More

    ಈ ರಾಷ್ಟ್ರದ ವಿಡಿಯೋಗಳನ್ನು ನೋಡಿದ 7 ಮಂದಿಗೆ ಗಲ್ಲುಶಿಕ್ಷೆ: ಉ. ಕೊರಿಯಾದ ಕರಾಳ ಮುಖ ಅನಾವರಣ

    ಪ್ಯೊಂಗ್ಯಾಂಗ್: ದಕ್ಷಿಣ ಕೊರಿಯಾದ ವಿಡಿಯೋಗಳನ್ನು ನೋಡಿದಕ್ಕೆ ಅಥವಾ ವಿತರಣೆ ಮಾಡಿದ್ದಕ್ಕೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 7 ಮಂದಿಗೆ ಉತ್ತರ ಕೊರಿಯಾ ಮರಣದಂಡನೆ ಶಿಕ್ಷೆಯನ್ನು ನೀಡಿದೆ. ಅಲ್ಲದೆ, ಉ. ಕೊರಿಯಾ ಸುಪ್ರೀಂ ಲೀಡರ್​ ಕಿಮ್​ ಜಾಂಗ್​ ಉನ್​ ಅಧ್ಯಕ್ಷತೆಯಲ್ಲೇ ಎಲ್ಲ ಮರಣದಂಡನೆ ಶಿಕ್ಷೆ ಜಾರಿಯಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪ ಮಾಡಿದೆ.

    ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ ಮೂಲದ ಮಾನವ ಹಕ್ಕುಗಳ ಸಂಘಟನೆ, ಪರಿವರ್ತನಾ ನ್ಯಾಯ ಕಾರ್ಯನಿರತ ಗುಂಪು ಉತ್ತರ ಕೊರಿಯಾ ತ್ಯಜಿಸಿ ಬಂದ 683 ಮಂದಿಯ ಸಂದರ್ಶನವನ್ನು ಮಾಡಿದ್ದು, ಕಳೆದ ಆರು ವರ್ಷಗಳಲ್ಲಿ ಉ. ಕೊರಿಯಾದಲ್ಲಿ 27 ಮರಣದಂಡನೆ ಶಿಕ್ಷೆಗಳು ದಾಖಲಾಗಿವೆ. ಅದರಲ್ಲಿ ಹೆಚ್ಚಿನದಾಗಿ ಡ್ರಗ್ಸ್​, ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಗೆ ಸಂಬಂಧಪಟ್ಟ ಮರಣದಂಡನೆ ಆಗಿದೆ.

    ಉ.ಕೊರಿಯಾದಲ್ಲಿ ಆನ್​ಲೈನ್​ ನ್ಯೂಸ್​ಪೇಪರ್​ ನಡೆಸುತ್ತಿರುವ ದ.ಕೊರಿಯಾ ಮೂಲದ ವ್ಯಕ್ತಿಯೊಬ್ಬ ಹೇಳುವಂತೆ ದಕ್ಷಿಣ ಕೊರಿಯಾ ಸಿನಿಮಾ ಮತ್ತು ಸಂಗೀತಕ್ಕೆ ಸಂಬಂಧಿಸಿದ ಸಿಡಿ ಮತ್ತು ಯುಎಸ್​ಬಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ದ.ಕೊರಿಯಾ ಸಿನಿಮಾಗಳನ್ನು ನೋಡುವುದು ಮತ್ತು ಅವುಗಳನ್ನು ವಿತರಿಸಿ ಆರು ಮಂದಿಯನ್ನೂ ಸಹ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಈ ಪ್ರಕರಣಗಳು ಉ.ಕೊರಿಯಾದ ಹೈಸನ್, ರಿಯಾಂಗ್‌ಗಾಂಗ್ ಪ್ರಾಂತ್ಯದಲ್ಲಿ 2012 ರಿಂದ 2014ರ ನಡುವಿನ ಸಮಯದಲ್ಲಿ ನಡೆದಿದೆ. ಆರೋಪಿಗಳಲ್ಲಿ ಒಬ್ಬನನ್ನು 2015ರಲ್ಲಿ ಉತ್ತರ ಹಮ್ಗ್ಯಾಂಗ್ ಪ್ರಾಂತ್ಯದ ಚೊಂಗ್ಜಿನ್ ನಗರದಲ್ಲಿ ಗಲ್ಲಿಗೇರಿಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಇನ್ನು ಉ. ಕೊರಿಯಾ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹಾಕಿದ ನಂತರವೂ ಇಂತಹ ಶಿಕ್ಷೆಗಳನ್ನು ರಹಸ್ಯವಾಗಿ ರಾಜಧಾನಿ ಪ್ಯೊಂಗ್ಯಾಂಗ್​ನ ರಹಸ್ಯ ಸ್ಥಳಗಳಲ್ಲಿ ನಡೆಸಲಾಗುತ್ತಿದೆ ಎಂಬ ಆರೋಪವೂ ಇದೆ. ಅಲ್ಲದೆ, ಎಲ್ಲ ಶಿಕ್ಷೆಗಳು ಸುಪ್ರೀಂ ನಾಯಕ ಕಿಂಗ್​ ಜಾಂಗ್​ ಉನ್​ ನೇತೃತ್ವದಲ್ಲಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇನ್ನು ಉ.ಕೊರಿಯಾ ಮೇಲೆ ಅಂತಾರಾಷ್ಟ್ರೀಯ ಪರಿಶೀಲನೆ ಹೆಚ್ಚಾಗುತ್ತಿದ್ದಂತೆ ಕಿಮ್​ ಜಾಂಗ್​ ಉನ್​ ಆಡಳಿವು ಮಾನವ ಹಕ್ಕುಗಳ ಮೇಲೆ ಹೆಚ್ಚು ಗಮನ ಹರಿಸಿದೆ ಎಂಬುದು ಕೂಡ ಬುಧವಾರ ಪ್ರಕಟವಾದ ವರದಿಯ ಪ್ರಮುಖ ಲೇಖಕ ಪಾರ್ಕ್​ ಅಹ್​ ಯಿಯೋಂಗ್​ ಹೇಳಿದ್ದಾರೆ. ಹೀಗಂದ ಮಾತ್ರಕ್ಕೆ ಉ.ಕೊರಿಯಾದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರ್ಥವಲ್ಲ. ಈಗಲೂ ಕೊಲ್ಲುವ ಶಿಕ್ಷೆಗಳು ಮುಂದುವರಿದಿದ್ದು, ಅದು ಸಾರ್ವಜನಿಕವಾಗಿ ಗೋಚವಾಗುತ್ತಿಲ್ಲ ಅಷ್ಟೇ ಎಂದು ಯಿಯೋಂಗ್​ ತಿಳಿಸಿದ್ದಾರೆ.

    ಇನ್ನು ರಾಷ್ಟ್ರದಲ್ಲಿ ಜೈಲು ಶಿಬಿರಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಉ. ಕೊರಿಯಾ ನಿರಾಕರಿಸಿದೆ. ಮಾನವ ಹಕ್ಕುಗಳ ಟೀಕೆಗಳನ್ನು ಬಳಸಿಕೊಂಡು ಪಾಶ್ಚಿಮಾತ್ಯ ರಾಷ್ಟ್ರಗಳು ತನ್ನ ವಿರುದ್ಧ ಪ್ರತಿಕೂಲ ನೀತಿಯನ್ನು ಅಭ್ಯಾಸ ಮಾಡುತ್ತಿವೆ ಎಂದು ಕೊರಿಯಾ ಆರೋಪಿಸಿದೆ. (ಏಜೆನ್ಸೀಸ್​)

    ಅಶ್ಲೀಲ ವೆಬ್​ಸೈಟ್​ ಓನ್ಲಿಫ್ಯಾನ್ಸ್​ನ ಸಿಇಒ ಆಗಿ ಮುಂಬೈ ಮೂಲದ ಅಮ್ರಪಲಿ ಗ್ಯಾನ್​ ನೇಮಕ!

    ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಕೇರಳ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆ!

    ಇನ್ಮುಂದೆ ಕಡಿಮೆ ವಯಸ್ಸಿನವರೂ ಮದ್ಯ ಸೇವಿಸ್ಬೋದು: ಕಾನೂನಿಗೆ ತಿದ್ದುಪಡಿ ಮಾಡಿದ ಹರಿಯಾಣ ಸರ್ಕಾರ

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts