More

    ಲಾಸ್ಟ್​ ಟೈಂ ಯಾವಾಗ ಲೈಂಗಿಕ ಕ್ರಿಯೆ ನಡೆಸಿದ್ರಿ! ವಿಜಯ್​ಗೆ ಕರಣ್​ ಪ್ರಶ್ನೆ, ನಾನು ಗೆಸ್​ ಮಾಡ್ಲಾ ಎಂದ ಅನನ್ಯಾ

    ಮುಂಬೈ: ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ 4ನೇ ಎಪಿಸೋಡ್​ನಲ್ಲಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಲೈಗರ್​”ನಲ್ಲಿ ನಟಿಸಿರುವ ನಟ ವಿಜಯ್​ ದೇವರಕೊಂಡ ಮತ್ತು ನಟಿ ಅನನ್ಯಾ ಪಾಂಡೆ ಅವರು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಈ ಎಪಿಸೋಡ್​ನ ಪ್ರೊಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ ನಿರೂಪಕ ಕರಣ್​ ಜೋಹರ್​ ಅವರು ವಿಜಯ್​ ದೇವರಕೊಂಡಗೆ ಕೇಳಿದ ಪ್ರಶ್ನೆ. ಅಲ್ಲದೆ, ಅನನ್ಯಾ ಹೇಳಿದ ಮಾತಿನಿಂದ ಈ ಎಪಿಸೋಡ್​ ನೋಡಲು ವೀಕ್ಷಕರು ಎದುರು ನೋಡುತ್ತಿದ್ದಾರೆ.

    ಅನನ್ಯಾ ಅವರ ಹೊಸ ಬಾಯ್​ಫ್ರೆಂಡ್​ ಬಗ್ಗೆ ಪ್ರೊಮೋದಲ್ಲಿ ಕರಣ್​ ಅವರು ಕೇಳಿದ್ದಾರೆ. ನನ್ನ ಬರ್ತಡೆ ಪಾರ್ಟಿಯಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ ಎಂದಿದ್ದಕ್ಕೆ ಮಧ್ಯ ಪ್ರವೇಶಿಸಿದ ಅನನ್ಯಾ, ದಯವಿಟ್ಟು ಏನನ್ನು ಹೇಳಬೇಡಿ ಅಂದರು. ಬಳಿಕ ನಿಮ್ಮ ಮತ್ತು ಆದಿತ್ಯ ರಾಯ್ ಕಪೂರ್ ನಡುವೆ ಏನು ನಡೆಯುತ್ತಿದೆ? ಎಂದು ಕರಣ್​ ಪ್ರಶ್ನಿಸಿದರು. ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅನನ್ಯಾಗೆ ಕೇಳಲಾಗಿದ್ದು, ಅವುಗಳ ಉತ್ತರಕ್ಕಾಗಿ ನೀವು ಪೂರ್ತಿ ಎಪಿಸೋಡ್​ ನೋಡಬೇಕಾಗಿದೆ.

    ಇದಾದ ಬಳಿಕ ವಿಜಯ್​ ದೇವರಕೊಂಡರನ್ನು ಉದ್ದೇಶಿಸಿ, ನೀವು ಚೀಸ್​ ಅನ್ನು ಇಷ್ಟಪಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿ ವಿಜಯ್​, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಭಯವಿದೆ ಅಂದರು. ವಿಜಯ್​ ಹೀಗೆ ಹೇಳಲು ಕಾರಣವಿದೆ. ಏಕೆಂದರೆ, ಎರಡನೇ ಎಪಿಸೋಡ್​ ವೇಳೆ ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಅವರು ವಿಜಯ್​ ಅವರನ್ನು ಚೀಸ್​ ಎಂದು ಕರೆದಿದ್ದರು. ಅನನ್ಯಾ ಕೂಡ ಅದನ್ನೇ ಪುನರುಚ್ಛರಿಸಿದರು.

    ಇದಾದ ಬಳಿಕ ತೀರಾ ವೈಯಕ್ತಿಕ ಪ್ರಶ್ನೆಯೊಂದನ್ನು ಕರಣ್​ ಕೇಳಿದರು, ಕೊನೆಯದಾಗಿ ನೀವು ಲೈಂಗಿಕ ಕ್ರಿಯೆ ಯಾವಾಗ ನಡೆಸಿದ್ರಿ ಎಂದು ಪ್ರಶ್ನಿಸಿದರು. ಅದಕ್ಕೆ ವಿಜಯ್​, ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ, ಮಧ್ಯಪ್ರವೇಶಿಸಿದ ಅನನ್ಯಾ, ನಾನು ಗೆಸ್​ ಮಾಡ್ಲಾ? ನೀನು ಇಂದು ಬೆಳಗ್ಗೆ ಮಾಡಿದ್ದೀಯ ಎಂದರು. ಹೀಗೆ ಇಡೀ ಪ್ರೊಮೋದಲ್ಲಿ ತೀರಾ ವೈಯಕ್ತಿಕ ಪ್ರಶ್ನೆಗಳನ್ನೇ ಕೇಳಲಾಗಿದ್ದು, ಇದೀಗ ಪ್ರೋಮೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಅಂದಹಾಗೆ ವಿಜಯ್​ ದೇವರಕೊಂಡ ಮತ್ತು ಅನನ್ಯಾ ಎಪಿಸೋಡ್​ ಇದೇ ಜುಲೈ 28 ರಂದು ಡಿಸ್ನಿ ಹಾಟ್​ ಸ್ಟಾರ್​ನಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್​)

    ಸಾಲದ ಸುಳಿಗೆ ಸಿಲುಕಿ ಇನ್ನೇನು ಮನೆ ಮಾರುವಷ್ಟರಲ್ಲಿ 1 ಕೋಟಿ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ!

    ಅನೈತಿಕ ತಾಣವಾದ ಕುಮಾರವ್ಯಾಸ ಮೈದಾನ; ಮಂಟಪದ ಜಾಗದಲ್ಲಿ ವಾಹನ ನಿಲುಗಡೆ 

    ಉಗ್ರರ ಹಿಮ್ಮೆಟ್ಟಿಸಲು ಕಮಾಂಡೋ ಪಡೆ; ರಾಜ್ಯಾದ್ಯಂತ ಪೊಲೀಸ್ ತಂಡ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts