More

    VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ

    ಮೆಕ್ಸಿಕೋ: ಈ ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಮಂದಿ ಇರ್ತಾರೆ ಅನ್ನೋದಕ್ಕೆ ಮೆಕ್ಸಿಕೋದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ಮೆಕ್ಸಿಕೋದ ಓಕ್ಸಾಕದಲ್ಲಿರುವ ಸಣ್ಣ ಮೀನುಗಾರಿಕಾ ಗ್ರಾಮದಲ್ಲಿ ಮೇಯರ್​ ಒಬ್ಬರು ಮೊಸಳೆಯನ್ನೇ ಮದುವೆಯಾಗಿದ್ದಾರೆ.

    ವಿಶೇಷ ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೊಸಳೆಯನ್ನು ಮದುವಣಗಿತ್ತೆಯಂತೆ ಸಿಂಗಾರ ಮಾಡಿ ಅದ್ಧೂರಿ ವಿವಾಹ ಕಾರ್ಯಕ್ರಮವನ್ನು ನಡೆಸಿದ್ದಾರೆ. ಬ್ಯಾಂಡ್, ವಾದ್ಯ, ತಾಳ-ಮೇಳಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮ ಸಡಗರದಿಂದ ಮೇಯರ್​ ಮೊಸಳೆಯನ್ನು ವರಿಸಿದ್ದಾರೆ. ಮೊಸಳೆಯನ್ನು ಹೊತ್ತುಕೊಂಡು ಕುಣಿದಾಡಿದ ಮೇಯರ್​, ಅದಕ್ಕೆ ಮುತ್ತಿಕ್ಕುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದರು. ಸಾಕಷ್ಟು ಮಂದಿ ಈ ಮದುವೆಗೆ ಸಾಕ್ಷಿಯಾಗಿ ಕುಣಿದು ಕುಪ್ಪಳಿಸಿರುವುದು ವಿಡಿಯೋದಲ್ಲಿದೆ.

    VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ

    ವಿವರಣೆಗೆ ಬರುವುದಾದರೆ, ಮೆಕ್ಸಿಕೋದ ಸ್ಯಾನ್ ಪೆಡ್ರೊ ಹುಮೆಲುಲಾ ಪಟ್ಟಣದ ಮೇಯರ್​ ವಿಕ್ಟರ್ ಹ್ಯೂಗೋ ಸೋಸಾ 7 ವರ್ಷದ ಮೊಸಳೆಯನ್ನು ಗುರುವಾರ ವಿವಾಹವಾಗಿದ್ದಾರೆ. ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಮೊಸಳೆಗೆ ವಧುವಿನಂತೆ ಉಡುಗೆ ತೊಡಿಸಿ ಅಲಂಕಾರ ಮಾಡಲಾಗಿತ್ತು. ಗಮನಾರ್ಹ ಸಂಗತಿಯೆಂದರೆ, ಮೊಸಳೆಯ ಬಾಯಿಯನ್ನು ಮುಚ್ಚಲಾಗಿತ್ತು. ಈ ಸಂಪ್ರದಾಯವು ಓಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳ ನಡುವೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆಯಂತೆ. ಪ್ರಕೃತಿಯ ಅನುಗ್ರಹಕ್ಕಾಗಿ ಪ್ರಾರ್ಥಿಸುವ ಪ್ರಾರ್ಥನೆ ಇದಾಗಿದೆ.

    ನಾವು ಪ್ರಕೃತಿಯನ್ನು ಸಾಕಷ್ಟು ಮಳೆಗಾಗಿ, ಸಾಕಷ್ಟು ಆಹಾರಕ್ಕಾಗಿ ಕೇಳಿಕೊಳ್ಳುತ್ತೇವೆ. ಹೀಗಾಗಿ ನದಿಯಲ್ಲಿ ಸಾಕಷ್ಟು ಮೀನುಗಳಿವೆ ಎಂದು ಸೊಸಾ ಹೇಳಿದ್ದಾರೆ.

    ಈ ಆಚರಣೆಯಲ್ಲಿ ಮೊಸಳೆಗೆ ಶ್ವೇತ ವರ್ಣದ ಮದುವೆಯ ಉಡುಗೆ ಜೊತೆಗೆ ಇತರ ವರ್ಣರಂಜಿತ ಅಲಂಕಾರವನ್ನು ಮಾಡಲಾಗುತ್ತದೆ. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಸರೀಸೃಪವು ಭೂಮಿ ತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ ಮತ್ತು ಮೇಯರ್‌ನೊಂದಿಗಿನ ಅವಳ ವಿವಾಹವು ಮಾನವರು ದೈವಿಕವಾಗಿ ಸೇರುವುದನ್ನು ಸಂಕೇತಿಸುತ್ತದೆ. ಈ ಮದುವೆಯನ್ನು ಬಹಳ ಸಂಭ್ರಮದಿಂದ ನೆರವೇರಿಸಲಾಯಿತು.

    ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ ಮತ್ತು ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಹಿಗ್ಗಾಮುಗ್ಗಾ ಬೈಯ್ತಿದ್ರು ನಗುತ್ತಾ, ಶಿಳ್ಳೆ ಹಾಕುತ್ತಾ, ಡ್ಯಾನ್ಸ್​ ಮಾಡ್ತಿದ್ದ ನರೇಶ್​ ಬಗ್ಗೆ ಪತ್ನಿ ರಮ್ಯಾ ಹೇಳಿದ್ದು ಹೀಗೆ…

    ಎಳವೆಯಲ್ಲಿಯೇ ಕನ್ನಡಿಗರ ಹೃದಯಗೆದ್ದು ಅಗಲಿದ ಪುಟಾಣಿ ಸಮನ್ವಿ ಮನೆಗೆ ಪುಟ್ಟ ಕಂದನ ಆಗಮನ

    ‘ಜನರು ದೇಶ ಒಗ್ಗೂಡಿಸುವ ವಿಚಾರಗಳ ಮೇಲೆ ಗಮನ ಹರಿಸಬೇಕೇ ಹೊರತು ದೇಶ ಒಡೆಯುವುದರ ಮೇಲಲ್ಲ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts