More

    ಪರೀಕ್ಷೆಗೆ ಬಂದಿದ್ದ ಬಾಣಂತಿ ಅಭ್ಯರ್ಥಿಯ ಮಗುವನ್ನು ಆರೈಕೆ ಮಾಡಿ ಮಾನವೀಯತೆ ಮೆರೆದ ಮಹಿಳಾ ಪೇದೆ!

    ಹಾವೇರಿ: ಪೊಲೀಸರು ತುಂಬಾ ಕಠೋರ ಮನಸ್ಸುಳ್ಳವರು ಎಂದು ತಪ್ಪು ತಿಳಿದುಕೊಂಡಿರುವವರು ಈ ಸ್ಟೋರಿ ಓದಿದ್ರೆ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವುದು ಖಂಡಿತ. ಮೊನ್ನೆ ನಡೆದ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಮನ ಮಿಡಿಯುವ ಘಟನೆ ಒಂದು ನಡೆದಿದೆ.

    ಪರೀಕ್ಷೆ ಬರೆಯಲು ಬಂದಿದ್ದ ಸವಣೂರು ಮೂಲದ ಬಾಣಂತಿ ಅಭ್ಯರ್ಥಿಯ ಮಗುವನ್ನು ಬಂದೋಬಸ್ತ್​ಗೆಂದು ಬಂದಿದ್ದ ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ತಾಯಿಯಂತೆ ಆರೈಕೆ ಮಾಡಿ ನೋಡಿಕೊಂಡಿದ್ದಾರೆ. ಈ ಘಟನೆ ಹಾವೇರಿಯ ಎಸ್​ಜೆಎಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

    ಮಹಿಳಾ ಪೊಲೀಸ್ ಪೇದೆ ನೇತ್ರಾವತಿ ಎಂಬುವವರು ತಮ್ಮ ಕರ್ತವ್ಯದ ಜೊತೆ, ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗೆ ಧೈರ್ಯ ಹೇಳಿ, ಅಳುತ್ತಿದ್ದ ಮಗುವನ್ನು ಆರೈಕೆ ಮಾಡಿದ್ದಾರೆ. 3 ತಿಂಗಳ ಹಸೂಗೂಸು ಎತ್ತಿ ಆಡಿಸಿ ಮಾನವೀಯತೆ ಮೆರೆದಿದ್ದಾರೆ. ಪರೀಕ್ಷೆಗೆ ತಡವಾಗುತ್ತದೆ ಎಂದು ಭಯಗೊಂಡಿದ್ದ ಮಹಿಳಾ ಬಾಣಂತಿ ಅಭ್ಯರ್ಥಿ, ಮಗು ಕಡೆ ಗಮನಕೊಡದೆ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಮಗು ಅಳುತ್ತಿರುವುದನ್ನು ನೋಡಿ, ಕಾನ್‌ಸ್ಟೆಬಲ್ ನೇತ್ರಾವತಿ ಪರೀಕ್ಷಾ ಅಭ್ಯರ್ಥಿಗೆ ಧೈರ್ಯ ಹೇಳಿ ಮಗುವಿಗೆ ಸಮಾಧಾನ ಮಾಡಿ ಆರೈಕೆ ಮಾಡಿದ್ದಾರೆ.

    ಮಗುವನ್ನು ಸಮಾಧಾನ ಮಾಡಿ ಆರೈಕೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾತೃ ಪ್ರೇಮ ಮೆರೆದ ಕಾನಸ್ಟೇಬಲ್ ನೇತ್ರಾವತಿ ಅವರನ್ನು ಕಾಲೇಜು ಸಿಬ್ಬಂದಿ ಹಾಡಿ ಹೋಗಳಿದೆ. ಅಲ್ಲದೆ, ಪೊಲೀಸ್​ ಇಲಾಖೆಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

    ಚಲಿಸುತ್ತಿದ್ದ ಆಟೋದಿಂದ ಕೆಳಗೆ ಜಿಗಿದ ಯುವತಿ: ಆಟೋ ಒಳಗೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಸಂತ್ರಸ್ತೆ

    ನಡುರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಇಬ್ಬರು ಯುವತಿಯರು: ಕಾರಣ ತಿಳಿದವರಿಗೆ ಕಾದಿತ್ತು ಶಾಕ್​​!

    ಅಳಿಯನ ಜತೆ ಸಾವಿನ ಮನೆಯ ಕದ ತಟ್ಟಿದ ಅಮ್ಮ-ಮಗಳು! ನಿನ್ನೆ ರಾತ್ರಿ ಮಾಗಡಿಯಲ್ಲಿ ನಡೀತು ಭೀಕರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts