ವಧು ವಯೋಮಿತಿ @21: ವಿವಾಹ ವಯಸ್ಸಲ್ಲಿ ಸ್ತ್ರೀ-ಪುರುಷ ಸಮಾನತೆಗೆ ಕೇಂದ್ರ ಅಸ್ತು

ನವದೆಹಲಿ: ಪುರುಷರ ವಿವಾಹ ವಯಸ್ಸಿಗೆ ಸರಿಸಮವಾಗಿ ಮಹಿಳೆಯರ ವಿವಾಹ ವಯಸ್ಸನ್ನೂ ಹೊಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಇದರನ್ವಯ, ಮಹಿಳೆಯರ ವಿವಾಹದ ಕನಿಷ್ಠ ವಯೋಮಿತಿಯನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ. ಹಾಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ. ಈ ಉದ್ದೇಶಕ್ಕಾಗಿ ಬಾಲ್ಯ ವಿವಾಹ ಕಾಯ್ದೆ 2006ಕ್ಕೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿರುವುದಾಗಿ ಮೂಲಗಳು ತಿಳಿಸಿವೆ. ಪ್ರಸ್ತಾವಿತ ಮಸೂದೆಯಲ್ಲಿ ಮಹಿಳೆಯರ ವಿವಾಹ ವಯಸ್ಸಿಗೆ ಸಂಬಂಧಿಸಿ … Continue reading ವಧು ವಯೋಮಿತಿ @21: ವಿವಾಹ ವಯಸ್ಸಲ್ಲಿ ಸ್ತ್ರೀ-ಪುರುಷ ಸಮಾನತೆಗೆ ಕೇಂದ್ರ ಅಸ್ತು