More

    ಸೇನಾ ಹೆಲಿಕಾಪ್ಟರ್​ ಪತನ: ಹುತಾತ್ಮ ಲೆ. ಕ. ಹರ್ಜಿಂದರ್ ಸಿಂಗ್​ಗೂ ಕರ್ನಾಟಕಕ್ಕೂ ಇದೆ ಸಂಬಂಧ

    ಉಡುಪಿ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಸೇರಿದಂತೆ ಹುತಾತ್ಮರಾದ 13 ಮಂದಿಯಲ್ಲಿ ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​ ಕೂಡ ಒಬ್ಬರು. ಇವರಿಗೂ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿರುವುದು ಇದೀಗ ತಿಳಿದುಬಂದಿದೆ.

    ಹರ್ಜಿಂದರ್​ ಸಿಂಗ್​ ಅವರು ಕಾರ್ಕಳ ಸಾಲ್ಮರದ ಪ್ರಫುಲ್ಲಾ ಎಂಬವರನ್ನು ವಿವಾಹವಾಗಿದ್ದರು. ಪ್ರಫುಲ್ಲಾ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಅನಿರೀಕ್ಷಿತ ಘಟನೆಯಲ್ಲಿ ಹರ್ಜಿಂದರ್​ ಸಿಂಗ್​ ಹುತಾತ್ಮರಾಗಿರುವುದನ್ನು ನೋಡಿ ಸಾಲ್ಮರದ ಮಿನೇಜಸ್​ ಕುಟುಂಬ ದುಃಖತಪ್ತರಾಗಿದೆ.

    ಮೃತ ಸಿಂಗ್ ಅವರನ್ನು ನೆನೆದು ಕುಟುಂಬ ಕಣ್ಣೀರು ಹಾಕಿದೆ. ಪ್ರಫುಲ್ಲಾ ಅವರ ತಾಯಿ ಮೇರಿ ಹಾಗೂ ಅವರ ಅಕ್ಕ-ಬಾವ ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಹುತಾತ್ಮರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. (ದಿಗ್ವಿಜಯ ನ್ಯೂಸ್​)

    ಜನರಲ್​​ ಬಿಪಿನ್​ ರಾವತ್​ ಅವರ ಕೊನೇ ಆಸೆ ಏನಿತ್ತು? ತಮ್ಮ ಗ್ರಾಮದ ಜನರ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು

    ಸೇನಾ ಹೆಲಿಕಾಪ್ಟರ್​ ಪತನ: ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​ ಪತನಕ್ಕೂ ಮುನ್ನ ಕೊನೇ ದೃಶ್ಯ ಲಭ್ಯ

    ಹೆಲಿಕಾಪ್ಟರ್​​ ಪತನದ ವೈರಲ್​ ವಿಡಿಯೋಗೂ ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​​ ಪತನಕ್ಕೂ ಸಂಬಂಧವಿಲ್ಲ: ನಿಜಾಂಶ ಇಲ್ಲಿದೆ!

    ಪಶ್ಚಿಮಘಟ್ಟದಲ್ಲಿ 2 ಸೇನಾ ಕಾಪ್ಟರ್​ಗಳ ಪತನ ಇನ್ನೂ ನಿಗೂಢ; 1998, 2003ರಲ್ಲಿ ಪ್ರತ್ಯೇಕ ಅಪಘಾತ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts