More

    ಶಿಕ್ಷಕಿ ಕೊಲೆ​ ಪ್ರಕರಣ: ಹಾಸ್ಟೆಲ್​ನಲ್ಲಿ ನಡೆಯುತ್ತಿತ್ತು​ ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?

    ಭುವನೇಶ್ವರ: ಒಡಿಶಾದ 24 ವರ್ಷದ ಶಿಕ್ಷಕಿ ಮಮಿತಾ ಮೆಹೆರ್​ ಅವರ ಪೂರ್ವನಿಯೋಜಿತ ಕೊಲೆಯು ಇಡೀ ಒಡಿಶಾ ರಾಜ್ಯವನ್ನು ಆಘಾತಕ್ಕೆ ದೂಡಿದೆ. ಈ ಪ್ರಕರಣ ಸಂಬಂಧ ಮಾತನಾಡಿರುವ ಹಿರಿಯ ಬಿಜೆಪಿ ನಾಯಕ ಬಿಜೋಯ್​ ಮೊಹಾಪಾತ್ರ, ಪ್ರಕರಣದ ಪ್ರಮುಖ ಆರೋಪಿ ಗೋವಿಂದ್​ ಸಾಹುನನ್ನು ಕೇಸ್​ ಡೈರಿಯಿಂದ ಕೈಬಿಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಈ ಪ್ರಕರಣದಲ್ಲಿ ಪೊಲೀಸ್​ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಕರಣವನ್ನು ಹಳಿ ತಪ್ಪಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಗೃಹ ಖಾತೆಯ ರಾಜ್ಯ ಸಚಿವ ದಿಬ್ಯಾ ಶಂಕರ್ ಮಿಶ್ರಾ ಅವರನ್ನು ಆರೋಪದಿಂದ ಮುಕ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಗೋವಿಂದ ಸಾಹುನನ್ನು ಕೇಸ್​ ಡೈರಿಯಲ್ಲಿ ಸಾಕ್ಷಿಯನ್ನಾಗಿ ಉಲ್ಲೇಖಿಸಲಾಗಿದೆ. ಅಕ್ಟೋಬರ್​ 13ರಲ್ಲೇ ಎಫ್​ಐಆರ್​ ರಿಜಿಸ್ಟರ್​ ಆದ್ರೂ ಕೂಡ ನ್ಯಾಯಾಲಯಕ್ಕೆ ಕೇಸ್​ ಡೈರಿ ಫೈಲ್​ ಮಾಡಲು ಮೂರು ದಿನಗಳನ್ನು ತೆಗೆದುಕೊಂಡಿದ್ದಾರೆ. ಸಾಹು ವಿರುದ್ಧ ಇರುವ ಪ್ರಕರಣವನ್ನು ದುರ್ಬಲಗೊಳಿಸಲು ಈ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.

    ಮಹಾಲಿಂಗ್​ ಶಿಕ್ಷಣ ಸಂಸ್ಥೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ವಿಚಾರ ಪೊಲೀಸರಿಗೂ ಗೊತ್ತಿತ್ತು. ಕಾಲೇಜು ಹಾಸ್ಟೆಲ್​ನಲ್ಲಿ ಸೆಕ್ಸ್​ ರಾಕೆಟ್​ ಚಾಲ್ತಿಯಲ್ಲಿತ್ತು ಎಂಬುದನ್ನು ಕೇಸ್​ ಡೈರಿಯಲ್ಲೂ ಉಲ್ಲೇಖಿಸಲಾಗಿದೆ. ಆದರೆ, ರಾಜಕೀಯ ಒತ್ತಡದಿಂದ ಗೋವಿಂದ ಸಾಹು ಹೆಸರನ್ನು ಡೈರಿಯಿಂದ ತೆಗೆಯಲಾಗಿದೆ ಎಂದು ಪೊಲೀಸ್​ ತನಿಖೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

    ಮಮಿತಾ ಹತ್ಯೆಯ ಕೆಲವು ದಿನಗಳ ಮೊದಲು ರಾಯ್‌ಪುರದ ನಿವಾಸದಲ್ಲಿ ಆರೋಪಿ ಗೋವಿಂದ ಮತ್ತು ಶಿಕ್ಷಕಿ ಮಮಿತಾ ನಡುವೆ ಸಚಿವ ದಿಬ್ಯಾ ಶಂಕರ್ ಮಿಶ್ರಾ ಮಧ್ಯಸ್ಥಿಕೆಯಲ್ಲಿ ಸಂಧಾನ ಪ್ರಯತ್ನ ನಡೆದಿತ್ತು ಎಂದು ಮೊಹಾಪಾತ್ರ ಈ ಹಿಂದೆಯೇ ಆರೋಪಿಸಿದ್ದರು.

    ಘಟನೆ ಹಿನ್ನೆಲೆ ಏನು?
    ಮಮಿತಾ ಮೆಹೆರ್​ ಅವರು ಒಡಿಶಾದ ಕಲಹಂಡಿ ಜಿಲ್ಲೆಯ ಮಹಾಲಿಂಗದಲ್ಲಿರುವ ಸನ್​ಸೈನ್​ ಇಂಗ್ಲಿಷ್​ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದರು. ಇದ್ದಕ್ಕಿದ್ದಂತೆ ಅ.8ರಂದು ಮಮಿತಾ ನಾಪತ್ತೆಯಾಗಿದ್ದರು. ಇದರ ಹಿಂದೆ ಅದೇ ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದ ಗೋವಿಂದ್​ ಸಾಹು ಕೈವಾಡ ಇದೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ದಾಖಲಿಸಿದ್ದರು.

    ಇದಾದ ಬಳಿಕ ಸಾಹುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಇತ್ತು. ಮಮಿತಾರನ್ನು ಕೊಂದು ಆಕೆಯ ಮೃತದೇಹವನ್ನು ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿತ್ತು. ಅ.8ರಂದು ಸಾಹು ತನ್ನ ಕಾರಿನಲ್ಲಿ ಮಮಿತಾರನ್ನು ಭವಾನಿಪಟ್ಟಣಕ್ಕೆ ಕರೆದೊಯ್ದಿದ್ದಾನೆ. ಮರಳಿ ಬರುವಾಗ ಕಾರಿನ ಒಳಗಡೆಯೇ ಮಮಿತಾರನ್ನು ಸಾಹು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಮಮಿತಾ, ಸಾಕಷ್ಟು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.

    ಕೊಲೆಗೆ ಕಾರಣ ಏನೆಂದು ನೋಡಿದಾಗ, ಮಮಿತಾ ಬಳಿ ಸಾಹುಗೆ ಸಂಬಂಧಿಸಿದ ಎರಡು ಆಕ್ಷೇಪಾರ್ಹ ವಿಡಿಯೋಗಳಿದ್ದವು ಎಂದು ತಿಳಿದುಬಂದಿದೆ. ಆಕೆಯನ್ನು ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಸಮಸ್ಯೆಯಾಗಬಹುದು ಅಂತಾ ದುರಾಲೋಚನೆಯಿಂದ ಆಕೆಯನ್ನು ಸಾಹು ಕೊಲೆಗೈದಿದ್ದಾನೆ ಎನ್ನಲಾಗಿದೆ. ಶಾಲೆಯಲ್ಲಿದ್ದ ಮಹಿಳಾ ಉದ್ಯೋಗಿಗಳ ಮೇಲೆ ಸಾಹು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ. ಅಲ್ಲದೆ, ಆತನ ಅಕ್ರಮ ಸಂಬಂಧಗಳನ್ನು ಬಯಲಿಗೆಳೆದು ಮುಖವಾಡವನ್ನು ಕಳಚುವುದಾಗಿ ಮಮಿತಾ ಎಚ್ಚರಿಕೆ ನೀಡಿದ್ದಳೆಂದು ಹೇಳಲಾಗಿದೆ.

    ಅ.7ರಂದು ಸಾಹು, ಶಾಲೆಯ ಸ್ಟೇಡಿಯಂ ನಿರ್ಮಾಣದ ಸೈಟಿನಲ್ಲಿ ಹಳ್ಳ ತೆಗೆಯಲು ಜೆಸಿಬಿ ಕೆಲಸಗಾರನಿಗೆ ಹೇಳಿದ್ದ. ಮಮಿತಾ ಕೊಲೆಯ ಬಳಿಕ ಆಕೆಯ ಮೃತದೇಹವನ್ನು ಪೆಟ್ರೋಲ್​ ಸುರಿದು ಬೆಂಕಿಯಿಟ್ಟು ನಂತರ ಮೊದಲೇ ತೋಡಲು ಹೇಳಿದ್ದ ಹಳ್ಳಕ್ಕೆ ತಳ್ಳಿ, ಮೃತದೇಹ ಬೇಗ ಕೊಳೆಯಲಿ ಎಂದು ಅದರ ಮೇಲೆ ಉಪ್ಪನ್ನು ಸುರಿದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದರು.

    ಅ. 9ರಂದು ಅರ್ಧ ಮುಚ್ಚಿದ್ದ ಹಳ್ಳವನ್ನು ಪೂರ್ತಿಯಾಗಿ ಮುಚ್ಚುವಂತೆ ಸಾಹು, ಜೆಸಿಬಿ ಆಪರೇಟರ್​ಗೆ ಹೇಳಿದ್ದಾನೆ. ಇನ್ನು ಈ ಘಟನೆಯಲ್ಲಿ ಅನೇಕ ಮಂದಿ ಕೈಜೋಡಿಸಿದ್ದು, ಇದೊಂದು ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಪೊಲೀಸ್​ ವರದಿಯಲ್ಲಿ ಉಲ್ಲೇಖವಾಗಿದೆ.

    ಅ.14ರಂದು ಪೊಲೀಸರು ಸಾಹುವಿನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿ ಕಾಲು ಗೆಜ್ಜೆ ಮತ್ತು ಪೆಟ್ರೋಲ್​ ಜಾರ್​ ಅನ್ನು ವಶಕ್ಕೆ ಪಡೆಯಲಾಗಿದೆ. ಅ.19ರಂದು ಮಮಿತಾ ಮೃತದೇಹವನ್ನು ಹೂತಿಟ್ಟಿದ್ದ ಸ್ಟೇಡಿಯಂ ನಿರ್ಮಾಣ ಜಾಗದಿಂದ ಹೊರತೆಗೆಯಲಾಗಿದ್ದು, ಸ್ಥಳದಲ್ಲಿ ಚೈನ್​ ಮತ್ತು ಬ್ಯಾಗ್​ ಅನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಕೇಸ್​ ಡೈರಿಯಲ್ಲಿ ಗೋವಿಂದ ಸಾಹು ಹೆಸರು ಇಲ್ಲ ಎಂದು ಬಿಜೆಪಿ ನಾಯಕ ಬಿಜೋಯ್​ ಮೊಹಾಪಾತ್ರ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಶಾಲಾಧ್ಯಕ್ಷನನ್ನು ನಂಬಿ ಕಾರಿನಲ್ಲಿ ಹೋದ ಶಿಕ್ಷಕಿಗೆ ಕಾದಿತ್ತು ಶಾಕ್​! ಮೊದಲೇ ಹಳ್ಳ ತೋಡಿದ್ದ ಕಿರಾತಕ

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ಕಾಂಡೋಮ್​ ಪರೀಕ್ಷಿಸಲು ಉತ್ಸುಕರಾದ ರಾಕುಲ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫಸ್ಟ್​ಲುಕ್​ ಪೋಸ್ಟರ್​!​

    ಪ್ರತಿ ಬಾರಿ ಕೆನ್ನೆಗೆ ಬಾರಿಸಲು ಮಹಿಳೆಯ ನೇಮಕ: ಎನ್​ಆರ್​ಐ ಉದ್ಯಮಿ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts