More

    ಕೋವಿಡ್​ನಿಂದ ಗುಣವಾದ್ರೂ ಅವಳಿ ಸಹೋದರಿಬ್ಬರ ಸಾವು: ಕರೊನಾದ ಇನ್ನೊಂದು ಕರಾಳ ಮುಖ ಬಯಲು!

    ಲಖನೌ: ಕೋವಿಡ್​ ನಂತರದ ಸಂಕೀರ್ಣತೆಯಿಂದ ಉತ್ತರ ಪ್ರದೇಶದ ಮೀರತ್​ ಮೂಲದ ಅವಳಿ ಸಹೋದರರು ಒಂದೇ ದಿನದಲ್ಲಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.

    ಅವಳಿ ಸಹೋದರರನ್ನು ಜೋಫ್ರೆಡ್​ ವರ್ಘಿಸ್​ ಗ್ರೆಗೊರಿ ಮತ್ತು ರಾಲ್ಫ್ರೆಡ್​ ಜಾರ್ಜ್​ ಗ್ರೆಗೊರಿ ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್​ 23ರಂದು ಇಬ್ಬರು 24ನೇ ವಸಂತಕ್ಕೆ ಕಾಲಿಟ್ಟಿದ್ದರು.

    ಮೃತರ ಅಪ್ಪ-ಅಮ್ಮ ಇಬ್ಬರು ಮೀರತ್​ನ ಸೆಂಟ್​ ಥಾಮಸ್​ ಶಾಲೆಯಲ್ಲಿ ಶಿಕ್ಷಕರು. ಸಹೋದರರಿಬ್ಬರು ಮೇ 1ರಂದು ಆನಂದ್​ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಪಾಲಕರು ತಿಳಿಸಿದರು.

    ಇದನ್ನೂ ಓದಿರಿ: ನಿರ್ಗತಿಕ ಮಕ್ಕಳ ರಕ್ಷಣೆಗೆ ನಿಯಮಾವಳಿ; ಹೆತ್ತವರ ಕಳೆದುಕೊಂಡ 24 ಗಂಟೆಯೊಳಗೆ ಮಕ್ಕಳನ್ನು ಹಾಜರು ಪಡಿಸಬೇಕು

    ಮಕ್ಕಳ ಸಾವಿನ ಬಗ್ಗೆ ಮಾತನಾಡಿರುವ ತಂದೆ ಗ್ರೆಗೊರಿ ರಾಫೆಲ್​, ನಮ್ಮ ಕುಟುಂಬವೇ ನಾಶವಾಯಿತು. ಸದ್ಯ ನಮ್ಮ ಕುಟುಂಬದಲ್ಲಿ ಉಳಿದಿರುವುದು ಮೂವರೇ. ನನ್ನ ಅವಳಿ ಮಕ್ಕಳಾದ ಜೋಫ್ರೆಡ್​ ವರ್ಘಿಸ್​ ಗ್ರೆಗೊರಿ ಮತ್ತು ರಾಲ್ಫ್ರೆಡ್​ ಜಾರ್ಜ್​ ಗ್ರೆಗೊರಿ ಕರೊನಾ ಎರಡನೇ ಅಲೆಗೆ ಬಲಿಯಾಗಿದ್ದಾರೆ ಎಂದು ಕಣ್ಣೀರಾಕಿದ್ದಾರೆ.

    ಇಬ್ಬರಿಗೂ ಮೇ 10ರಂದು ನೆಗಿಟಿವ್​ ವರದಿ ಆಗಿತ್ತು. ಆದಾಗ್ಯೂ ಇಬ್ಬರಲ್ಲಿ ಮೇ 13ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಓರ್ವ ಸಹೋದರ ಮೃತಪಟ್ಟರೆ, ಮೇ 14ರಂದು ಮತ್ತೊರ್ವ ಸಹೋದರ ಕೊನೆಯುಸಿರೆಳೆದಿದ್ದಾನೆ.

    ಸಹೋದರರಿಬ್ಬರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೂ ಕರೊನಾ ಸೋಂಕಿಗೆ ಒಳಗಾಗಿದ್ದರು. ಕರೊನಾದಿಂದ ಗುಣಮುಖರಾದರು ಸೋಂಕು ಶ್ವಾಸಕೋಶಕ್ಕೆ ಹರಡಿ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.

    ಇದನ್ನೂ ಓದಿರಿ: ಕರೊನಾ ಸೋಂಕು ತಗುಲಿದ ಒಂದೇ ಗಂಟೆಯಲ್ಲಿ ಯುವ ವೈದ್ಯ ಸಾವು: ಒಂದೇ ದಿನ 50 ಡಾಕ್ಟರ್ಸ್​ ಡೆತ್​

    ಬೆಳೆದು ಮನೆಗೆ ಆಸರೆಯಾಗಿದ್ದ ಮಕ್ಕಳಿಬ್ಬರ ಮರಣದಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಷ್ಟೇ ಅಲ್ಲದೆ, ಹಿರಿಯ ಮಗನಿಗೂ ಕರೊನಾ ಪಾಸಿಟಿವ್​ ಆಗಿದ್ದು, ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. (ಏಜೆನ್ಸೀಸ್​)

    ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಉಳಿಯಿತು ಒಂದೇ ಕುಟುಂಬದ ಮೂವರ ಪ್ರಾಣ!

    ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

    ಕರೊನಾ ಸೋಂಕು ತಗುಲಿದ ಒಂದೇ ಗಂಟೆಯಲ್ಲಿ ಯುವ ವೈದ್ಯ ಸಾವು: ಒಂದೇ ದಿನ 50 ಡಾಕ್ಟರ್ಸ್​ ಡೆತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts