More

    ಗಡುವು ಅಂತ್ಯ, ಮುಂದೇನು?: ಅನುಸರಿಸದಿದ್ದರೆ ತಾಣಗಳೇ ಬ್ಲಾಕ್ ಸಾಧ್ಯತೆ!

    ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಫೆ.25ರಂದು ಹೊರಡಿಸಿದ ನಿಯಮಗಳ ಪ್ರಕಾರ ಮೇ 25ರ ಒಳಗಾಗಿ ಈ ಸಂಸ್ಥೆಗಳು ಭಾರತದಲ್ಲಿ ಸ್ಥಳೀಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಆದರೆ, ‘ಕೂ’ ಸಾಮಾಜಿಕ ಜಾಲತಾಣ ಸಂಸ್ಥೆಯೊಂದನ್ನು ಹೊರತುಪಡಿಸಿ ಟ್ವಿಟ್ಟರ್, ಫೇಸ್ಬುಕ್, ಇನ್​ಸ್ಟಾಗ್ರಾಂ ಸಂಸ್ಥೆಗಳು ಈವರೆಗೂ ಕೇಂದ್ರ ಸರ್ಕಾರದ ನಿಯಮ ಪಾಲಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮೇ 26ರ ನಂತರ ಈ ಸಾಮಾಜಿಕ ಜಾಲತಾಣ ಸಂಸ್ಥೆಗಳನ್ನು ಭಾರತದಲ್ಲಿ ನಿಷೇಧಿಸಲಾಗುತ್ತದೆಯೇ ಎಂಬ ಚರ್ಚೆ ವ್ಯಾಪಕಗೊಂಡಿದೆ. ಹೊಸ ನಿಯಮದ ಪ್ರಕಾರ, ಸಂಸ್ಥೆಗಳು ಮುಖ್ಯ ಬಿಕ್ಕಟ್ಟು ನಿರ್ವಹಣಾ ಅಧಿಕಾರಿ, ನಿಯಮ ಅನುಸರಣೆ ಅಧಿಕಾರಿ ಮತ್ತು ಸ್ಥಳೀಯ ಸಂಪರ್ಕಾಧಿಕಾರಿಯನ್ನು ಭಾರತದಲ್ಲಿ ನೇಮಕ ಮಾಡಬೇಕು. ಮೇ 26ಕ್ಕೆ ಕೇಂದ್ರ ನೀಡಿದ್ದ ಗಡುವು ಅಂತ್ಯಗೊಳ್ಳಲಿದೆ.

    ಪರಿಣಾಮ ಏನು?: ಒಂದು ವೇಳೆ ಈ ಸಂಸ್ಥೆಗಳು ನಿಯಮ ಪಾಲಿಸದಿದ್ದಲ್ಲಿ, ದೇಶದಲ್ಲಿ ‘ಇಂಟರ್​ನೆಟ್ ಇಂಟರ್​ವಿುೕಡಿಯರಿ’ ಮಾನ್ಯತೆ ಕಳೆದು ಕೊಳ್ಳಲಿದೆ. ಇದರಿಂದ ಸಾಮಾಜಿಕ ಜಾಲತಾಣ ಬಳಕೆದಾರರ ಪೋಸ್ಟ್ ಗಳಿಗೆ ಕಂಪನಿಯೇ ಜವಾಬ್ದಾರಿಯಾಗಲಿದ್ದು, ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕು. ಸೋಷಿಯಲ್ ಮೀಡಿಯಾ ಪ್ರಕಾಶಕನ ಪಾತ್ರವಹಿಸುವುದರಿಂದ, ಯಾವುದೇ ವಿಷಯ ಆನ್​ಲೈನ್​ನಲ್ಲಿ ಕಾಣಿಸುವ ಮುನ್ನ ಅವು ಆಕ್ಷೇಪಾರ್ಹವಲ್ಲ ಎನ್ನುವುದನ್ನು ಖಾತರಿಪಡಿಸಬೇಕು. ಚೀನಾದಲ್ಲಿ ಇಂತಹ ನಿಯಮ ಜಾರಿಯಲ್ಲಿದೆ. ಆದರೆ, ಕಂಪನಿಗಳು ಮಾತ್ರ ಹೆಚ್ಚುವರಿ 6 ತಿಂಗಳ ಕಾಲಾವಕಾಶವನ್ನು ಕೇಂದ್ರದಿಂದ ಬಯಸುತ್ತಿವೆ.

    ನಿಯಮ ಏನು ಹೇಳುತ್ತದೆ?: ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆದಾರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021ನ್ನು ಕೇಂದ್ರ ಸರ್ಕಾರ 2000ದ ಐಟಿ ಕಾಯ್ದೆ ಅಡಿಯಲ್ಲಿ ಜಾರಿ ಮಾಡಿತ್ತು. ಸಾಮಾಜಿಕ ಜಾಲತಾಣಗಳ ಬಳಕೆದಾರರ ದೂರುಗಳನ್ನು ಇತ್ಯರ್ಥಪಡಿಸಲು ಬಿಕ್ಕಟ್ಟು ನಿರ್ವಹಣೆ ವ್ಯವಸ್ಥೆ ಹೊಂದಿರಬೇಕೆಂಬುದು ಈ ನಿಯಮಗಳಲ್ಲೊಂದಾಗಿದೆ. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳು ಪ್ರಚೋದನಕಾರಿ ಆಕ್ಷೇಪಾರ್ಹ ಚಟುವಟಿಕೆಗಳಿಗೆ ಅನುಕೂಲಕರ ವೇದಿಕೆಯಾಗಿ ಬದಲಾಗಿರುವುದರಿಂದ ಭಾರತದಲ್ಲಿ ಕಾರ್ಯನಿರ್ವಹಿಸಲು ನಿರ್ದಿಷ್ಟ ನಿಯಮಗಳನ್ನು ಅನುಸರಿಸಬೇಕೆಂದು ಕೇಂದ್ರ ಉದ್ದೇಶಿಸಿದೆ. ಆಕ್ಷೇಪಾರ್ಹ ಕಂಟೆಂಟ್​ಗಳ ‘ಮೂಲ ರಚನೆಕಾರ’ರನ್ನು ಸಂಸ್ಥೆಗಳು ಗುರುತಿಸಬೇಕು ಎಂದೂ ನಿಯಮ ಗಳಲ್ಲಿ ತಿಳಿಸಲಾಗಿದೆ. ಆದರೆ, ಇದಕ್ಕೆ ವಿರೋಧಿಸಿರುವ ಕೆಲ ಇಂಟರ್​ನೆಟ್ ಹಕ್ಕು ಗುಂಪುಗಳು, ಹೊಸ ನಿಯಮಗಳು ಡಿಜಿಟಲ್ ನ್ಯೂಸ್, ಲೈವ್​ಸ್ಟೀಮಿಂಗ್ ವೇದಿಕೆಗಳು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲಿವೆ, ಇದರಿಂದ ಆನ್​ಲೈನ್ ಖಾಸಗಿತನ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಹಾನಿಯಾಗಲಿದೆ ಎಂದು ವಾದಿಸಿವೆ. ಕೇಂದ್ರದ ನೀತಿಯನ್ನು ಸಮರ್ಥಿಸಿರುವ ಕೆಲ ಮಂದಿ, ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿರುವುದರಿಂದ ಕೇಂದ್ರದ ನೀತಿಗಳನ್ನು ಪಾಲಿಸುವುದೂ ಸೂಕ್ತ. ಅಲ್ಲದೆ, ಈ ಬಿಕ್ಕಟ್ಟಿಗೆ ತೆರೆ ಎಳೆದು ಬಳಕೆದಾರರಿಗೆ ನೆರವಾಗಲು ಕೇಂದ್ರ ಸರ್ಕಾರವೂ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳು ನಿತ್ಯ ಜೀವನದ ಅವಿಭಾಜ್ಯ ಭಾಗವಾಗಿ ಬದಲಾಗಿರುವುದರಿಂದ ಇದಕ್ಕೆ ನಿಷೇಧ ಹೇರುವ ಸಾಧ್ಯತೆ ಕಡಿಮೆ ಎಂದು ತಂತಜ್ಞರು ಹೇಳುತ್ತಿದ್ದಾರೆ.

    ಗಡುವು ಅಂತ್ಯ, ಮುಂದೇನು?: ಅನುಸರಿಸದಿದ್ದರೆ ತಾಣಗಳೇ ಬ್ಲಾಕ್ ಸಾಧ್ಯತೆ!

    ಫೇಸ್​ಬುಕ್​ಗೆ ರ್ಚಚಿಸಬೇಕೆಂಬ ಆಶಯ: ನೂತನ ನಿಯಮಗಳನ್ನು ಪಾಲಿಸುತ್ತೇವೆ ಎಂದಿರುವ ಫೇಸ್​ಬುಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ನಿರ್ವಹಣಗೆ ಕೇಂದ್ರ ಸರ್ಕಾರದೊಂದಿಗೆ ಮತ್ತಷ್ಟು ಚರ್ಚೆ ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದೆ. ಫೇಸ್​ಬುಕ್​ನಲ್ಲಿ ಜನರು ತಮ್ಮ ಅಭಿಪ್ರಾಯ ಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕೆಂಬುದು ನಮ್ಮ ಉದ್ದೇಶ. ಹಾಗೆಯೇ ನಮ್ಮ ಕಾರ್ಯನಿರ್ವಹಣಾ ಪ್ರಕ್ರಿಯೆ, ಸಾಮರ್ಥ್ಯ ಸುಧಾರಣೆ ಮೇಲೆ ಗಮನಹರಿಸಿದ್ದೇವೆ ಎಂದು ಫೇಸ್ಬುಕ್ ಹೇಳಿದೆ.

    ಭಿನ್ನ ಹಾದಿಯಲ್ಲಿ ಟ್ವಿಟರ್: ಈ ನಡುವೆ ಟ್ವಿಟ್ಟರ್, ನಾವು ನಮ್ಮದೇ ಆದ ‘ವಾಸ್ತವ ಪರಿಶೀಲನೆ’ ವ್ಯವಸ್ಥೆ ಹೊಂದಿದ್ದು, ಈ ತನಿಖಾ ಪ್ರಕ್ರಿಯೆ ನಡೆಸುವವರ ಗುರುತನ್ನು ರಹಸ್ಯವಾಗಿಟು ಕೊಳ್ಳಲಾಗಿದೆ ಎಂದು ಹೇಳಿದೆ.

    ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts