More

    ಸಮುದ್ರ ಪಾಲಾದ 62 ಕೋಟಿ ರೂ. ಮೌಲ್ಯದ ಐಷಾರಾಮಿ ವಿಹಾರ ನೌಕೆ: ವಿಡಿಯೋ ವೈರಲ್​

    ರೋಮ್​: ಬರೋಬ್ಬರಿ 7.8 ಮಿಲಿಯನ್​ ಡಾಲರ್​ ( 62 ಕೋಟಿ ರೂ.ಗೂ ಅಧಿಕ) ಮೌಲ್ಯದ 39.4 ಮೀ (129 ಅಡಿ) ಉದ್ದದ ಐಷಾರಾಮಿ ವಿಹಾರ ನೌಕೆಯೊಂದು ದಕ್ಷಿಣ ಇಟಲಿಯ ಕ್ಯಾಟಂಜರೋ ತೀರ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದಲ್ಲಿ ಮುಳುಗಡೆಯಾಗಿದೆ.

    ಹಡಗು ಮುಳುಗುತ್ತಿರುವ ಸ್ಫೋಟಕ ವಿಡಿಯೋವನ್ನು ಇಟಾಲಿಯನ್​ ಕರಾವಳಿ ಪಡೆ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ. ಹಡಗು ಲೋನಿಯನ್​ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದೆ.

    ವಿಹಾರ ನೌಕೆ ಮುಳುಗುತ್ತಿದ್ದಂತೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಇಳಿದ ಇಟಾಲಿಯನ್ ಕೋಸ್ಟ್ ಗಾರ್ಡ್, ಎಲ್ಲಾ ನಾಲ್ಕು ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ರಕ್ಷಿಸಿದರು. ಹಡಗು ಗಲ್ಲಿಪೋಲಿಯಿಂದ ಮಿಲಾಝೋಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಮುದ್ರ ಪಾಲಾಗಿದೆ.

    ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಐಷಾರಾಮಿ ನೌಕೆಯ ಹೆಸರು ಮೈ ಸಾಗಾ. ಕಳೆದ ವಾರ ನೌಕಾಯಾನ ಹೊರಟಿತ್ತು. ಈ ವೇಳೆ ನೌಕೆಯ ಹಿಂಭಾಗವು ನೀರಿನಿಂದ ತುಂಬುತ್ತಿದೆ ಎಂಬ ಸಿಬ್ಬಂದಿಯ ಕರೆಗೆ ತಕ್ಷಣ ಪ್ರತಿಕ್ರಿಯಿಸಿದ ಕರಾವಳಿ ಕಾವಲುಗಾರರ ಪಡೆ ಬೇರೆ ಹಡಗೊಂದನ್ನು ಅಲ್ಲಿಗೆ ಕಳುಹಿಸಿ ಎಲ್ಲರನ್ನು ರಕ್ಷಣೆ ಮಾಡಿದೆ. (ಏಜೆನ್ಸೀಸ್​)

    ನಿನ್ನ ರೇಟ್​ ಎಷ್ಟು ಎಂದು ಕೇಳಿದ ವಿಜಯ್​ ದೇವರಕೊಂಡ ಫ್ಯಾನ್ಸ್​ಗೆ ಅನಸೂಯ ಕೊಟ್ಟ ತಿರುಗೇಟು ಹೀಗಿತ್ತು…

    ಬಾಲಿವುಡ್​ ಸಾಂಗ್​ಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆಯರು! ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

    ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts