More

    ಲಿಪ್​ಲಾಕ್ ದೃಶ್ಯಕ್ಕಾಗಿ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಮಲಯಾಳಿ ಬೆಡಗಿ ಅನುಪಮಾ!

    ಹೈದರಾಬಾದ್​: ಇದುವರೆಗೂ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ಮಲಯಾಳಿ ಬೆಡಗಿ ಅನುಪಮಾ ಪರಮೇಶ್ವರನ್, ತೆಲುಗಿನ “ರೌಡಿ ಬಾಯ್ಸ್​​” ಸಿನಿಮಾದಲ್ಲಿ ತುಂಬಾ ಬೊಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಕಟ್ಟುಪಾಡುಗಳನ್ನು ಕಟ್ಟಿ ಬದಿಗಿಟ್ಟು ಹೊಸ ಹೀರೋ ಜತೆ ರೊಮ್ಯಾಂಟಿಕ ದೃಶ್ಯದಲ್ಲಿ ನಟಿವುದ ಮೂಲಕ ಹಲವರ ಹುಬ್ಬೇರಿಸಿದ್ದಾರೆ.

    ಇತ್ತೀಚೆಗಷ್ಟೇ ರೌಡಿ ಬಾಯ್ಸ್​ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ಅನುಪಮಾ ಲಿಪ್​ಲಾಕ್​ ದೃಶ್ಯದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೀರೋ ಜತೆ ಅನುಪಮಾ ಲಿಪ್​ಲಾಕ್ ಮಾಡಿದ್ದು, ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಮೂಲಗಳ ಈ ಸಿನಿಮಾಕ್ಕಾಗಿ 50 ಲಕ್ಷ ರೂ. ಸಂಭಾವನೆಯನ್ನು ಅನುಪಮಾ ಪಡೆದಿದ್ದಾರಂತೆ. ಈ ಮೊದಲು ಒಂದು ಚಿತ್ರಕ್ಕೆ 20 ರಿಂದ 25 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಅನುಪಮಾ ಈ ಬಾರಿ ಡಬಲ್​ ಸಂಭಾವನೆ ಪಡೆದುಕೊಂಡಿದ್ದಾರೆ.

    ಇನ್ನು ಅನುಪಮಾ ಲಿಪ್​ಲಾಕ್​ ದೃಶ್ಯ ನೋಡಿ ಅಭಿಮಾನಿಗಳ ಹೃದಯ ಬಿರಿಯುವಂತಾಗಿದೆ. ಅನುಪಮಾರನ್ನು ಅಭಿಮಾನಿಗಳು ಯಾವಾಗಲೂ ಪಕ್ಕದ ಮನೆ ಯುವತಿಯ ರೀತಿ ಕಾಣುತ್ತಿದ್ದರು. ಎಲ್ಲ ತಮ್ಮ ಗ್ಲಾಮರ್​ ಅನ್ನು ಹೆಚ್ಚಾಗಿ ಪ್ರದರ್ಶಿಸದೇ ಸಹಜ ಅಭಿನಯದಿಂದಲೇ ಅನುಪಮಾ ಮಾತಾಗಿದ್ದರು. ಇದೀಗ ಚಿತ್ರದಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹೀರೋ ಜತೆ ಲಿಪ್​ಲಾಕ್​ ಮಾಡಿರುವುದು ಅನುಪಮಾ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಇದೆಲ್ಲ ಏನಮ್ಮ ಅನುಪಮಾ ಎಂದು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್​)

    ಅನುಪಮಾ ಇದೆಲ್ಲ ಏನಮ್ಮಾ… ಮಲಯಾಳಿ ಬೆಡಗಿ ಮೇಲೆ ಅಭಿಮಾನಿಗಳ ಮುನಿಸು!

    ಕ್ಯೂನಲ್ಲಿ ನಿಂತು ದಿನಕ್ಕೆ 16 ಸಾವಿರ ರೂ. ಸಂಪಾದನೆ: ಈತನ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ನಟ ಧನುಷ್​-ಐಶ್ವರ್ಯಾ ಡಿವೋರ್ಸ್​ಗೆ ಕಾರಣವೇನು? ಸ್ಟಾರ್​ ದಂಪತಿ ಕೊಟ್ಟ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts