More

    ದೇವೇಗೌಡರು, ಕುಮಾರಸ್ವಾಮಿ ಹೆಸರು ಹೇಳಿದ್ರೆ ಜನ ವೋಟ್​ ಹಾಕಲ್ಲ: ಶಾಸಕ ಶಿವಲಿಂಗೇಗೌಡ ಅಸಮಾಧಾನ

    ಹಾಸನ: ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಹೇಳಿದರೆ ಜನ ಬಂದು ವೋಟ್​ ಬಟನ್ ಒತ್ತೊದಿಲ್ಲ ಎನ್ನುವ ಮೂಲಕ ಶಾಸಕ ಶಿವಲಿಂಗೇಗೌಡ ಅವರು ತಮ್ಮ ಪಕ್ಷದ ವರಿಷ್ಠರ ಎದುರಲ್ಲೇ ಅಸಮಾಧಾನ ಹೊರಹಾಕಿದ್ದಾರೆ.

    ಮಾಜಿ ಪ್ರಧಾನಿ ಹೆಚ್‌ಡಿ.ದೇವೇಗೌಡ ನೇತೃತ್ವದಲ್ಲಿ ನಿನ್ನೆ ಹಾಸನದಲ್ಲಿ ನಡೆದ ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಜಿಲ್ಲೆಯ ಎಲ್ಲ ಮುಖಂಡರ ಜತೆ ಕಾರ್ಯಕರ್ತರು ಬಂದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

    ಏನೋ ಸೀಕ್ರೆಟ್ ಸಭೆ ಅಂದ್ರೆ ಎಲ್ರೂ ಸೇರಿದ್ದಾರೆ. ಸೀಕ್ರೆಟ್ ಸಭೆ ಎಂದು ನಾನು ಒಬ್ಬನೇ ಬಂದಿದ್ದೇನೆ. ಈಗ ನಮ್ಮನ್ನು ಕರೆದಿಲ್ಲ ಎಂದು ನಮ್ಮ‌ ಭಾಗದ ಕಾರ್ಯಕರ್ತರು ಬೇಸರ ಮಾಡಿಕೊಳ್ಳುತ್ತಾರೆ. ಯಾರಿಗೂ ಹೇಳದಿದ್ರೆ ಸೀಕ್ರೆಟ್ ಸಭೆ ಮಾಡಬೇಕು. ಈ ರೀತಿ ಸಭೆ ಅಂದಿದ್ರೆ ನಾವು ಬರುತ್ತಿರಲಿಲ್ಲ. ಅರಸೀಕೆರೆಯಲ್ಲಿ‌ ನಮ್ಮವರನ್ನೆಲ್ಲ‌ ಸೇರಿಸಿ ಸಭೆ ಮಾಡುತ್ತಿದ್ದೆ. ಈಗ ಈ ಸಭೆಗೆ ನಾನು ಅವರನ್ನು ಕರೆದಿಲ್ಲ ಎಂದು ಕಾರ್ಯಕರ್ತರು, ಮುಖಂಡರು ಮುನಿಸಿಕೊಳ್ಳುತ್ತಾರೆ ಎಂದರು.

    ಕಳೆದ ಬಾರಿ ಪಟೇಲ್ ಶಿವರಾಂಗೆ ನಾನು ವೋಟ್ ಹಾಕಿಲ್ಲ‌ ಅಂದ್ರು. ನನ್ನಿಂದಾನೆ ಸೋತ ಅಂದ್ರು. ನಮ್ಮ‌ ಹೆತ್ತ ತಾಯಾಣೆ ನಾನು ಆ ರೀತಿ ಮಾಡೋನಲ್ಲ. ಈಗ ನಾನೂರ ಹತ್ತು ಸದಸ್ಯರು ನನ್ನ ಕ್ಷೇತ್ರದಿಂದ ಜೆಡಿಎಸ್‌ನವರು ಗೆದ್ದಿದ್ದಾರೆ. ಅವರ ಓಟ್ ಓಪನ್ ಆಗಿ ಹಾಕಿಸುತ್ತೇನೆಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಬಾಲಕೃಷ್ಣ ಸಮಾಧಾನ ಮಾಡಲು ಮುಂದಾದರು. ಏ ಸುಮ್ನೆ ಕುಳಿತುಕೊಳ್ಳಯ್ಯ ಗೊತ್ತು ಎಂದು ಶಿವಲಿಂಗೇಗೌಡರು ಧ್ವನಿ ಏರಿಸಿದರು.

    ಜಿಲ್ಲೆಯ ಎಲ್ಲ‌ ಕಡೆಯಿಂದ ಕಾರ್ಯಕರ್ತರು ಮುಖಂಡರು ಬಂದಿದ್ದಾರೆ. ನಮಗೂ ಹೇಳಿದ್ರೆ ನಾವು ಕರೆತರುತ್ತಿದ್ದೆವು. ನಾವು ಗೆದ್ದೇ ಗೆಲ್ಲುತ್ತೇವೆ. ನೀವು ಯಾರನ್ನೇ ನಿಲ್ಲಿಸಿದ್ರು ನಮ್ಮ‌ ಬೆಂಬಲವಿದೆ. ಆದರೆ, ಸಭೆ ಕರೆದಾಗ ಯಾವ ರೀತಿ ಸಭೆ ಎಂದು ಹೇಳಿ. ಸೀಕ್ರೆಟ್ ಸಭೆ ಅಂದರೆ ಒಬ್ಬನೇ ಬರುತ್ತೇನೆ. ಇಲ್ಲದಿದ್ರೆ ನಮ್ಮ‌ ಕಾರ್ಯಕರ್ತರನ್ನು ಕರೆತರುತ್ತೇನೆ. ಈಗ ಏನಾದ್ರು ಎಡವಟ್ಟಾದ್ರೆ ನಿಮ್ಮಿಂದಲೇ ಆಗಬೇಕು ಎಂದರು.

    ದೇವೇಗೌಡರು, ಭವಾನಿ ಮೇಡಂಗೆ ಟಿಕೆಟ್ ಕೊಡಲಿ ಅಥವಾ ಯಾರಿಗೇ ಟಿಕೆಟ್ ಕೊಡಲಿ ನಮ್ಮ ತಕರಾರಿಲ್ಲ. ಅವರು ಯಾರಿಗೆ ಟಿಕೆಟ್ ಕೊಡ್ತಾರೆ ಅವರಿಗೆ ವೋಟ್ ಹಾಕಿಸುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಬೆಳೆ ನುಂಗಿದ ಅಕಾಲಿಕ ಮಳೆ: ಕೈಗೆ ಬಂದ ಫಸಲು ಬಾಯಿಗಿಲ್ಲ; ಅನ್ನದಾತ ಕಂಗಾಲು..

    ಸರ್ಕಾರಕ್ಕೆ ಐದು ಪ್ರಶ್ನೆ: ಉತ್ತರಿಸುವಂತೆ ಸವಾಲ್ ಹಾಕಿದ ಪ್ರಿಯಾಂಕ್ ಖರ್ಗೆ

    ಇಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ, ನೀರಜ್ ಚೋಪ್ರಾ ಸಹಿತ 12 ಸಾಧಕರಿಗೆ ಖೇಲ್‌ರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts