More

    ಗಡಿಯಲ್ಲಿ ನಿಮ್ಮ ಕಿತಾಪತಿ ನಿಲ್ಲಿಸದಿದ್ರೆ ಮತ್ತಷ್ಟು ಸರ್ಜಿಕಲ್​ ದಾಳಿ ನಡೆಯಲಿದೆ: ಪಾಕ್​ಗೆ ಅಮಿತ್​ ಷಾ ಎಚ್ಚರಿಕೆ

    ನವದೆಹಲಿ: ಗಡಿಯಲ್ಲಿ ಪಾಕಿಸ್ತಾನವು ತನ್ನ ಉಲ್ಲಂಘನೆಗಳನ್ನು ಹಾಗೂ ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ತನ್ನ ಪ್ರಾಯೋಕತ್ವವನ್ನು ನಿಲ್ಲಿಸದೇ ಹೋದಲ್ಲಿ​ ಹೆಚ್ಚಿನ ಸರ್ಜಿಕಲ್​ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ಅಮಿತ್​ ಷಾ ಪಾಕ್​ಗೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ದಾಳಿಗಳನ್ನು ನಾವು ಸಹಿಸುವುದಿಲ್ಲ ಎಂಬುದನ್ನು ಸರ್ಜಿಕಲ್​ ದಾಳಿಗಳು ಸಾಬೀತು ಮಾಡಿವೆ. ಹೀಗೆ ಉಲ್ಲಂಘನೆಗಳನ್ನು ಮುಂದುವರಿಸಿದರೆ, ಅಂತಹ ಮತ್ತಷ್ಟು ಸರ್ಜಿಕಲ್​ ದಾಳಿಗಳು ಬರಲಿವೆ ಎಂದು ಗೋವಾದ ಧರ್ಬಂದೋರಾದಲ್ಲಿ ನಡೆದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದರು.

    ಮಾಜಿ ರಕ್ಷಣಾ ಸಚಿವ ಮನೋಹರ್​ ಪರೀಕ್ಕರ್​ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸರ್ಜಿಕಲ್​ ದಾಳಿಗಳು ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಗಡಿಗಳಲ್ಲಿ ಯಾರೋಬ್ಬರು ತೊಂದರೆ ನೀಡಬಾರದೆಂಬ ಸಂದೇಶವನ್ನು ನಾವು ರವಾನಿಸಿದ್ದೇವೆ. ಅಂದು ಮಾತುನಾಡುವ ಸಮಯವಾಗಿತ್ತು. ಆದರೆ, ಇಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಮಯ ಎಂದು ಪಾಕ್​ಗೆ ಚಾಟಿ ಬೀಸಿದ್ದಾರೆ.

    2016ರ ಸೆಪ್ಟೆಂಬರ್​ ತಿಂಗಳಲ್ಲಿ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್​ ದಾಳಿ ನಡೆಸಿತ್ತು. ಉರಿ, ಪಠಾಣ್​ಕೋಟ್​ ಮತ್ತು ಗುರ್ದಾಸ್​ಪುರ್​ನಲ್ಲಿ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಸರ್ಜಿಕಲ್​ ದಾಳಿ ನಡೆದಿತ್ತು. ಈ ಸಮಯದಲ್ಲಿ ಅನೇಕ ಉಗ್ರರ ಕ್ಯಾಂಪ್​ಗಳನ್ನು ಹೊಡೆದುರುಳಿಸಲಾಗಿತ್ತು. ಉರಿ ಪ್ರದೇಶದ ಮೇಲೆ ನಡೆದ ದಾಳಿಯ 11 ದಿನಗಳ ಬಳಿಕ ಸೆಪ್ಟೆಂಬರ್​ 29, 2016ರಲ್ಲಿ ಸರ್ಜಿಕಲ್​ ದಾಳಿ ನಡೆದಿತ್ತು. (ಏಜೆನ್ಸೀಸ್​)

    ವಿಜಯಪುರದ ಹುಡುಗಿಯ ಸಾಧನೆ: ಜಪಾನಿನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ರಾಜ್ಯದ ಏಕೈಕ ವಿದ್ಯಾರ್ಥಿನಿ

    ಶಾರುಖ್​ ಪುತ್ರನಿಗೆ ಇಂದೂ ಸಿಗಲಿಲ್ಲ ಬಿಡುಗಡೆ ಭಾಗ್ಯ: ಅ.20ರವರೆಗೆ ಜೈಲು ವಾಸ​

    ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts