More

    ಮಗನ ಚಿಕಿತ್ಸೆಗೆ ಚಿನ್ನದುಂಗುರ ಮಾರಲು ಹೋಗುವಾಗ ಚರಂಡಿಗೆ ಬಿದ್ದ ರಿಂಗ್​: ನೆರವಿಗೆ ಬಂದ ಲೇಡಿ ಪೊಲೀಸ್​​!

    ಚಾವಕ್ಕಾಡ್: ಅನಾರೋಗ್ಯದಿಂದ ಬಳಲುತ್ತಿದ್ದ ಮಗನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ತನ್ನ ಬಳಿಯಿದ್ದ ಚಿನ್ನದ ಉಂಗುರವನ್ನು ಮಾರಾಟ ಮಾಡುವುದನ್ನು ಬಿಟ್ಟು ಈ ಮಹಾತಾಯಿಗೆ ಬೇರೆ ದಾರಿ ಕಾಣಲಿಲ್ಲ. ಅದನ್ನು ಮಾರಾಟ ಮಾಡಲು ಹೋದ ತಾಯಿಗೆ ಒಂದು ಸಂಕಷ್ಟು ಎದುರಾಯಿತು. ದುರಾದೃಷ್ಟವಶಾತ್​ ಚಿನ್ನದ ಉಂಗುರ ಅನಿರೀಕ್ಷಿತವಾಗಿ ಚರಂಡಿಯೊಳಗೆ ಬಿದ್ದು ಹೋಯಿತು. ಮುಂದೇನು ಮಾಡುವುದು ಅಂತಾ ಯೋಚಿಸುವಾಗ ಅದೃಷ್ಟವಶಾತ್​ ದೇವರ ರೂಪದಲ್ಲಿ ಬಂದಿದ್ದೇ ಮಹಿಳಾ ಪೊಲೀಸ್​ ಅಧಿಕಾರಿ.

    ತಿರುವಥ್ರ ನಿವಾಸಿ ಹಸೀನಾ ತನ್ನ ಅರ್ಧ ಸವರನ್​ ಚಿನ್ನದ ಉಂಗುರವನ್ನು ಮಾರಾಟ ಮಾಡಲು ಚಾವಕ್ಕಾಡ್​ಗೆ ಬಂದಿರುತ್ತಾರೆ. ತರಾತುರಿಯಲ್ಲಿ ನಡೆಯಬೇಕಾದರೆ ಆಕಸ್ಮಿಕವಾಗಿ ಹಸೀನಾ ಕೈಯಲ್ಲಿದ್ದ ಚಿನ್ನದ ಉಂಗುರ ಜಾರಿ ಕಾಂಕ್ರಿಟ್​ ಸ್ಲ್ಯಾಬ್​ ನಡುವೆ ತೂರಿ ಹೋಗಿ ಚರಂಡಿಗೆ ಬೀಳುತ್ತದೆ. ಅದನ್ನು ಮರಳಿ ಪಡೆಯಲು ಹಸೀನಾ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಏನು ಮಾಡುವುದು ಯೋಚಿಸುತ್ತಿರುವಾಗಲೇ ಹಸೀನಾಗೆ ಥಟ್ಟನೇ ನೆನಪಾಗುವುದು ಪೊಲೀಸ್​ ಠಾಣೆ. ತಕ್ಷಣ ಅವರು ಚಾವಕ್ಕಾಡ್​ ಪೊಲೀಸ್​ ಠಾಣೆಗೆ ಕಣ್ಣೀರಿಡುತ್ತಾ ಬರುತ್ತಾರೆ.

    ಈ ವೇಳೆ ರಾಣೆಯ ಪೊಲೀಸ್​ ಅಧಿಕಾರಿ ಸೌದಮಣಿ, ಹಸೀನಾ ಅಳಲನ್ನು ಕೇಳಿ ಅವರಿಗೆ ಸಮಾಧಾನ ಮಾಡಿ ಸಹಾಯ ಮಾಡಲು ಮುಂದಾಗುತ್ತಾರೆ. ಹಸೀನಾರನ್ನು ಕರೆದುಕೊಂಡು ಉಂಗುರ ಕಳೆದುಕೊಂಡ ಸ್ಥಳಕ್ಕೆ ತೆರಳುತ್ತಾರೆ. ಬಳಿಕ ಒಂದು ಜೆಸಿಬಿಯನ್ನು ತರಿಸಿ, ಕಾಂಕ್ರಿಟ್​ ಸ್ಲ್ಯಾಬ್​ಗಳನ್ನು ತೆಗೆಸಿ, ಚರಂಡಿಯಲ್ಲಿದ್ದ ಕೊಳಕನ್ನು ಹೊರ ತೆಗೆಸುತ್ತಾರೆ. ಬಳಿಕ ಕೊಳಕಿನಲ್ಲಿ ಹುಡುಕಾಡಿದಾಗ ಚಿನ್ನದ ಉಂಗುರ ಪತ್ತೆಯಾಗುತ್ತದೆ. ಅಷ್ಟರಲ್ಲಿ ಹಸೀನಾ ಕೂಡ ನಿಟ್ಟುಸಿರು ಬಿಡುತ್ತಾ ಪೊಲೀಸ್​ ಅಧಿಕಾರಿ ಸೌದ ಮಣಿ ಅವರಿಗೆ ಧನ್ಯವಾದ ತಿಳಿಸುತ್ತಾರೆ.

    ಸರಿಯಾದ ಸಮಯಕ್ಕೆ ಮಹಿಳೆಗೆ ಕಷ್ಟಕ್ಕೆ ಸ್ಪಂದಿಸಿದ ಸೌದ ಮಣಿ ಅವರಿಗೆ ಸಾರ್ವಜನಿಕರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸ್ಟೋರಿಯನ್ನು ಫೇಸ್​ಬುಕ್​ಗಳಲ್ಲಿ ಬರೆದುಕೊಂಡು ಸೌದ ಮಣಿ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್​ ಪತ್ತೆ ಕೇಸ್​​: ಪೊಲೀಸ್​ ತನಿಖೆಯಲ್ಲಿ ಅಸಲಿಯತ್ತು ಬಯಲು..!

    ಲವರ್​ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್​ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್​!

    ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಕರಗಿಸಿ ಆರೋಗ್ಯ ಕಾಪಾಡುವಲ್ಲಿ ಧಾನ್ಯಗಳ ಪಾತ್ರ ತುಂಬಾ ಮಹತ್ವದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts