More

    ಮಳೆಯಿಂದ 150ಕ್ಕೂ ಹೆಚ್ಚು ಮನೆ ಕುಸಿತ, ಅಪಾರ ಬೆಳೆ ನಷ್ಟವಾದ್ರೂ ಮಂಡ್ಯಕ್ಕೆ ಬಾರದ ಸುಮಲತಾ ವಿರುದ್ಧ ಆಕ್ರೋಶ

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸ್ವಾಭಿಮಾನದ ಹೆಸರಲ್ಲಿ ಗೆಲುವು ಸಾಧಿಸಿದ ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಮಂಡ್ಯ ಜನರಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ,

    ಸಂಸದೆಯಾಗಿ ಎರಡೂವರೆ ತಿಂಗಳಲ್ಲಿ ಕೇವಲ 3 ಬಾರಿ ಮಾತ್ರ ಭೇಟಿ ಮಾಡಿರುವ ಸುಮಲತಾ ಮಂಡ್ಯ ಮರೆತ್ರಾ ಅನ್ನೋ ಅನುಮಾನ ಮೂಡಿದೆ. ಜನ ಸಾಮಾನ್ಯರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂಸದರೇ ಸಿಗುತ್ತಿಲ್ಲ. ಚುನಾವಣೆಯಲ್ಲಿ ಸುಮಲತಾಗೆ ಬೆಂಬಲ ನೀಡಿದ ಮುಖಂಡರಿಗೂ ಕೂಡ ಈ ವಿಚಾರದಲ್ಲಿ ಬೇಸರವಾಗಿದೆ.

    ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ರೂ ಸುಮಲತಾ ಅವರು ಮಾತ್ರ ಕ್ಷೇತ್ರಕ್ಕೆ ಬರುತ್ತಿಲ್ಲ. ಇಡೀ ರಾಜ್ಯಾದ್ಯಂತ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ನಷ್ಟವಾಗಿದ್ದರೂ ಕೂಡ ಸಮಲತಾ ಅವರು ಮಾತ್ರ ಏನೂ ಆಗಿಲ್ಲ ಅನ್ನುವಂತೆ ಕ್ಷೇತ್ರಕ್ಕೆ ಮುಖ ಮಾಡುತ್ತಿಲ್ಲ.

    ಸಮಸ್ಯೆಗೆ ಪರಿಹಾರ ನೀಡುವುದಿರಲಿ ಕನಿಷ್ಠ ಧೈರ್ಯ ತುಂಬುವುದಕ್ಕೂ ಸಂಸದರು ಬಂದಿಲ್ಲ. ಮತ ಕೇಳುವಾಗ ನಿಮ್ಮೊಂದಿಗೆ ಇದ್ದು ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದ ಸುಮಕ್ಕ, ಇದೀಗ ಮಂಡ್ಯ ಜನರಿಂದ ದೂರಾಗಿರುವುದರಿಂದ ಸುಮಲತಾ ನಡೆಗೆ ಮಂಡ್ಯ ಜನರಲ್ಲಿ ದಿನೇ ದಿನೇ ಆಕ್ರೋಶ ಹೆಚ್ಚುತ್ತಿದೆ. (ದಿಗ್ವಿಜಯ ನ್ಯೂಸ್​)

    ಟಿಕೆಟ್ ಪಡೆಯದೇ ಬಿಎಂಟಿಸಿಯಲ್ಲಿ 2 ಸಾವಿರ ಜನರ ಪ್ರಯಾಣ: ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ

    ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಪ್ರಖ್ಯಾತ ನಿರ್ದೇಶಕ, ನಟ ಆರ್​ಎನ್​ಆರ್​ ಮನೋಹರ್​ ಇನ್ನಿಲ್ಲ

    ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts