More

    ಮಂಡ್ಯ ಸಮಸ್ಯೆಗೆ ಮೈಸೂರು ಸಂಸದರ ಸ್ಪಂದನೆ: ಸುಮಲತಾ ಸಮರ್ಥನೆಗಿಳಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ

    ಮಂಡ್ಯ: ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಮನವಿ ಸಲ್ಲಿಸಿದರೂ ಪರಿಹಾರವಾಗದ ಸಮಸ್ಯೆಗೆ ಮೈಸೂರು ಸಂಸದ ಪ್ರತಾಪ್​ ಸಿಂಹ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದ್ದು, ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ.

    ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಾಗಿ ಜಲ್ಲಿ, ಮಣ್ಣು ತುಂಬಿದ ಲಾರಿಗಳ ಓಡಾಟದಿಂದ ಚಿಕ್ಕಮಂಡ್ಯದ ಕೆಎಚ್​ಬಿ ಬಡಾವಣೆ ರಸ್ತೆ ಹಾಳಾಗಿದೆ. ಜನರಿಗೆ ಓಡಾಡಲು ಸಮಸ್ಯೆ ಉಂಟಾಗಿದ್ದರಿಂದ ರಸ್ತೆ ದುರಸ್ತಿ ಮಾಡಿಸುವಂತೆ ಹಲವು ದಿನಗಳಿಂದಲೂ ಸ್ಥಳೀಯ ಜನರು ಸಂಸದೆ ಸುಮಲತಾ ಅವರನ್ನು ಒತ್ತಾಯಿಸುತ್ತಿದ್ದರು.

    ಆದರೆ, ಸುಮಲತಾ ಅವರಿಂದ ಸರಿಯಾದ ಸ್ಪಂದನೆ ಸಿಗದಿದ್ದಕ್ಕೆ ರಸ್ತೆ ದುರಸ್ಥಿ ಮಾಡಿಸಿಕೊಡುವಂತೆ ಜನರು ಮೈಸೂರು ಸಂಸದ ಪ್ರತಾಪ್ ಸಿಂಹ ಬಳಿ ಮನವಿ ಮಾಡಿದ್ದರು. ಸ್ಥಳೀಯ ಬಿಜೆಪಿ ಮುಖಂಡರ ನೆರವಿನ ಮೂಲಕ ಪ್ರತಾಂಪ್ ಸಿಂಹಯನ್ನು ಜನರು ಸಂಪರ್ಕಿಸಿದ್ದರು. ಜನರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪ್ರತಾಪ್​ ಸಿಂಹ, ರಸ್ತೆ ದುರಸ್ಥಿ ಮಾಡುವಂತೆ ಡಿಬಿಎಲ್ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೀಘ್ರವೇ ರಸ್ತೆ ಡಾಂಬಾರೀಕರಣ ಮಾಡಿಸಿಕೊಡುವ ಭರವಸೆವನ್ನು ನೀಡಿದ್ದಾರೆ.

    ಸುಮಲತಾ, ಪ್ರತಾಪ್ ಸಿಂಹ ಬೆಂಬಲಿಗರ ವಾಗ್ವಾದ
    ಸುಮಲತಾ ಅವರು ಸ್ಪಂದಿಸದಿದ್ದರೂ ಸುಮಲತಾರನ್ನು ಸಮರ್ಥಿಸಿಕೊಳ್ಳಲು ಮುಂದಾದ ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡ ಘಟನೆ ಪ್ರತಾಪ್​ ಸಿಂಹ ಭೇಟಿಯ ವೇಳೆ ನಡೆದಿದೆ. ಅಂದಾಭಿಮಾನ ಬಿಡುವಂತೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪ್ರತಾಪ್ ಸಿಂಹ ತೆರಳುತ್ತಿದ್ದಂತೆ ಉಭಯ ಸಂಸದರ ಬೆಂಬಲಗರ ನಡುವೆ ವಾಗ್ವಾದ ನಡೆದಿದೆ. ಬೀಡಿ ಕಾಲೋನಿಗೆ ಮಳೆ ನೀರು ತುಂಬಿತ್ತಲ್ಲ ಸುಮಲತಾ ಬಂದಿದ್ರಾ? ಕೆಲಸ ಮಾಡಿದ್ರೆ ಜೈ ಅಂತೀವಿ, ಮಾಡ್ಲಿಲ್ಲ ಅಂದ್ರೆ ಧಿಕ್ಕಾರ ಕೂಗುತ್ತೀವಿ. ಅಂದಾಭಿಮಾನ ಬಿಡುವಂತೆ ಸ್ಥಳೀಯರು ತರಾಟೆ ತೆಗೆದುಕೊಂಡರು. ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಸುಮಕ್ಕ ಬೆಂಬಲಿಗರು ಸ್ಥಳದಿಂದ ಕಾಲ್ಕಿತ್ತರು. (ದಿಗ್ವಿಜಯ ನ್ಯೂಸ್​)

    ಸುಮಲತಾರಿಗೆ ಮನವಿ ಸಲ್ಲಿಸಿದ್ರೂ ಬಗೆಹರಿಯದ ಸಮಸ್ಯೆ; ಪ್ರತಾಪ್​ ಸಿಂಹ ಮೊರೆ ಹೋದ ಮಂಡ್ಯ ಗ್ರಾಮಸ್ಥರು

    ಮದ್ವೆಯಾಗಿದ್ರೂ ಪರವಾಗಿಲ್ಲ ತೆಲುಗು ಸ್ಟಾರ್​ ನಟ ಒಪ್ಪಿದ್ರೆ ಈಗಲೂ ಡೇಟಿಂಗ್​ಗೆ ರೆಡಿ ಅಂದ್ರು ವಿಶ್ವ ಸುಂದರಿ!

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts