More

    ಮನ್​ ಕೀ ಬಾತ್​ನಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಮೆಚ್ಚಿದ ಪ್ರಧಾನಿ: ಹರ್​ ಘರ್​ ತಿರಂಗಾ ಆಚರಿಸುವಂತೆ ಕರೆ

    ನವದೆಹಲಿ: ವಿಶ್ವದ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ ಪ್ರಧಾನಿ ಮೋದಿ, ಹರ್​ ಘರ್​ ತಿರಂಗಾ ಆಚರಣೆ ಮಾಡುವಂತೆ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.

    ಭಾನುವಾರ 91ನೇ ಮನ್​ ಕಿ ಬಾತ್​ ಆವೃತ್ತಿಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಸ್ತುತ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಪದಕ ಬೇಟೆ ಆರಂಭಿಸಿರುವ ಭಾರತೀಯ ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವದ ವೇದಿಕೆಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಎಂದರು.

    ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಗಸ್ಟ್ 13 ರಿಂದ ಆಗಸ್ಟ್ 15ರ ನಡುವೆ, ‘ಹರ್ ಘರ್ ತಿರಂಗಾ’ ಚಳುವಳಿಯನ್ನು ನಡೆಸಲಾಗುವುದು. ನೀವು ಈ ಆಂದೋಲನದ ಭಾಗವಾಗಬೇಕು ಮತ್ತು ನಿಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

    ಕೋವಿಡ್ ಕಾಲದ ನಡುವೆಯು ಔಷಧೀಯ ಮೌಲ್ಯ ಹೊಂದಿರುವ ಸಸ್ಯಗಳ ಸಂಶೋಧನೆಯಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿದೆ. ಇದು ಉತ್ತಮ ಆರಂಭದ ಸೂಚನೆ. ಇದೇ ಜುಲೈನಲ್ಲಿ ಭಾರತೀಯ ವರ್ಚುವಲ್ ಹರ್ಬೇರಿಯಂ ಅನ್ನು ಪ್ರಾರಂಭಿಸಿದೆವು. ನಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ನಾವು ಡಿಜಿಟಲ್ ಜಗತ್ತನ್ನು ಹೇಗೆ ಬಳಸಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

    ಭಾರತೀಯ ವರ್ಚುವಲ್ ಹರ್ಬೇರಿಯಂನಲ್ಲಿ ಸಂರಕ್ಷಿತ ಸಸ್ಯಗಳು ಅಥವಾ ಸಸ್ಯ ಭಾಗಗಳ ಡೇಟಾಬೇಸ್ ಇದೆ. ವೆಬ್‌ನಲ್ಲಿಯೂ ಉಚಿತವಾಗಿ ಲಭ್ಯವಿದೆ. 1 ಲಕ್ಷಕ್ಕೂ ಹೆಚ್ಚು ಮಾದರಿಗಳು ಮತ್ತು ಸಂಬಂಧಿತ ವೈಜ್ಞಾನಿಕ ಮಾಹಿತಿಯೂ ಲಭ್ಯವಿದೆ. ಈ ವರ್ಚುವಲ್ ಹರ್ಬೇರಿಯಂ ನಮ್ಮ ಸಸ್ಯಶಾಸ್ತ್ರೀಯ ವೈವಿಧ್ಯತೆಯನ್ನು ತೋರಿಸುತ್ತದೆ ಎಂದರು.

    ‘ಆಜಾದಿ ಕಿ ರೈಲ್‌ಗಾಡಿ ಔರ್ ರೈಲು ನಿಲ್ದಾಣ’ ಎಂಬ ಕುತೂಹಲಕಾರಿ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೆಯ ಐತಿಹಾಸಿಕ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಆಟಿಕೆ ಉದ್ಯಮವನ್ನು ವಿಸ್ತರಿಸಲು ದೇಶದಲ್ಲಿ ಸ್ಟಾರ್ಟಪ್ ಮತ್ತು ಉದ್ಯಮಿಗಳು ಮಾಡುತ್ತಿರುವ ಕೆಲಸವನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ನಮ್ಮ ಯುವಕರು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಿಗಳಿಂದ ನಾವು ಆಟಿಕೆ ಉದ್ಯಮದಲ್ಲಿ ಸಾಧಿಸಿದ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ ಎಂದರು. (ಏಜೆನ್ಸೀಸ್​)

    ಇದೆಂಥಾ ಚಟ: ಬಂಗಾಳದಲ್ಲಿ ಕಾಂಡೋಮ್​ ಖರೀದಿಸುವವರ ಸಂಖ್ಯೆ ದಿಢೀರ್​ ಏರಿಕೆ! ಕಾರಣ ಮಾತ್ರ ವಿಚಿತ್ರ

    ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​

    ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರಿದ್ದ ಕಾರಿನಲ್ಲಿ ರಾಶಿ ರಾಶಿ ಹಣ ವಶಕ್ಕೆ ಪಡೆದ ಬಂಗಾಳದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts