More

    ಮತ್ತೆ ಸದ್ದು ಮಾಡಿದ ಕಿಮ್​: ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಡ್ರೋನ್ ಪರೀಕ್ಷೆ!

    ಸಿಯೋಲ್: ಕ್ಷಿಪಣಿ ಉಡಾವಣೆಯೊಂದಿಗೆ ಆಗಾಗ್ಗೆ ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗುವ ಉತ್ತರ ಕೊರಿಯಾ, ಇತ್ತೀಚೆಗೆ ಮತ್ತೊಂದು ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಪರೀಕ್ಷಿಸಿದೆ. ಜಲಾಂತರ್ಗಾಮಿ ಡ್ರೋನ್‌ನ ಪರಮಾಣು ದಾಳಿ ಸಾಮರ್ಥ್ಯವನ್ನು ಪರೀಕ್ಷಿಸಿದ್ದು, ಮತ್ತೊಮ್ಮೆ ಕಿಮ್​ ಸರ್ಕಾರ ಸದ್ದು ಮಾಡಿದೆ.

    ಇದನ್ನೂ ಓದಿ: ಹೌತಿ ಬಂಡುಕೋರರ ವಿರುದ್ಧ ಅಮೆರಿಕಾ ಪ್ರತೀಕಾರ: ಭಾರತೀಯ ನೌಕಾಪಡೆ ಗಸ್ತು!

    ಅಮೆರಿಕ ಮತ್ತು ಜಪಾನ್‌ನ ಜಂಟಿ ನೌಕಾ ಸಮರಾಭ್ಯಾಸಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯಾದ ಕಿಮ್ ಸರ್ಕಾರವು ಉಡಾವಣೆಯನ್ನು ನಡೆಸಿತು. ಇದರೊಂದಿಗೆ ಕೊರಿಯಾ ಪರ್ಯಾಯ ದ್ವೀಪದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ತಮ್ಮ ದೇಶದ ಪೂರ್ವ ಕರಾವಳಿಯ ನೀರಿನಲ್ಲಿ ಶುಕ್ರವಾರ ಮುಂಜಾನೆ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಉತ್ತರ ಕೊರಿಯಾದ ಮಿಲಿಟರಿ ಬಹಿರಂಗಪಡಿಸಿದೆ. ನಾವು ಪರಮಾಣು ಸಾಮರ್ಥ್ಯದ ನೀರೊಳಗಿನ ಡ್ರೋನ್ ಅನ್ನು ಪರೀಕ್ಷಿಸಿದ್ದೇವೆ. ಇದು ನೀರಿನ ಆಳದಲ್ಲಿ ಶತ್ರುಗಳ ಚಲನವಲನ ಮತ್ತು ದಾಳಿಯನ್ನು ಪತ್ತೆ ಮಾಡುತ್ತದೆ. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳ ನೌಕಾ ಕುಶಲತೆಯನ್ನು ಪ್ರತಿಬಂಧಿಸಲು ನಾವು ಇಂತಹ ಪರೀಕ್ಷೆ ನಡೆಸುವುದು ಅನಿವಾರ್ವವಾಗಿದೆ ಎಂದು ಕಿಮ್ ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿದೆ.

    ಪರಮಾಣು ಸಾಮರ್ಥ್ಯದ ನೀರೊಳಗಿನ ಡ್ರೋನ್‌ಗಳು ಶತ್ರು ಹಡಗುಗಳು ಮತ್ತು ಬಂದರುಗಳನ್ನು ಗುರಿಯಾಗಿಸಬಹುದಾಗಿದೆ. ಈ ಡ್ರೋನ್‌ಗಳನ್ನು ತೀರದಿಂದಲೂ ಉಡಾವಣೆ ಮಾಡಬಹುದು ಎಂದು ಕಿಮ್​ ಮಿಲಿಟರಿ ಹೇಳಿಕೊಂಡಿದೆ. ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ಅವರ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಕಡಿಮೆ ಸಾಮರ್ಥ್ಯ ಹೊಂದಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

    ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಶಸ್ತ್ರಾಸ್ತ್ರ ಪರೀಕ್ಷೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕೊರಿಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಇತ್ತೀಚಿನ ಘೋಷಣೆ ಮತ್ತಷ್ಟು ಕೆರಳಿಸಿದೆ. ಉಭಯ ಕೊರಿಯಾಗಳ ನಡುವೆ ಪುನರೇಕೀಕರಣ ಅಸಾಧ್ಯ ಎಂದಿರುವ ಕಿಮ್, ದಕ್ಷಿಣ ಕೊರಿಯಾ ಗಡಿಯಲ್ಲಿ ಸೂಜಿ ತುದಿಯಷ್ಟು ಜಾಗವನ್ನು ಆಕ್ರಮಿಸಿಕೊಂಡರೂ ಯುದ್ಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಆಸೀಸ್​ಗೆ ಅಗ್ರಸ್ಥಾನ: ಭಾರತಕ್ಕೆ ಯಾವಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts