ಹೈದರಾಬಾದ್: ಟಾಲಿವುಡ್ನ ಪ್ರಖ್ಯಾತ ನಿರ್ದೇಶಕ ಕೃಷ್ಣ ಜಗರ್ಲಮುಡಿ ತನ್ನ ಪತ್ನಿ ರಮ್ಯಾಳಿಂದ ಡಿವೋರ್ಸ್ ಪಡೆದು ಮೂರು ವರ್ಷಗಳಾಗಿದ್ದು, ಈ ಸಮಯದಲ್ಲಿ ಡಿವೋರ್ಸ್ ಪ್ರಕರಣ ಕುರಿತು ಒಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ನಿರ್ದೇಶಕ ಕೃಷ್ಣ 2016ರ ಆಗಸ್ಟ್ 7ರಂದು ವೃತ್ತಿಯಲ್ಲಿ ವೈದ್ಯಳಾಗಿರುವ ರಮ್ಯಾಳನ್ನು ಮದುವೆ ಆಗಿದ್ದರು. ಇದಾದ ಎರಡೇ ವರ್ಷದಲ್ಲಿ ಕೃಷ್ಣ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದರು. ಎಷ್ಟು ಬೇಗ ಮದುವೆ ಆದರು ಅಷ್ಟೇ ಬೇಗ ಇಬ್ಬರು ದೂರ ಆದರು. ಈ ಸುದ್ದಿ ಟಾಲಿವುಡ್ನಲ್ಲಿ ಅಚ್ಚರಿ ಸೃಷ್ಟಿಸಿತ್ತು.
ಇದೀಗ ಡಿವೋರ್ಸ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೃಷ್ಣ ಮತ್ತು ರಮ್ಯಾರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳಲು ಓರ್ವ ಹೀರೋಯಿನ್ ಕಾರಣ ಎಂಬ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ತಾನು ನಿರ್ದೇಶಿಸಿದ ಚಿತ್ರದ ನಾಯಕಿಯೊಂದಿಗೆ ಕೃಷ್ಣಗೆ ಸಂಬಂಧ ಇತ್ತೆಂದು ಹೇಳಲಾಗಿದೆ. ಮದುವೆಯಾದ ಕೆಲವು ದಿನಗಳಲ್ಲಿ ಈ ವಿಚಾರ ರಮ್ಯಾಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರಂತೆ.
ದಿನ ಕಳೆದಂತೆ ದಂಪತಿ ನಡುವೆ ವಿರಸ ಹೆಚ್ಚಾಗಿ 2018ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು. ಯಾರು ಆ ನಾಯಕಿ ಎಂಬ ವಿಚಾರ ಬಹಿರಂಗವಾಗಿಲ್ಲ. ಆದರೆ, ಟಾಲಿವುಡ್ನಲ್ಲಿ ಮಾತ್ರ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ಕೃಷ್ಣ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಬಾಯ್ಫ್ರೆಂಡ್ ಜತೆ ಬ್ರೇಕಪ್, ಗರ್ಭಿಣಿ, ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ ಇಲಿಯಾನಾ!
ಜೋಡಿಗಳಿಗೆ ಹೇಳಿ ಮಾಡಿಸಿದ ದ್ವೀಪವಿದು- ಇಲ್ಲಿಗೆ ಹೋದ್ರೆ ಸಿಗತ್ತೆ 88 ಲಕ್ಷ ರೂ ಜತೆ ಸಕಲ ಸೌಲಭ್ಯ!
ಕರೊನಾ ಬಿಕ್ಕಟ್ಟಿನ ಸಮಯದಲ್ಲೂ ಯುಪಿ ಪೊಲೀಸರು 20 ಕೆಜಿ ರಸಗುಲ್ಲಾ ಸೀಜ್ ಮಾಡಿದ್ದೇಕೆ?