More

    ಬಯಾಲಜಿ ತರಗತಿ ವೇಳೆ ಬಯಲಾಯ್ತು 13ರ ಬಾಲಕಿಯ ಮುಟ್ಟಿನ ರಹಸ್ಯ: ಮದರಸಾ ಸಿಬ್ಬಂದಿಗೆ ಬಿಗ್​ ಶಾಕ್​!

    ಕೊಚ್ಚಿ: ಮದರಸಾ ಶಾಲೆಯಲ್ಲಿ 13 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿರುವ ಆರೋಪದ ಮೇಲೆ ಕೇರಳದ ಥಡಿಯಿಟ್ಟ ಠಾಣಾ ಪೊಲೀಸರು 27 ವರ್ಷದ ಯುವಕನನ್ನು ಬಂಧಿಸಿದ್ದಾರೆ.

    ಬಂಧಿತನನ್ನು ಶರಫುದ್ದೀನ್​ ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಮೂಲದವನು. ಮದರಸಾದಲ್ಲಿ ಶಿಕ್ಷಕರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಶಾಲೆಗೆ ಬೇಗ ಬರುತ್ತಿದ್ದ ಹುಡುಗಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಇದೀಗ 2 ತಿಂಗಳ ಗರ್ಭಿಣಿ ಆಗಿದ್ದಾಳೆ. 2021ರ ನವೆಂಬರ್​ನಿಂದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು ಮದರಸಾ ತರಗತಿಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಮದರಸಾದಲ್ಲಿ ಜೀವಶಾಸ್ತ್ರ ಬೋಧಿಸುವ ಶಿಕ್ಷಕರೊಬ್ಬರು ಸೋಮವಾರ ತರಗತಿಯಲ್ಲಿ ಹೆಣ್ಣುಮಕ್ಕಳ ನಿಯಮಿತ ಋತುಚಕ್ರದ ಬಗ್ಗೆ ಪಾಠ ಮಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯಾದರೆ ಮುಟ್ಟಾಗುವುದಿಲ್ಲ ಎಂದು ಹೇಳಿದಾಗ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ತನ್ನ ಸ್ನೇಹಿತೆ ಮುಟ್ಟಾಗಿಲ್ಲ ಎಂದು ಹೇಳಿದ್ದಾಳೆ. ತಕ್ಷಣ ಈ ವಿಚಾರವನ್ನು ಶಿಕ್ಷಕ ಮುಖ್ಯೋಪಧ್ಯಾಯರಿಗೆ ತಿಳಿಸಿದ್ದಾರೆ. ಬಳಿಕ ಅವರು ಮಕ್ಕಳ ಸಹಾಯವಾಣಿಗೆ ವಿಷಯ ಮುಟ್ಟಿಸಿದ್ದಾರೆ.

    ಸಹಾಯವಾಣಿ ಸಿಬ್ಬಂದಿ ಶಾಲೆಗೆ ಆಗಮಿಸಿ ಸಂತ್ರಸ್ತೆಯ ಕೌನ್ಸೆಲಿಂಗ್​ ನಡೆಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯನ್ನು ಪರೀಕ್ಷಿಸಲಾಯಿತು. ಬಾಲಕಿ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದು, ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

    ಅಂದಹಾಗೆ ಆರೋಪಿ ಶರಫುದ್ದೀನ್​ ಏಳು ವರ್ಷಗಳಿಂದ ಮದರಸಾದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಕುಮ್ಮನೊಡೆಯ ಪಟ್ಟಿಮಟ್ಟೊಮ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ತಮಿಳುನಾಡು ಮೂಲದವನಾದರೂ ಮಲಯಾಳಂ ಅನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತಾನೆ. ತಾನು ಬ್ಯಾಚುಲರ್​ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. (ಏಜೆನ್ಸೀಸ್​)

    ಇದಪ್ಪಾ ಅದೃಷ್ಟ ಅಂದ್ರೆ! ಸಾಲದ ಸುಳಿಯಲ್ಲಿದ್ದ ಮನೆಗೆ 75 ಲಕ್ಷ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ

    ಇಲ್ಲಿಯ ಕೆರೆ, ಬಾತುಕೋಳಿ, ಮೊಲಗಳಿಗೆ ಧರ್ಮ ಉಂಟೆ? ಇನ್ಮುಂದೆ ಈ ಕಾಲೇಜಲ್ಲಿ ನಡೆಯುತ್ತೆ ಹೋಮ-ಹವನ…

    ಯೂಕ್ರೇನ್​​ ಕಾಲೇಜು ಅಂಡರ್​ಗ್ರೌಂಡ್​ನಲ್ಲಿರುವ ಮಗನನ್ನು ವಾಪಸ್ ಭಾರತಕ್ಕೆ ಕರೆ ತರಲು ಮನವಿ ಮಾಡಿದ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts