More

    ಕಿಡಿಗೇಡಿಗಳು ಮಾಡಿದ ಆ ಒಂದು ಕೃತ್ಯಕ್ಕೆ ನೋವಿನಲ್ಲಿ ದಿನ ದೂಡುತ್ತಿರುವ ಮಹಿಳೆಯ ಕಣ್ಣೀರ ಕತೆಯಿದು..!

    ಚಂಗನಾಸ್ಸೆರಿ: ಸಹಜವಾಗಿ ಸಾಗುತ್ತಿದ್ದ ಮಹಿಳೆಯೊಬ್ಬಳ ಜೀವನ ಕೆಲ ಕಿಡಿಗೇಡಿಗಳು ಮಾಡಿದ ದುಷ್ಕೃತ್ಯದಿಂದ ಅನಿರೀಕ್ಷಿತ ತಿರುವು ಪಡೆದುಕೊಂಡು ಏರಿಳಿತಗಳನ್ನು ಅನುಭವಿಸುವಂತಾಗಿದೆ. ಒಬ್ಬರ ಹುಡುಗಾಟಿಕೆ ಇನ್ನೊಬ್ಬರ ಜೀವನವನ್ನು ಹೇಗೆ ದುರಂತದ ದಾರಿಗೆ ದೂಡುತ್ತದೆ ಎಂಬುದಕ್ಕೆ ಕೇರಳದ ಚಂಗನಾಶೇರಿಯಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

    ಹೇಗೋ ಮಹಿಳೆಯೊಬ್ಬಳ ಫೋನ್​ ನಂಬರ್​ ಪಡೆದುಕೊಂಡ ಕೆಲ ಕಿಡಿಗೇಡಿಗಳು ಅದನ್ನು ರೈಲಿನ ಟಾಯ್ಲೆಟ್ಸ್​ ಸೇರಿದಂತೆ ಎಲ್ಲೆಲ್ಲಿ ಬರೆಯಲು ಸಾಧ್ಯವೋ ಅಲ್ಲೆಲ್ಲ ಬರೆದು, ಸೆಕ್ಸ್​ ವರ್ಕರ್​ (ಲೈಂಗಿಕ ಕಾರ್ಯಕರ್ತೆ) ಎಂದು ಬಿಂಬಿಸಿದ್ದಾರೆ. ಇದರಿಂದ ಅಮಾಯಕ ಮಹಿಳೆಯ ಜೀವನ ನಿತ್ಯವೂ ಯಾತನೆಮಯವಾಗಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರು ಸಹ ಪೊಲೀಸರಿಂದ ಯಾವುದೇ ಸ್ಪಂದನೆ ಸಿಗದಿರುವುದು, ಹೇಗೆ ಮುಂದಿನ ಜೀವನ ನಡೆಸಬೇಕೆಂಬ ಸುಳಿವೇ ಇಲ್ಲದೆ ಮಹಿಳೆ ನಿತ್ಯವೂ ನರಳುವಂತಾಗಿದೆ.

    ವಿವರಣೆಗೆ ಬರುವುದಾದರೆ, ಸಂತ್ರಸ್ತ ಮಹಿಳೆ ಕೇರಳದ ಚಂಗನಾಸ್ಸೆರಿ ಸಮೀಪದ ವಕಥಾನಮ್​. ವೃತ್ತಿಯಲ್ಲಿ ಟೈಲರ್​ ಆಗಿದ್ದಾರೆ. ಅನೇಕ ಪೊಲೀಸ್​ ಠಾಣೆಗಳಲ್ಲಿ ದೂರು ನೀಡಿದ್ರೂ ಅವರಿಂದ ಬಂದ ಒಂದೇ ಒಂದು ಸಹಲೆ ಅಂದರೆ ಫೋನ್​ ನಂಬರ್​ ಬದಲಾಯಿಸು ಎಂಬುದು. ಆದ್ರೆ, ಅದು ಸಾಧ್ಯವಿಲ್ಲ. ಕಾರಣ ಆ ಒಂದು ಫೋನ್​ ನಂಬರ್​ ಮೇಲೆ ಆಕೆಯ ವೃತ್ತಿ ಜೀವನವೇ ನಿಂತಿದೆ. ಮೊದಲೇ ಸಂತ್ರಸ್ತ ಮಹಿಳೆ ಟೈಲರ್​ ಆಗಿರುವುದರಿಂದ ಅವಳ ಫೋನ್​ ನಂಬರ್​ ಅನೇಕರ ಬಳಿಯಿದೆ. ಇದರಿಂದ ಆಕೆಯ ಹೊಟ್ಟೆಪಾಡಿಗೆ ನೆರವಾಗುತ್ತಿದೆ. ಒಂದು ವೇಳೆ ಫೋನ್​ ನಂಬರ್​ ಬದಲಾಯಿಸಿದ್ರೆ ಅನೇಕ ಗ್ರಾಹಕರು ಕೈತಪ್ಪುವ ಭೀತಿಯು ಮಹಿಳೆಗೆ ಇದೆ. ಏಕೆಂದರೆ ಅನೇಕ ಗ್ರಾಹಕರು ಅದೇ ನಂಬರ್​ಗೆ ಅನೇಕ ವರ್ಷಗಳಿಗೆ ಸಂಪರ್ಕಿಸುತ್ತಿದ್ದಾರೆ.

    ಇನ್ನು ತನ್ನ ನೋವಿನ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ನಾನು ಕುರಿತ್ತಿಮಲೈನ್ ಇತಿಥಾನಂನಲ್ಲಿ ಟೈಲರ್​ ಅಂಗಡಿ ಇಟ್ಟುಕೊಂಡಿದ್ದೇನೆ. ಕಳೆದ 9 ತಿಂಗಳಿಂದ ಕೆಲವೊಂದು ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಕರೆ ಮಾಡುವ ಕೆಲ ಕಿಡಿಗೇಡಿಗಳು ಅನುಚಿತವಾಗಿ ಮಾತನಾಡುತ್ತಿದ್ದಾರೆ ಎಂದು ವಿಡಿಯೋ ರೆಕಾರ್ಡ್​ ಮಾಡಿ ಅದನ್ನು ಫೇಸ್​ಬುಕ್​ನಲ್ಲಿ ಹರಿಬಿಟ್ಟ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಸಂತ್ರಸ್ತೆ ತನ್ನ ನಾಲ್ವರು ಮಕ್ಕಳೊಂದಿಗೆ ಥೆಂಗನಾ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಳೆ. ಗಂಡ ಆಕೆಯನ್ನು ದೂರ ಮಾಡಿರುವುರಿಂದ ಮಕ್ಕಳೊಂದಿಗೆ ಸ್ವತಂತ್ರವಾಗಿಯೇ ಜೀವನ ಸಾಗಿಸುತ್ತಿದ್ದಾಳೆ. ದಿನವೊಂದಕ್ಕೆ ಸುಮಾರು 50 ಕರೆ ಸ್ವೀಕರಿಸುವ ಸಂತ್ರಸ್ತೆ, ಬರೋಬ್ಬರಿ 30 ಕರೆ ಒಂದೇ ನಂಬರ್​ನಿಂದ ಬರುತ್ತದೆ ಎಂದು ಹೇಳಿದ್ದಾಳೆ. ನನ್ನ ಮಕ್ಕಳು ಕರೆ ಸ್ವೀಕರಿಸಿದಾಗ ಅವರೊಂದಿಗೂ ಕೆಟ್ಟದಾಗಿ ಮಾತನಾಡುತ್ತಾರೆಂದು ಕಣ್ಣೀರಿಟ್ಟಿದ್ದಾರೆ.

    ದಯವಿಟ್ಟು ನನ್ನನ್ನು ನೆಮ್ಮದಿಯಿಂದ ಬದಕಲು ಬಿಡಿ ಎಂದು ಮನವಿ ಮಾಡಿಕೊಂಡಿರುವ ಸಂತ್ರಸ್ತೆ, ನೀವು ಅಂದುಕೊಂಡಂತೆ ನಾನು ಅಸಭ್ಯಳಲ್ಲ ಮತ್ತು ಎಂದಿಗೂ ಆ ರೀತಿ ಆಗುವುದಿಲ್ಲ. ಗೌರವದಿಂದ ಬದುಕಬೇಕು ಅಂದುಕೊಂಡಿದ್ದೇನೆ. ನನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಲು ತುಂಬಾ ಶ್ರಮ ಪಡುತ್ತಿದ್ದೇನೆ. ಆದರೆ, ಈ ಮಂದಿ ನನ್ನನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.

    ಪೊಲೀಸರು ನೆರವಾಗುತ್ತಾರೆ ಎಂಬ ಭರವಸೆ ಸುಳ್ಳಾದ ಬಳಿಕ ಕೊನೆಯ ಆಯ್ಕೆ ಎಂಬಂತೆ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳಲು ಸಂತ್ರಸ್ತೆ ನಿರ್ಧರಿಸಿದಳು. ಇದೀಗ ಜಿಲ್ಲಾ ಪೊಲೀಸ್​ ಮುಖ್ಯಸ್ಥರಿಗೆ ಮಹಿಳೆ ದೂರು ನೀಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ಆ ಎರಡು ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿಗಳು..!

    Inside Story: ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಕಣ್ಣೀರಿಗೆ ಸಂಸತ್ತಿನಲ್ಲಿ ನಡೆದ ಈ ಘಟನೆಗಳೇ ಕಾರಣ!

    ದುಬೈನಲ್ಲಿ ಐಷಾರಾಮಿ ಜೀವನ: ದಿಢೀರ್ ದಿವಾಳಿಯಾಗಿ ಬೀದಿ ಸುತ್ತುತ್ತಿದ್ದ ಕೇರಳ ಮಹಿಳೆ ಇದೀಗ ಸುರಕ್ಷಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts