More

    ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ ಪ್ರಕರಣ: ಇಂದು ಕೋಲಾರ ಬಂದ್​

    ಕೋಲಾರ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್​ಗೆ ಕರೆ ಕೊಟ್ಟಿದ್ದು, ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಬೈಕ್​ ಜಾಥಾವನ್ನು ನಡೆಸುತ್ತಿದ್ದಾರೆ.

    ಕೋಲಾರ ಬಂದ್​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಿಸುವ ಸಾಧ್ಯತೆ ಇದೆ. ಆದರೆ, ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

    ಪ್ರಮೋದ್​ ಮುತಾಲಿಕ್​ ಅವರು ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ. ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್ 18ರಂದು ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ, ಆಡಿಯೋ-ವಿಡಿಯೋ ಭಾಷಣ ಮಾಡದಂತೆಯೂ ನಿರ್ಬಂಧಿಸಲಾಗಿದೆ.

    ಇನ್ನು ಬಂದ್​ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಯುವಕರು ಬಲವಂತವಾಗಿ ಬಸ್​ಗಳನ್ನು ತಡೆದು ನಿಲ್ದಾಣ ಬಂದ್ ಮಾಡಿಸುತ್ತಿದ್ದಾರೆ. ನಗರದ ಟೇಕಲ್ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ಕಂಪನಿಯ ಬಸ್​ಗಳನ್ನು ತಡೆಯಲಾಗಿದೆ. ಪೊಲೀಸರ ಮಧ್ಯ ಪ್ರವೇಶದಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಬಂದ್ ಇರೋದ್ರಿಂದ ಸಂಚಾರಕ್ಕೆ ಅನುಮತಿ ನೀಡಬೇಡಿ ಎಂದು ಹಿಂದು ಕಾರ್ಯಕರ್ತರು ಜಿಲ್ಲಾಡಿಳತಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಾಗಿದೆ. ಜಿಟಿ ಜಿಟಿ ಮಳೆಯ ನಡುವೆಯೂ ಬೆಳ್ಳಂಬೆಳಗ್ಗೆ ಹಿಂದೂ ಕಾರ್ಯಕರ್ತರು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ.

    ಘಟನೆ ಹಿನ್ನೆಲೆ ಏನು?
    ನ.13 ರ ಶನಿವಾರ ರಾತ್ರಿ 11 ಗಂಟೆ ವೇಳೆಗೆ ನಗರದ ವಿಶಾಲ್ ಮಾರ್ಟ್ ಬಳಿ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯನ್ನು ಖಂಡಿಸಿ ಇಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಳೆಯಿಂದ 150ಕ್ಕೂ ಹೆಚ್ಚು ಮನೆ ಕುಸಿತ, ಅಪಾರ ಬೆಳೆ ನಷ್ಟವಾದ್ರೂ ಮಂಡ್ಯಕ್ಕೆ ಬಾರದ ಸುಮಲತಾ ವಿರುದ್ಧ ಆಕ್ರೋಶ

    ಟಿಕೆಟ್ ಪಡೆಯದೇ ಬಿಎಂಟಿಸಿಯಲ್ಲಿ 2 ಸಾವಿರ ಜನರ ಪ್ರಯಾಣ: ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ

    ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಪ್ರಖ್ಯಾತ ನಿರ್ದೇಶಕ, ನಟ ಆರ್​ಎನ್​ಆರ್​ ಮನೋಹರ್​ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts