More

    ಒಂದೇ ವ್ಯಕ್ತಿಯ ಕಿಡ್ನಿಯಲ್ಲಿ 156 ಕಲ್ಲುಗಳ​ನ್ನು ಹೊರತೆಗೆದ ವೈದ್ಯರು: ದೇಶದಲ್ಲೇ ಇದು ಮೊದಲು!

    ಹೈದರಾಬಾದ್​: ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳಿರುವುದನ್ನು ನೋಡಿದ್ದೇವೆ. ಆದರೆ, ಹೈದರಾಬಾದ್​ ವೈದ್ಯರು ವ್ಯಕ್ತಿಯೊಬ್ಬನ ಕಿಡ್ನಿಯಲ್ಲಿ ಬರೋಬ್ಬರಿ 156 ಕಲ್ಲುಗಳನ್ನು ತೆಗೆದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

    50 ವರ್ಷದ ಸಂತ್ರಸ್ತನ ಕಿಡ್ನಿಯಿಂದ ಕಲ್ಲುಗಳನ್ನು ತೆಗೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿಡ್ನಿಯಲ್ಲಿ ಸೇರಿಕೊಂಡಿದ್ದ ಕಲ್ಲುಗಳನ್ನು ತೆಗೆಯಲು ವೈದ್ಯರು ಎಂಡೋಸ್ಕೋಪಿ ಮತ್ತು ಲ್ಯಾಪ್ರೋಸ್ಕೊಪಿ ವಿಧಾನವನ್ನು ಅನುಸರಿಸಿದ್ದಾರೆ. ಅಂದಹಾಗೆ ಲ್ಯಾಪ್ರೋಸ್ಕೋಪಿ ಎನ್ನುವುದು ಕ್ಯಾಮೆರಾದ ಸಹಾಯದಿಂದ ಸಣ್ಣ ಛೇದನವನ್ನು ಬಳಸಿಕೊಂಡು ಹೊಟ್ಟೆ ಅಥವಾ ಮೂತ್ರಪಿಂಡದ ಕುಳಿಯಲ್ಲಿ ಮಾಡುವ ಒಂದು ಕಾರ್ಯಾಚರಣೆಯಾಗಿದೆ. ಹಾಗೇ ಎಂಡೋಸ್ಕೋಪಿ ಎನ್ನುವುದು ದೇಹದ ಒಳಭಾಗವನ್ನು ನೋಡಲು ವೈದ್ಯಕೀಯದಲ್ಲಿ ಬಳಸುವ ಒಂದು ವಿಧಾನವಾಗಿದೆ.

    ಕಲ್ಲುಗಳನ್ನು ತೆಗೆಯಲು ವೈದ್ಯರು ಸುಮಾರು 3 ಗಂಟೆಗಳ ಕಾಲ ಆಪರೇಷನ್​ ಮಾಡಿದ್ದಾರೆ. ಕಿಡ್ನಿಯಲ್ಲಿದ್ದ ಎಲ್ಲ ಕಲ್ಲುಗಳನ್ನು ತೆಗೆದ ಬಳಿಕ ಸಂತ್ರಸ್ತ ತುಂಬಾ ಚೇತರಿಸಿಕೊಂಡಿದ್ದಾರೆ. ಒಂದೇ ವ್ಯಕ್ತಿಯಲ್ಲಿ 100ಕ್ಕೂ ಹೆಚ್ಚು ಕಿಡ್ನಿ ಸ್ಟೋನ್​ಗಳನ್ನು ತೆಗೆದಿರುವುದು ದೇಶದಲ್ಲೇ ಇದೇ ಮೊದಲು ಎಂದು ವೈದ್ಯರು ಮಾಹಿತಿ ನೀಡಿದರು.

    ಸಂತ್ರಸ್ತ ವ್ಯಕ್ತಿಯು ಕರ್ನಾಟಕದ ಹುಬ್ಬಳ್ಳಿ ಮೂಲದವರು. ಅವರು ಹೆಸರು ಬಸವರಾಜ್​ ಮಡಿವಾಳರ್​. ತುಂಬಾ ದಿನಗಳಿಂದ ಕೆಳಹೊಟ್ಟೆಯ ನೋವಿನಿಂದ ಬಳಲುತ್ತಿದ್ದರು. ಸ್ಕ್ಯಾನ್​ ಮಾಡಿ ನೋಡಿದಾಗ ಕಿಡ್ನಿಯಲ್ಲಿ ದೊಡ್ಡ ಕಲ್ಲುಗಳಿರುವುದು ಕಂಡುಬಂದಿತ್ತು. ಅವರ ಮೂತ್ರ ವಿಸರ್ಜನಾ ನಾಳ ಸಹ ಸ್ಥಿತಿಯಲ್ಲಿ ಇರದಿದ್ದರಿಂದ ಸರ್ಜರಿ ಮಾಡುವುದು ಅಸಾಧ್ಯವಾಗಿತ್ತು. ಅಲ್ಲದೆ, ಹೊಟ್ಟೆಯ ಬಳಿ ಮೂತ್ರಪಿಂಡವೂ ಅಸಹಜ ಸ್ಥಿತಿಯಲ್ಲಿ ಇರುವುದನ್ನು ಎಂದು ವೈದ್ಯರು ಕಂಡುಕೊಂಡರು. ಹೀಗಾಗಿ ಸಹಜ ಕಿಡ್ನಿ ಆಪರೇಷನ್​ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿ ಲ್ಯಾಪ್ರೋಸ್ಕೊಪಿ ಚಿಕಿತ್ಸೆ ಆಯ್ದುಕೊಳ್ಳಬೇಕಾಯಿತು ಎಂದು ಆಸ್ಪತ್ರೆಯ ಯೂರೋಲಜಿಸ್ಟ್​ ಮತ್ತು ಮ್ಯಾನೇಜಿಂಗ್​ ಡೈರೆಕ್ಟರ್​ ಡಾ.ವಿ ಚಂದ್ರಮೋಹನ್​ ಹೇಳಿದ್ದಾರೆ. (ಏಜೆನ್ಸೀಸ್​)

    ವಧು ವಯೋಮಿತಿ @21: ವಿವಾಹ ವಯಸ್ಸಲ್ಲಿ ಸ್ತ್ರೀ-ಪುರುಷ ಸಮಾನತೆಗೆ ಕೇಂದ್ರ ಅಸ್ತು

    ವುಹಾನಿಂದ ಕರೊನಾ ಲೀಕ್!; ವೈರಸ್ ನೈಸರ್ಗಿಕ ಎಂಬುದಕ್ಕೆ ಪುರಾವೆ ಇಲ್ಲ ಎಂದ ತಜ್ಞರು

    ವಿರಾಟ್​ ಕೊಹ್ಲಿ ವಿರುದ್ಧ ಬಿಸಿಸಿಐ ಶಿಸ್ತುಕ್ರಮ? ಟೆಸ್ಟ್ ನಾಯಕತ್ವವೂ ಕೈಜಾರುತ್ತಾ?

    ಆಧಾರ್-ವೋಟರ್ ಐಡಿ ಜೋಡಣೆ ಪ್ರಕ್ರಿಯೆ ಹೇಗೆ?; ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts