More

    ಅಲ್ಪಸಂಖ್ಯಾತ ಶಾಲೆಗಳಲ್ಲಿ ಧರ್ಮ ಬೋಧನೆ ನಿಷೇಧಕ್ಕೆ ಕ್ರಮ: ಶಿಕ್ಷಣ ಸಚಿವ ನಾಗೇಶ್

    ಬೆಂಗಳೂರು: ಅಲ್ಪಸಂಖ್ಯಾತ ಶಾಲೆಯಲ್ಲಿ ಧರ್ಮದ ಬೋಧನೆ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇಡಲಾಗುವುದು. ಎಲ್ಲ ಬಿಇಓಗಳಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸುವುದಾಗಿ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿ ಸುದ್ದಿಗಾರರಿಗೆ ತಿಳಿಸಿದರು.

    ಅಡ್ಮಿಷನ್ ವೇಳೆ ಬೈಬಲ್​ಗೆ ಒಪ್ಪಿಗೆ ಇದೆಯೇ ಎಂದು ಕೇಳುತ್ತಿರುವ ಮಾಹಿತಿ ಇದೆ. ಒಪ್ಪಿಗೆ ಇಲ್ಲ ಅಂದರೆ ಪ್ರವೇಶ ಕೊಡುವುದಿಲ್ಲ ಎಂಬುವುದು ತಪ್ಪು. ಅದಕ್ಕೆ ಅವಕಾಶ ನೀಡದಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.

    ರಾಜ್ಯದ ಎಲ್ಲ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ ನೀಡುವುದಾಗಿಯೂ ತಿಳಿಸಿದರು. ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಭೋದನೆ ವಿಚಾರ ಕುರಿತ ಪ್ರಶ್ನೆಗೆ, ಧರ್ಮದ ಆಧಾರದ ಮೇಲೆ ಸಮಾಜ ಒಡೆಯುತ್ತಿದ್ದಾರೆ. ಹೀಗಂತ ಬೇರೆ ಪಕ್ಷದವರು ಮಾತನಾಡುತ್ತಿದ್ದರು. ಈಗ ಅವರೆಲ್ಲರು ಎಲ್ಲಿಗೆ ಹೋದರು ಎಂದು ವ್ಯಂಗ್ಯವಾಡಿದರು.

    ಬುದ್ದಿ ಜೀವಿಗಳು ಸೈಲೆಂಟ್ ಆಗಿದ್ದಾರೆ. ಭಗವದ್ಗೀತೆ, ಟಿಪ್ಪು ವಿಚಾರ ಬಂದಾಗ ಮಾತನಾಡುತ್ತಾರೆ. ಈಗ ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೆಣಕಿದರು. ಕ್ಲಾರೆನ್ಸ್ ಶಾಲೆ ಕೇಂದ್ರೀಯ ಸಿಲೆಬಸ್ ವ್ಯಾಪ್ತಿಗೆ ಬರುತ್ತದೆ. ಯಾವುದೇ ಸಿಲೆಬಸ್ ಇರಲಿ ಧರ್ಮ ಬೋಧನೆ ತಪ್ಪು. ಕ್ಲಾರೆನ್ಸ್ ಶಾಲೆಯಲ್ಲಿ ಎಲ್ಲ ಧರ್ಮದ ಮಕ್ಕಳೂ ಇದ್ದಾರೆ. ಸಂವಿಧಾನದಡಿ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಿ.ಸಿ.ನಾಗೇಶ್ ಹೇಳಿದರು.

    ತಿಮಿಂಗಿಲಕ್ಕೆ ಡಿಕ್ಕಿ ಹೊಡೆದ ಪ್ರವಾಸಿಗರ ದೋಣಿ ಗತಿ ಏನಾಯ್ತು? ಭಯಾನಕ ವಿಡಿಯೋ ವೈರಲ್​

    ಬೂಸ್ಟರ್ ಡೋಸ್​ಗೆ ಹಣ: ಪ್ರಧಾನಿ ಸಭೆ ನಂತರ ತೀರ್ಮಾನ ಮಾಡುವುದಾಗಿ ಸಚಿವ ಡಾ.ಸುಧಾಕರ್ ಹೇಳಿಕೆ

    ನನಗೆ ಉತ್ತರ ಬೇಕಿದೆ… ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಎಂ.ಎಸ್​. ಧೋನಿ ಪತ್ನಿ ಸಾಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts