More

    ಮಾಸ್ಟರ್​ ಭೇಟಿಯಾದ ಬ್ಲ್ಯಾಸ್ಟರ್​! ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​, ಫ್ಯಾನ್ಸ್​​ ಕ್ರೇಜಿ ಕಮೆಂಟ್ಸ್​

    ಚೆನ್ನೈ: ಒಬ್ಬರು ಸಿನಿಮಾ ಜಗತ್ತಿನ ಸ್ಟಾರ್​ ಆದರೆ, ಇನ್ನೊಬ್ಬರು ಕ್ರೀಡಾ ಲೋಕದ ಧ್ರುವ ತಾರೆ. ಇದೀಗ ಇಬ್ಬರು ಒಟ್ಟಿಗೆ ಸೇರಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂಬುದ ಈಗಾಗಲೇ ಫೋಟೋ ಮೇಲಿನ ಫೋಟೋ ಮೂಲಕ ನಿಮಗೆಲ್ಲ ಗೊತ್ತಾಗಿದೆ. ಹಾಗದರೆ, ಇಬ್ಬರು ಬಿಗ್​ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೆ ಕಾರಣವೂ ಇಲ್ಲಿದೆ.

    ಕ್ರಿಕೆಟ್​ ಲೋಕದ ಕೂಲ್​ ಕ್ಯಾಪ್ಟನ್​ ಎಂ.ಎಸ್​. ಧೋನಿ ಮತ್ತು ಕಾಲಿವುಡ್​ ಸಿನಿ ಜಗತ್ತಿನ ಇಳಯದಳಪತಿ ವಿಜಯ್​ ಇತ್ತೀಚೆಗೆ ಚೆನ್ನೈನಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಶೂಟಿಂಗ್​ ಇದ್ದ ಕಾರಣದಿಂದ ಇಬ್ಬರು ಒಂದೇ ಸ್ಟುಡಿಯೋದಲ್ಲಿ ಎದುರು-ಬದುರಾಗಿದ್ದಾರೆ. ಇಬ್ಬರು ಸ್ಟಾರ್​ಗಳ ಮಹಾಸಂಗಮದ ಫೋಟೋವನ್ನು ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡವು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಅದಕ್ಕೆ “ಮಾಸ್ಟರ್​ ಆ್ಯಂಡ್​ ದಿ ಬ್ಲ್ಯಾಸ್ಟರ್​” ಎಂದು ಅಡಿಬರಹ ನೀಡಿದೆ.

    ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿಜಯ್​ ಅಭಿಯನದ ಮಾಸ್ಟರ್​ ಚಿತ್ರ ಒಳ್ಳೆಯ ಹೆಸರು ಮಾಡಿದೆ. ಅದೇ ರೀತಿ ಧೋನಿಯನ್ನು ಚೆನ್ನೈ ಮಂದಿ ಪ್ರೀತಿಯಿಂದ ಬ್ಲಾಸ್ಟರ್​ ಎಂದು ಕರೆದಿದ್ದಾರೆ. ಏಕೆಂದರೆ, ಧೋನಿ ಬ್ಯಾಟ್​ ಹಿಡಿದು ಕ್ರೀಸ್​ನಲ್ಲಿ ನಿಂತರೆ ಅವರ ಒಂದೊಂದು ಶಾಟ್ಸ್​ ಕೂಡ ಬ್ಲಾಸ್ಟರ್​ ಆಗಿರುತ್ತದೆ.

    ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕೇವಲ ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಅನೇಕ ನೆಟ್ಟಿಗರು ಫೋಟೋದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ವರ್ಷದ ಅತ್ಯುತ್ತಮ ಚಿತ್ರವೆಂದು ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಎರಡು ಸಿಂಹಗಳು ಒಟ್ಟಿಗೆ ಭೇಟಿಯಾಗಿವೆ, ಒಬ್ಬರು ಕ್ರಿಕೆಟ್​ ದಿಗ್ಗಜ ಮತ್ತೊಬ್ಬರು ಸಿನಿಮಾ ದಿಗ್ಗಜ ಎಂದು ವಿವಿಧ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಅಂದಹಾಗೆ ವಿಜಯ್​ ತಮ್ಮ ಮುಂದಿನ “ಬೀಸ್ಟ್​” ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜಯ್​ ಮತ್ತು ಧೋನಿ ತಮಿಳುನಾಡಿನಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. (ಏಜೆನ್ಸೀಸ್​)

    ಒಂದೇ ಸಿನಿಮಾದಲ್ಲಿ ತ್ರಿವಳಿ ಸುಂದರಿಯರು…

    ದ್ವಿಭಾಷೆಯಲ್ಲಿ ವೀರ ಕಂಬಳ; ಕನ್ನಡ-ತುಳು ಸಿನಿಮಾ

    50 ಕೋಟಿ ಡೋಸ್ ಲಸಿಕೆ ಭಾರತದ ಸಾಧನೆ: ಜೆ.ಪಿ. ನಡ್ಡಾ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts