More

    ಮಕ್ಕಳನ್ನು ಬಿಟ್ಟು ಯುವಕನೊಂದಿಗೆ ಓಡಿ ಹೋದ ವಿವಾಹಿತೆಗೆ ಒಂದೇ ತಿಂಗಳಲ್ಲಿ ಬಿಗ್​ ಶಾಕ್​!

    ಹೈದರಾಬಾದ್​: ವಿವಾಹೇತರ ಸಂಬಂಧಗಳು ಭಾರತೀಯ ಕೌಟುಂಬಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಪ್ಪ-ಅಮ್ಮ ಮಾಡುವ ತಪ್ಪಿಗೆ ಮಕ್ಕಳ ಭವಿಷ್ಯವು ಅಡಕತ್ತರಿಯಲ್ಲಿ ಸಿಕ್ಕಿಕೊಳ್ಳುವ ಪರಿಸ್ಥಿತಿಗೆ ತಾಜಾ ಉದಾಹರಣೆಯಾಗಿ ತೆಲಂಗಾಣದಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಪ್ರಿಯಕರನೊಂದಿಗೆ ಓಡಿ ಹೋಗಿರುವ ಮಹಿಳೆಯೊಬ್ಬಳು ನನಗೆ ಮಕ್ಕಳು ಬೇಡ ನನ್ನ ಬಾಯ್​ಫ್ರೆಂಡ್​ ಜತೆ ಇರುತ್ತೇನೆ ಎಂದಿರುವ ಅಮಾನವೀಯ ಘಟನೆ ನಡೆದಿದೆ.

    ವಿವರಣೆಗೆ ಬರುವುದಾದರೆ, ತೆಲಂಗಾಣದ ವಾನಪರ್ಥಿ ಜಿಲ್ಲೆಯ ಅಮರಚಿಂತ ಮೂಲದ ಸುಜಾತಾಗೆ ಈಗಾಗಲೇ ಮದುವೆ ಆಗಿದ್ದು, 10 ವರ್ಷದ ಮಗ ಮತ್ತು 7 ವರ್ಷದ ಮಗಳಿದ್ದಾಳೆ. ಈ ಮಧ್ಯೆ ಸುಜತಾಗೆ ತಮ್ಮದೇ ಕಾಲನಿಯಲ್ಲಿ ರಾಕೇಶ್​ ಎಂಬ ಯುವಕನ ಪರಿಚಯವಾಗಿದೆ. ತದನಂತರದಲ್ಲಿ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಒಟ್ಟಿಗೆ ಬಾಳುವ ನಿರ್ಧಾರಕ್ಕೂ ಬಂದಿದ್ದರು.

    ಹೀಗಿರುವಾಗ ಒಂದು ತಿಂಗಳ ಹಿಂದೆ ಸುಜತಾ ತನ್ನ ಮಕ್ಕಳು ಮತ್ತು ಗಂಡನನ್ನು ಬಿಟ್ಟು ರಾಕೇಶ್​ ಜತೆ ಓಡಿ ಹೋಗಿ ವಾರಂಗಲ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಈ ವಿಚಾರ ಎರಡು ಮನೆಗೆ ತಿಳಿಯಿತು. ಮೇ 21ರಂದು ರಾಕೇಶ್​ ಕುಟುಂಬಸ್ಥರು ವಾರಂಗಲ್​ಗೆ ತೆರಳಿದ್ದಾರೆ. ಬಳಿಕ ಇಬ್ಬರಿಗೂ ಕೌನ್ಸೆಲಿಂಗ್​ ನೀಡಿ ಅಮರಚಿಂತಗೆ ಕರೆತಂದಿದ್ದಾರೆ. ಸುಜಾತಳನ್ನು ಗಂಡನ ಮನೆಗೆ ಬಿಟ್ಟು, ರಾಕೇಶ್​ನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.

    ಮೇ 24ರ ಸೋಮವಾರ ಬೆಳಗ್ಗೆ ಅಮರಚಿಂತದ ಪೊಲೀಸ್​ ಠಾಣೆಗೆ ತೆರಳಿ ಸುಜಾತಾ ಧರಣಿ ಕುಳಿತಿದ್ದಾಳೆ. ನಾನು ರಾಕೇಶ್​ನೊಂದಿಗೆ ಬದುಕಬೇಕು. ನಾವಿಬ್ಬರು ವಾರಂಗಲ್​ನ ದೇವಸ್ಥಾನದಲ್ಲಿ ಮದುವೆ ಆಗಿದ್ದೇನೆ. ಎಷ್ಟೇ ಕಷ್ಟವಾದರೂ ಸರಿಯೇ ನನ್ನೊಂದಿಗೆ ಇರುತ್ತೇನೆಂದು ರಾಕೇಶ್​ ಹೇಳಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ.

    ರಾಕೇಶ್​ ಕುಟುಂಬದವರು ನನ್ನ ಮೇಲೆ ಹಲ್ಲೆ ಮಾಡಿ ರಾಕೇಶ್​ನನ್ನು ಎಲ್ಲಿ ಬಚ್ಚಿಟ್ಟಿದ್ದೀಯ ಎಂದು ಕೇಳುತ್ತಿದ್ದಾರೆ. ಮೊಬೈಲ್​ ಪೋನ್​ ಸಿಗದಂತೆ ಮಾಡಿದ್ದು, ನಾನು ರಾಕೇಶ್​ ಜತೆಯಲ್ಲಿ ಮಾತನಾಡದಂತೆ ಮಾಡಿದ್ದಾರೆಂದು ದೂರು ನೀಡಿದ್ದಾಳೆ. ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಇತ್ತ ಅಮ್ಮನ ವಿವಾಹೇತರ ಸಂಬಂಧಕ್ಕೆ ಮಕ್ಕಳು ಬಲಿಪಶುಗಳಾಗಿದ್ದಾರೆ. (ಏಜೆನ್ಸೀಸ್​)

    ಹನಿಟ್ರ್ಯಾಪೋ? ಬ್ಲ್ಯಾಕ್​ಮೇಲೋ?: ಯಾರಿಗೆ ಉರುಳಾಗುತ್ತೆ ಅಶ್ಲೀಲ ಸಿಡಿ ಪ್ರಕರಣ?

    ಪ್ರಲ್ಹಾದ ಜೋಶಿ ಲೇಖನ; ಒಗ್ಗಟ್ಟಿನಿಂದ ಕರೊನಾ ಮಹಾಮಾರಿ ಎದುರಿಸಬೇಕಿದೆ

    ಗಡುವು ಅಂತ್ಯ, ಮುಂದೇನು?: ಅನುಸರಿಸದಿದ್ದರೆ ತಾಣಗಳೇ ಬ್ಲಾಕ್ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts