡ ಧ್ವಂಸಗೊಳಿಸಿದ ಸರ್ಕಾರ

    ಮೈಸೂರು: ಸಾಕಷ್ಟು ಆಕ್ರೋಶದ ನಡುವೆಯೂ ರಾಜ್ಯದ ಮೊದಲ ಮಹಿಳಾ ಕನ್ನಡ ಶಾಲೆಯ ಕಟ್ಟಡವನ್ನು ಮೈಸೂರು ಜಿಲ್ಲಾಡಳಿತ ರಾತ್ರೋರಾತ್ರಿ ನೆಲಸಮ ಮಾಡಿದೆ.

    ರಾಜ್ಯದ ಮೊದಲ ಮಹಿಳಾ ಶಾಲೆಯಾದ ಎನ್​ಟಿಎಂಎಸ್​ ಇದೀಗ ಇತಿಹಾಸ ಪುಟ ಸೇರಿದೆ. ಜಾಗವನ್ನು ಕೊಡಲು ಹಲವರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ತಂದು ಸರ್ಕಾರ ಜಾಗ ತೆರವು ಮಾಡಿದೆ.

    ಈಗಾಗಲೇ ರಾಮಕೃಷ್ಣ ಆಶ್ರಮಕ್ಕೆ ಜಾಗವನ್ನು ಜಿಲ್ಲಾಧಿಕಾರಿಗಳು ಹಸ್ತಾಂತರ ಮಾಡಿದ್ದು, ಪೊಲೀಸ್ ಭದ್ರತೆಯಲ್ಲಿ ಜಾಗ ತೆರವು ಕಾರ್ಯಾಚರಣೆ ನಡೆದಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲು ಜಾಗವನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ.

    ನೂರಾರು ಪೊಲೀಸರ ಭದ್ರತೆಯೊಂದಿಗೆ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು.ಶಾಲಾ ಕಟ್ಟಡವು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದ್ದು, ಭದ್ರತೆಗಾಗಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್‌ ಇನ್ಸ್‌ಪೆಕ್ಟರ್ ಸೇರಿ 250 ಪೊಲೀಸರನ್ನು ನಿಯೋಜಿಸಲಾಗಿದೆ.

    4 ಹಿಟಾಚಿ ಮತ್ತು 3 ಜೆಸಿಬಿಗಳಿಂದ ಕಟ್ಟಡ ತೆರವು ಕಾರ್ಯ ನಡೆದಿದೆ. ಕಾರ್ಯಾಚರಣೆ ತಡೆಯಲು ಬಂದ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರ‌ನ್ನು ಇದೇ ಸಂದರ್ಭದಲ್ಲಿ ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಫ್ರೀ ಇದ್ದಾಗ ಕರೆ ಮಾಡಲು ಹೇಳಿ ನಟಿಗೆ ಫೋನ್​ ನಂಬರ್​ ಕೊಟ್ಟ ನೆಟ್ಟಿಗನಿಗೆ ಕಾದಿತ್ತು ಬಿಗ್​ ಶಾಕ್​..!

    ಕೈ-ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋದವನನ್ನು ಎಳೆದೊಯ್ದ ಮೊಸಳೆ: ದಾಂಡೇಲಿ ಯುವಕನ ದುರಂತ ಸಾವು

    ಮಲ್ಟಿಪ್ಲೆಕ್ಸ್​ನಿಂದ ತೊಂದರೆ; ವಾಣಿಜ್ಯ ಮಂಡಳಿಗೆ ಜೋಗಿ ಪ್ರೇಮ್ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts